Karnataka Times
Trending Stories, Viral News, Gossips & Everything in Kannada

Google Earnings: ಗೂಗಲ್ ಒಂದು ಸೆಕೆಂಡಿಗೆ ಎಷ್ಟು ಹಣವನ್ನು ಸಂಪಾದಿಸುತ್ತೆ ಗೊತ್ತಾ? ತಿಳಿದ್ರೆ ನಿಮಗೆ ತಲೆ ತಿರುಗುವುದು ಗ್ಯಾರಂಟಿ!

advertisement

ಇಂದು ನಾವು ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕು ಅಂದ್ರೆ ಯಾರನ್ನೂ ಕೇಳುವುದಕ್ಕೆ ಹೋಗುವುದಿಲ್ಲ ಅಥವಾ ನಮ್ಮ ಬುದ್ಧಿಯನ್ನು ಉಪಯೋಗಿಸುವುದಿಲ್ಲ. ನಾವು ಡಿಪೆಂಡ್ ಆಗಿರುವುದು ಕೇವಲ ಗೂಗಲ್ ಮೇಲೆ! ವಿಶ್ವದ ಅತಿ ದೊಡ್ಡ ಹುಡುಕಾಟ ವೇದಿಕೆ ಗೂಗಲ್ (Google) ಆಗಿದೆ. ಜನರು ಹುಡುಕಾಡದೆ ಇರುವ ಪ್ರಶ್ನೆಗಳಿಲ್ಲ. ಸಿಗದೇ ಇರುವ ಉತ್ತರಗಳು ಇಲ್ಲ. ಒಂದು ಪ್ರಶ್ನೆ ಕೇಳಿದ್ರೆ 100 ಉತ್ತರ ಕೊಡುತ್ತೆ ಗೂಗಲ್.

ಗೂಗಲ್ ನಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ ಕೂಡ ತಿಂಗಳಿಗೆ ಲಕ್ಷ ಅಲ್ಲ ಕೋಟಿಗಟ್ಟಲೆ ಸಂಬಳ ಕೊಡುತ್ತಾರೆ ಅನ್ನೋದು ನಿಮಗೆ ಗೊತ್ತಾ? ಗೂಗಲ್ ನ ಸಂಬಳ ಗೂಗಲ್ ನ ಬಗ್ಗೆ ಇಂಟರೆಸ್ಟಿಂಗ್ ವಿಚಾರಗಳನ್ನು ನಾವು ಇಂದು ತಿಳಿದುಕೊಳ್ಳೋಣ.

ಗ್ರಾಹಕರಿಗೆ ಹಲವು ಸೌಲಭ್ಯ ಒದಗಿಸುತ್ತೆ ಗೂಗಲ್!

ಆನ್ಲೈನ್ ಸೌಲಭ್ಯಗಳನ್ನು ಒದಗಿಸುವ ಒಂದು ತಂತ್ರಜ್ಞಾನ ಕಂಪನಿಯಾಗಿ ಗೂಗಲ್ (Google) ಇಂದು ಬೆಳೆದು ನಿಂತಿದೆ ಇಂದು ನಮ್ಮ ಅದೆಷ್ಟೋ ಕೆಲಸವನ್ನು ಗೂಗಲ್ ಅತೀ ಕಡಿಮೆ ವೆಚ್ಚದಲ್ಲಿ ಮಾಡಿಕೊಡುತ್ತದೆ. ಯಾವುದೇ ಸ್ಥಳಕ್ಕೆ ತಲುಪಬೇಕು ಅಂದ್ರು ಗೂಗಲ್ ಮ್ಯಾಪ್ ಬೇಕು, ಹಣ ಪಾವತಿ ಮಾಡುವುದಕ್ಕೆ ಜಿಪೇ ಬೇಕು, ಹೀಗೆ ನಮ್ಮ ಜೀವನದಲ್ಲಿ “ಗೂಗಲ್” ಎಂದು ಹಾಸು ಹೊಕ್ಕಾಗಿದೆ. ಹೀಗೆ ನಮಗೆ ಒಂದಲ್ಲ ಒಂದು ರೀತಿಯಲ್ಲಿ ಪ್ರತಿದಿನ ಸಹಾಯ ಮಾಡುವ ಈ ಗೂಗಲ್ ಎಷ್ಟು ಹಣ ಗಳಿಸುತ್ತದೆ ಗೊತ್ತಾ?

advertisement

ಪ್ರತಿ ಸೆಕೆಂಡ್ ಗೆ ಗೂಗಲ್ ನ ಗಳಿಕೆ ಎಷ್ಟು?

ಗೂಗಲ್ (Google) ಎನ್ನುವ ಕಂಪನಿಯ ಗಳಿಕೆಯನ್ನು ನಾವು ತಿಂಗಳ ಲೆಕ್ಕದಲ್ಲಿ ವರ್ಷದ ಲೆಕ್ಕದಲ್ಲಿ ಅಳೆಯಲು ಸಾಧ್ಯವಿಲ್ಲ. ಇದನ್ನು ಸೆಕೆಂಡ್ ಲೆಕ್ಕಗಳಲ್ಲಿಯೇ ಅಳೆಯಬೇಕು. ಒಂದು ಮಾಹಿತಿಯ ಪ್ರಕಾರ ಗೂಗಲ್ ಪ್ರತಿ ಸೆಕೆಂಡ್ ಗೆ ಸರಿ ಸುಮಾರು $20000 ಗಳಿಕೆ ಮಾಡುತ್ತದೆ ಅಂದ್ರೆ ಪ್ರತಿ ಸೆಕೆಂಡಿಗೆ ಭಾರತೀಯ ಹಣದ ಪ್ರಕಾರ 16 ಲಕ್ಷ ರೂಪಾಯಿ ಗಳಿಕೆ ಮಾಡುತ್ತದೆ. 2022ರಲ್ಲಿ ಗೂಗಲ್ನ ಗಳಿಗೆ ಒಟ್ಟು $279.18 ಬಿಲಿಯನ್ ಆಗಿತ್ತು ಅಂದರೆ ಪ್ರತಿದಿನ ಗೂಗಲ್ 1.73 ಬಿಲಿಯನ್ ಡಾಲರ್ ಗಳಿಕೆ ಮಾಡುತ್ತದೆ.

 

 

ಗೂಗಲ್ ಗೆ ಆದಾಯ ಎಲ್ಲಿಂದ ಬರುತ್ತದೆ ಅಂತ ನೀವು ಪ್ರಶ್ನೆ ಮಾಡುವುದಾದರೆ, ಸುಮಾರು 200ಕ್ಕೂ ಹೆಚ್ಚು ದೇಶಗಳಲ್ಲಿ ಗೂಗಲ್ ತನ್ನ ಸೇವೆಯನ್ನು ಒದಗಿಸುತ್ತಿದೆ. ಈ ಸೇವೆಗಳ ಮೂಲಕ ಬರುವ ಜಾಹೀರಾತುಗಳು ಗೂಗಲ್ನ ಮುಖ್ಯ ಆದಾಯದ ಮೂಲವಾಗಿದೆ. ಗ್ರಾಹಕರಿಗೆ ಅಗತ್ಯ ಇರುವ ಹಲವು ಸೇವೆಗಳನ್ನು ಪ್ರತಿದಿನ ಗೂಗಲ್ ಒದಗಿಸುತ್ತದೆ. ಅದರಲ್ಲೂ ಹೊಸ ಹೊಸ ನವೀಕರಣವನ್ನು ಕೂಡ ಗೂಗಲ್ ತರುತ್ತಿದ್ದು ಜನರ ಅಚ್ಚುಮೆಚ್ಚಿನ ಸರ್ಚ್ ಎಂಜಿನ್ ಆಗಿದೆ.

advertisement

Leave A Reply

Your email address will not be published.