Karnataka Times
Trending Stories, Viral News, Gossips & Everything in Kannada

Coconut Plantation: ತೆಂಗಿನ ತೋಟಕ್ಕೆ ಹೀಗೆ ಮಾಡಿದರೆ 1 ಮರದಲ್ಲಿ 300 ಕಾಯಿ ಗ್ಯಾರಂಟಿ! ಸಿಂಪಲ್ ವಿಧಾನ

advertisement

ಕಲ್ಪವೃಕ್ಷ ಹೀಗೆಂದಾಗ ಕೆಲವರಿಗೆ ಇದು ಯಾವ ಮರ ಎಂದು ಅನುಮಾನ ಬರುವುದು ಇದೆ. ಕಲ್ಪ ವೃಕ್ಷ ಎಂದರೆ ತೆಂಗಿನ ಮರವಾಗಿದ್ದು ಇಂದು ದೈನಿಕ ಬದುಕಿನಲ್ಲಿ ರುಚಿಯಾದ ಅಡುಗೆ, ಸ್ವೀಟ್ ನಿಂದ ಹಿಡಿದು ಎಳನೀರು, ಗರಟೆ, ನಾರು ಎಲ್ಲ ಕೂಡ ತೆಂಗಿನ ಮರದಿಂದ ಸಿಗುವ ಉಪಯುಕ್ತ ಆಗಿದೆ. ಇದನ್ನೇ ಉದ್ಯಮ ಮಡಿಕೊಂಡು ಬದುಕುವ ವರ್ಗ ಒಂದು ಕಡೆಯಾದರೆ ಎಳನೀರು ಮತ್ತು ತೆಂಗಿನ ಕಾಯಿ ಪೂರೈಕೆ ಮಾಡಿ ಬದುಕು ಕಟ್ಟಿಕೊಂಡವರು ಮತ್ತೊಂದು ವರ್ಗ ಎನ್ನಬಹುದು.

ಆದರೆ ಇತ್ತೀಚಿನ ದಿನದಲ್ಲಿ ಕೃಷಿಕರು ತಮ್ಮ ಕೃಷಿ (Coconut Plantation) ವಿಧಾನದಲ್ಲಿ ಸರಿಯಾದ ಕ್ರಮ ಅನುಸರಿಸದೇ ತೆಂಗಿನ ಕೃಷಿ (Coconut Plantation) ಯಲ್ಲಿ ಸಾಕಷ್ಟು ರೀತಿಯ ತೊಂದರೆ ಉಂಟಾಗುತ್ತಿದೆ ಎಂದು ಹೇಳಬಹುದು. ಒಂದೆ ಮರದಿಂದ 300 ಕ್ಕೂ ಅಧಿಕ ತೆಂಗಿನ ಫಸಲು ಪಡೆಯಲು ನಾವಿಂದು ನಿಮಗೆ ಸುಲಭ ಮಾರ್ಗ ತಿಳಿಸಿಕೊಡಲಿದ್ದೇವೆ. ಹಾಗಾಗಿ ಈ ಮಾಹಿತಿ ತಪ್ಪದೇ ಪೂರ್ತಿಯಾಗಿ ಓದಿ.

ಇಳುವರಿ ಕಡಿಮೆ?

ಪ್ರಸ್ತುತ ತೆಂಗಿನ ಸಸಿಯಲ್ಲಿ ಇಳುವರಿ ಬರುವ ಪ್ರಮಾಣ ಕಡಿಮೆ ಆಗಿದೆ. ಅದಕ್ಕೆ ಮುಖ್ಯ ಕಾರಣ ಅನೇಕ ಮುಂಜಾಗ್ರತಾ ಕ್ರಮ ವಹಿಸದೇ ಇರುವುದು ಎಂದು ಹೇಳಬಹುದು. ಒಂದು ಮರದಲ್ಲಿ 70-80ಕಾಯಿ ಸಿಕ್ಕರೆ ಅದು ಲಾಭಕ್ಕಿಂತ ನಷ್ಟವೇ ಅಧಿಕ ಎನ್ನಬಹುದು. ಹಾಗಾಗಿ ಇಳುವರಿ ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ನಿಗಾ ವಹಿಸಬೇಕು ನಾವಿಂದು ಹೇಳುವ ಸರಳ ಮಾರ್ಗ ನೀವು ಅನುಸರಿಸಿದರೆ ಒಂದು ಮರದ ಮೇಲೆ 300 ಕಾಯಿ ಯಂತೆ ಲಾಭ ಸಿಗಲಿದೆ.

ಈ ಮಾರ್ಗ ಅನುಸರಿಸಿ

 

advertisement

Image Source: Depositphotos

 

  • ತೆಂಗಿನ ಮರದ ತ್ಯಾಜ್ಯ ಅಂದರೆ ಗರಿ, ಗರಟೆ ಇತರ ಕಸವನ್ನು ಸುಡಬಾರದು ಬದಲಾಗಿ ಬುಡದ ಸುತ್ತ ಅದನ್ನು ಹರಡಬೇಕು.
  • ತೆಂಗಿನ ಮರದ ಪೂರ್ವ ಹಾಗೂ ಪಶ್ಚಿಮಾಭಿಮುಖವಾಗಿ ಎರಡು ಗೊಬ್ಬರದ ಗಿಡ ಹಾಕಬೇಕು.
  • ಈ ಗೊಬ್ಬರದ ಸೊಪ್ಪುಗಳು ಮಣ್ಣಿನ ಸ್ಥಿರೀಕರಣ ಮಾಡಲಿದೆ. ವಾರ್ಷಿಕವಾಗಿ ಗೊಬ್ಬರದ ಗಿಡವನ್ನು ಎರಡರಿಂದ ಮೂರು ಸಲ ಕಟಾವು ಮಾಡಿ ತೆಂಗಿನ ಮರದ ಬುಡಕ್ಕೆ ಹಾಕಬೇಕು.
  • ಗೊಬ್ಬರದ ಗಿಡ ಮತ್ತು ತೆಂಗಿನ ತ್ಯಾಜ್ಯದಿಂದಾಗಿ ಸೂಕ್ಷ್ಮಾಣು ಜೀವಿಗಳು ಮತ್ತು ಎರೆಹುಳು ಉತ್ಪತ್ತಿ ಆಗಲಿದೆ.

ನೀರಿನ ಅವಲಂಬನೆ ಕಮ್ಮಿ ಆಗಲಿದೆ?

 

Image Source: Gingerhill Farm Retreat

 

ಈ ಮೇಲಿನ ಸರಳ ಕ್ರಮ ನೀವು ಅನುಸರಿಸಿದರೆ ನೀರು ಕಡಿಮೆ ಪ್ರಮಾಣದಲ್ಲಿ ಸಾಕಾಗಲಿದೆ. ಹಾಗಾಗಿ ಒಂದು ಮರದಲ್ಲಿ 300 ಕಾಯಿಯಂತೆ ಇಳುವರಿ ಪಡೆಯಬಹುದು. ಬೇಸಿಗೆ ಕಾಲಕ್ಕೆ ನೀರಿನ ಸಮಸ್ಯೆ ಆಗುತ್ತಿದೆ ಅನ್ನೋರು ಈ ಮಾರ್ಗ ಅನುಸರಿಸಿದರೆ ಬಹಳ ಉತ್ತಮ ಇಳುವರಿ ಕೂಡ ಸಿಗಲಿದೆ.

advertisement

Leave A Reply

Your email address will not be published.