Karnataka Times
Trending Stories, Viral News, Gossips & Everything in Kannada

Survey Number: ಬೇರೆ ಬೇರೆ ಸರ್ವೇ ನಂಬರ್ ಗಳಲ್ಲಿ ಭೂಮಿ ಇರುವ ರೈತರು ಈ ಕೆಲಸ ಮಾಡಲೇಬೇಕು! ಹೊಸ ರೂಲ್ಸ್

advertisement

ರೈತರನ್ನು ಗುರಿಯಾಗಿಸಿಕೊಂಡು ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಲೇ ಬಂದಿದೆ.ಅದರಲ್ಲೂ ಕೃಷಿಯಲ್ಲಿ ಹೆಚ್ಚು ಇಳುವರಿಯನ್ನು ಕಾಣಲು ರೈತರಿಗೆ ತರಭೇತಿ, ವಿವಿಧ ಯಂತ್ರೋಪಕರಣದ ಬಳಕೆ ಇತ್ಯಾದಿ ಗಳ ಬಗ್ಗೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಹಾಗೆಯೇ ಸರಕಾರದಿಂದ ಯಾವುದೇ ಸೌಲಭ್ಯ ಸಿಗಬೇಕಾದ್ರೂ ಕೆಲವೊಂದು ದಾಖಲೆ ಗಳು ಕೂಡ ಕಡ್ಡಾಯ ವಾಗಿದ್ದು ಕೃಷಿ ಗೆ ಸಂಬಂಧಿಸಿದ ದಾಖಲೆ ಇದ್ದರೆ ಮಾತ್ರ ಸರಕಾರದ ಸೌಲಭ್ಯ ಸಿಗಲಿದೆ.

ಆಧಾರ್ ಜೋಡಣೆ ಕಡ್ಡಾಯ:

ಇಂದು ಆಧಾರ್ ಕಾರ್ಡ್ (Aadhaar Card) ಅನ್ನೋದು ಪ್ರತಿಯೊಂದಕ್ಕು ಮುಖ್ಯವಾದ ದಾಖಲೆ ಯಾಗಿದ್ದು ಸರಕಾರದ ಯಾವುದೆ ಸೌಲಭ್ಯ ಪಡೆಯುದಾದ್ರು, ಯಾವುದೇ ನೋಂದಣಿ ಮಾಡುದಾದ್ರೂ ಈ ಆಧಾರ್ ಕಾರ್ಡ್ ಬಹಳ ಮುಖ್ಯ ವಾಗಿದೆ. ಇದನ್ನು ಇಂದು ರೇಷನ್ ಕಾರ್ಡ್ (Ration Card), ಪ್ಯಾನ್ ಕಾರ್ಡ್ (PAN Card), ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಸಹ ಕಡ್ಡಾಯವಾಗಿದೆ.‌ ಅದೇ ರೀತಿ ರೈತರು ತಮ್ಮ‌ಪಹಣಿ (Pahani) ಗೂ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ.

 

Image Source: News Nation

 

advertisement

ಕಂದಾಯ ಇಲಾಖೆಯಿಂದ ಮಾಹಿತಿ:

ಕಂದಾಯ ಇಲಾಖೆಯಿಂದ ರೈತರಿಗಾಗಿ ಈ ಮಾಹಿತಿ ಬಂದಿದ್ದು ನನ್ನ ಆಧಾರ್ ನೊಂದಿಗೆ ನನ್ನ ಆಸ್ತಿ ಸುಭದ್ರ ಯೋಜನೆ ಯಡಿ ಪಹಣಿ ಜತೆ ಪೋಟೋ, ಆಧಾರ್ ಜೋಡಣೆ ಕಡ್ಡಾಯ ಎನ್ನುವ ಸೂಚನೆ ಯನ್ನು ನೀಡಿದೆ. ರೈತರ ಭೂ ದಾಖಲೆಗಳ‌ ಮಾಹಿತಿ ಸುಲಭವಾಗಿ ತಿಳಿಯುವಂತೆ ಮಾಡಲು ಮತ್ತು ಭೂ ವಂಚನೆಗಳನ್ನು ತಡೆಯುವ ನಿಟ್ಟಿನಲ್ಲಿ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಲಾಗಿದೆ.

ನೊಂದಣಿ ಆರಂಭ:

ಇದುವರೆಗೆ ಸುಮಾರು 15 ಲಕ್ಷ ಆಧಾರ್ (Aadhaar Card) ಜೋಡಣೆ ಪೂರ್ಣ ಮಾಡಲಾಗಿದ್ದು ಈಗ ಪ್ರತಿ ಗ್ರಾಮ ಆಡಳಿತ ಅಧಿಕಾರಿಗೆ ವಾರಕ್ಕೆ 250 ರೈತರ ನೋಂದಣಿ ಗುರಿ ನಿಗದಿ ಮಾಡಲಾಗಿದೆ. ನೊಂದಣಿ ಸಂದರ್ಭದಲ್ಲಿ ಪಹಣಿಯಲ್ಲಿ ಜಮೀನು ಮಾಲೀಕರ ಮಾಹಿತಿ, ಪ್ರದೇಶ, ಭೂಮಿಯ ಸ್ವರೂಪ, ಬೆಳೆ ಮೊದಲಾದ ಮಾಹಿತಿ ಇರಲಿದ್ದು ಆಧಾರ್ ಸಂಖ್ಯೆ ಕೂಡ ನಮೂದಿಸಲಾಗಿರುತ್ತದೆ.ಇದರ ಜೊತೆ ಜಮೀನು ಮಾಲೀಕರ ಫೋಟೋದೊಂದಿಗೆ ಪಹಣಿಗೆ ಆಧಾರ್ ಜೋಡಣೆಯನ್ನು ಕಡ್ಡಾಯ ಮಾಡಲಾಗಿದೆ.

advertisement

Leave A Reply

Your email address will not be published.