Karnataka Times
Trending Stories, Viral News, Gossips & Everything in Kannada

Google Chrome: ಗೂಗಲ್‌ ಕ್ರೋಮ್ ಬಳಕೆದಾರರಿಗೆ ಕೇಂದ್ರ ಸರ್ಕಾರದಿಂದ ಈ ಸೂಚನೆ! ಕಡ್ಡಾಯವಾಗಿ ಈ ಕೆಲಸ ಮಾಡಿ

advertisement

ಇಂದು ಮೊಬೈಲ್ ಬಳಕೆ ಹೆಚ್ಚಾದಂತೆ ಮೋಸ ವಂಚನೆಗಳ ಪ್ರಕರಣಗಳು ಕೂಡ ಬಹಳಷ್ಟು ಹೆಚ್ಚಾಗಿದೆ.ಈಗಾಗಲೇ ಈ ಡಿಜಿಟಲಿಕರಣದಿಂದಾಗಿ ಮೋಸ ಹೋದ ಜನಗಳು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲೂ ಸೈಬರ್‌ ಬೆದರಿಕೆಗಳು ಡಿಜಿಟಲ್‌ ಯುಗದಲ್ಲಿ ಬಹಳಷ್ಟು ಹೆಚ್ಚಾಗಿದ್ದು ಈ ಬಗ್ಗೆ ಎಷ್ಟು ಜಾಗೃತ ವಹಿಸಿದರೂ ತೊಂದರೆ ಉಂಟಾಗುತ್ತಲೆ ಇದೆ. ಇದೀಗ ಕ್ರೋಮ್ (Google Chrome) ಬಳಕೆದಾರರಿಗೆ ಕೇಂದ್ರ ಸರಕಾರ ಈ ಮಾಹಿತಿ ನೀಡಿದೆ.

ನವೀಕರಣ ಮಾಡಬೇಕು:

ಮೊಬೈಲ್ ಬಳಕೆದಾರರು ಇಂದು ವ್ಯಾಪಕವಾಗಿ ಬಳಸುವ ವೆಬ್ ಬ್ರೌಸರ್‌ಗಳಲ್ಲಿ ಕ್ರೋಮ್ (Google Chrome) ಕೂಡ ಒಂದಾಗಿದ್ದು ಈ ಕ್ರೋಮ್ ಬ್ರೌಸರ್ ಬಳಕೆದಾರರಿಗೆ ಹಲವಾರು ಬೇಕಾದ ಫೀಚರ್ಸ್‌ಗಳನ್ನು ಗ್ರಾಹಕರಿಗೆ ನೀಡುತ್ತಾ ಬರುತ್ತಿದೆ. ಇದೀಗ ಭದ್ರತಾ ನವೀಕರಣವನ್ನು ಸಕ್ರಿಯಗೊಳಿಸಲು ಕ್ರೋಮ್ ಬಳಕೆದಾರರು ಇದೀಗ ತಮ್ಮ ಬ್ರೌಸರ್ ಅನ್ನು ನವೀಕರಣ ಮಾಡಬೇಕು ಎಂದಿದೆ.

ಎಚ್ಚರಿಕೆ ನೀಡಿದೆ:

 

Image Source: Forbes

 

advertisement

ಇದೀಗ ಸೈಬರ್ ಸೆಕ್ಯುರಿಟಿ ಏಜೆನ್ಸಿ ಸಿಇಆರ್ಟಿ-ಇನ್ ಗೂಗಲ್ ಕ್ರೋಮ್ (Google Chrome) ಡೆಸ್ಕ್ಟಾಪ್ ಆವೃತ್ತಿಯ ಬಗ್ಗೆ ಗ್ರಾಹಕರಿಗೆ ಎಚ್ಚರಿಕೆಯ ಮಾಹಿತಿ ನೀಡಿದ್ದು ಗೂಗಲ್ ಕ್ರೋಮ್ ಅನ್ನು ಹ್ಯಾಕ್ ಮಾಡಿ ಬಳಸಿಕೊಳ್ಳುವ ಅನೇಕ ದುರ್ಬಲತೆಗಳ ಬಗ್ಗೆ ಎಚ್ಚರಿಕೆಯನ್ನು ನೀಡಿದೆ. ಬಳಕೆದಾರರು ಇಂತಹ ಅನಾಹುತ ಗಳನ್ನು ತಪ್ಪಿಸಲು ತಮ್ಮ ಬ್ರೌಸರ್ ಗಳನ್ನು ತಕ್ಷಣವೇ ನವೀಕರಣ ಮಾಡುವುದು ಬಹಳ ಮುಖ್ಯವಾಗಿದೆ.

ಸಮಸ್ಯೆ ಉಂಟಾಗಬಹುದು:

ಇಂದು ಸೈಬರ್‌ ಬೆದರಿಕೆಗಳು ಹೆಚ್ಚಾಗಿದ್ದು ವೈಯಕ್ತಿಕ ಮಾಹಿತಿಗಳನ್ನು ಪಡೆದು ಹ್ಯಾಕ್ ಮಾಡುವ ಖದೀಮರು ಹೆಚ್ಚಾಗಿದ್ದಾರೆ.ಇದು ಮುಂದಕ್ಕೆ ಅಪಾಯ ಗಳನ್ನು ತಂದೊಡ್ಡಬಹುದು.ಫಿಶಿಂಗ್‌ ದಾಳಿಗಳು, ಡೇಟಾ ಉಲ್ಲಂಘನೆಗಳು ಮತ್ತು ಮಾಲ್‌ವೇರ್‌ ವೈರಸ್‌ಗಳ ಬಗ್ಗೆ ಗೂಗಲ್‌ ಕ್ರೋಮ್‌ ಬ್ರೌಸರ್‌ ಗ್ರಾಹಕರು ಎಚ್ಚರದಿಂದ ಇರಬೇಕು ಎಂದಿದೆ.

ಹೀಗೆ ಮಾಡಿ:

 

Image Source: MakeUseOf

 

ಮೊದಲು ನಿಮ್ಮ ಡೆಸ್ಕ್ ಟಾಪ್ ನಲ್ಲಿ ಗೂಗಲ್‌ ಕ್ರೋಮ್ ಓಪನ್ ಮಾಡಿ. ಬಳಿಕ ಡಿಸ್‌ಪ್ಲೇ ಮೇಲಿನ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ಮೆನು ವಿನಲ್ಲಿ ಹೆಲ್ಪ್ ಆಯ್ಕೆಯನ್ನು ಆರಿಸಿ.
ಹೆಲ್ಪ್ ವಿಭಾಗದಲ್ಲಿ About ಗೂಗಲ್‌ ಕ್ರೋಮ್‌’ ಎಂಬ ಆಯ್ಕೆ ಇರಲಿದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಕ್ರೋಮ್‌ ಆವೃತ್ತಿ ಮಾಹಿತಿ ನಿಮಗೆ ವೆಬ್‌ಪುಟದಲ್ಲಿ ಕಾಣಸಿಗಲಿದೆ. ಇದಾದ ಬಳಿಕ ಕ್ರೋಮ್‌ ಅವೃತ್ತಿ ಹಳೆಯ ವರ್ಷನ್ ಆಗಿದ್ದರೆ ನೀವು ಇತ್ತೀಚಿನ ಕ್ರೋಮ್‌ ಪಡೆಯಲು ಅಪ್‌ಡೇಟ್‌ ಗೂಗಲ್‌ ಕ್ರೋಮ್‌ (Google Chrome) ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಹೀಗೆ ಆಪ್ಡೆಟ್ ಮಾಡಿ.

advertisement

Leave A Reply

Your email address will not be published.