Karnataka Times
Trending Stories, Viral News, Gossips & Everything in Kannada

Property Rule: ಹೆಣ್ಣು ಮಕ್ಕಳಿಗೆ ತಂದೆಯೆ ಆಸ್ತಿಯಲ್ಲಿ ಸಮಾನ ಪಾಲು ಇದೆಯೇ? ಯಾವಾಗ ಮಗಳಿಗೆ ಈ ಹಕ್ಕು ಸಿಗುತ್ತದೆ?

advertisement

ಇಂದಿನ ಆಧುನಿಕ ಯುಗದಲ್ಲಿ ಗಂಡು ಮತ್ತು ಹೆಣ್ಣು ಸಮಾನವಾಗಿ ಇದ್ದಾರೆ. ಇಬ್ಬರನ್ನೂ ಸಮಾನವಾಗಿ ಕಾಣಲಾಗುತ್ತದೆ. ಯಾರೂ ಯಾವ ವಿಷಯದಲ್ಲಿ ಕಮ್ಮಿ ಇಲ್ಲ ಯಾರೂ ಯಾವ ವಿಷಯದಲ್ಲಿ ಜಾಸ್ತಿ ಇಲ್ಲ ಎಂಬಂತೆ ಇರುತ್ತಾರೆ. ಗಂಡು ಹೆಣ್ಣಿನ ಕೆಲಸ ಮಾಡುವ ವಿಧಾನ, ಜವಾಬ್ದಾರಿ ತೆಗೆದುಕೊಳ್ಳುವ ಮಟ್ಟ ಇದೆಲ್ಲವೂ ಇಂದು ಸಮಾನವಾಗಿ ಇದೆ ಹಾಗೂ ಯಾರನ್ನೇ ಕೂಡ ತಾರತಮ್ಯ ಭಾವದಲ್ಲಿ ಇಂದು ಕಾಣಲಾಗುತ್ತಿಲ್ಲ.

ಹಾಗಾದರೆ ಹೆಣ್ಣು ಮಕ್ಕಳಿಗೂ ಕೂಡ ಆಸ್ತಿಯಲ್ಲಿ ಪಾಲು ಸಮಾನವಾಗಿ ಸಿಗುತ್ತದೆಯೇ ? ಯಾವೆಲ್ಲ ಸಂದರ್ಭದಲ್ಲಿ ಸಮಾನ ಪಾಲು ಸಿಗಲಿದೆ ಅಥವಾ ಯಾವ ಸಂದರ್ಭದಲ್ಲಿ ಮನೆಯ ಹೆಣ್ಣು ಮಕ್ಕಳಿಗೆ ಆಸ್ತಿ (Property) ಯಲ್ಲಿ ಪಾಲು ಸಿಗುವುದಿಲ್ಲ ಎಂಬ ಮಾಹಿತಿ ನಿಮಗೆ ತಿಳಿದಿದೆಯೇ ? ಈ ವಿಷಯಗಳ ಬಗ್ಗೆ ಇಂದು ಸ್ವಲ್ಪ ಗಮನ ಹರಿಸೋಣ.

ಹಿಂದೂ ಉತ್ತರಾಧಿಕಾರ ಕಾಯ್ದೆ 1956

ಮನೆಯ ಯಜಮಾನನ ನಂತರ ಆ ಆಸ್ತಿ ಯಾರಿಗೆ ಸಿಗಬೇಕು ಎಂಬ ನಿಯಮಗಳನ್ನು ಭಾರತದಲ್ಲಿ ಸ್ವಾತಂತ್ರ್ಯಾ ನಂತರ ಮಾಡಲಾಗಿತ್ತು. ಮೊದಲಿನ ಕಾಲದಲ್ಲಿ ಮನೆಯ ಯಜಮಾನನ ನಂತರ ಆಸ್ತಿ (Property) ಆ ಮನೆಯ ಗಂಡು ಮಕ್ಕಳಿಗೆ ಪಾಲಾಗುತ್ತಿತ್ತು. ಆದರೆ ಇದು ಸರಿಯಲ್ಲ. ಮನೆಯ ಹುಡುಗಿಗೆ ಇದು ಅನ್ಯಾಯ ಮಾಡಿದಂತೆ ಎಂದು ಪರಿಗಣಿಸಿ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತವಾಗಿ ಬಂದ ತಂದೆಯ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ಕಾರಣಕ್ಕೆ ಹಿಂದೂ ಉತ್ತರಾಧಿಕಾರ ಕಾಯ್ದೆ 1956 ಅನ್ನು 2005ರಲ್ಲಿ ತಿದ್ದುಪಡಿ ಮಾಡಲಾಗಿತ್ತು.

advertisement

ಈ ಕಾನೂನಿನ ಪ್ರಕಾರ ಮಗಳಿಗೂ ಕೂಡ ತನ್ನ ತಂದೆಯ ಆಸ್ತಿ (Father’s Property) ಯಲ್ಲಿ ಮಗನಂತೆಯೇ ಸಮಾನ ಹಕ್ಕುಗಳನ್ನು ಕೊಡಬೇಕು ಎಂದು ನಿರ್ಧರಿಸಲಾಗಿತ್ತು. ಇದರ ಪ್ರಕಾರ 2005 ರಲ್ಲಿ ಭಾರತೀಯ ಸಂಸತ್ತು ಹೆಣ್ಣು ಮಕ್ಕಳ ಹಕ್ಕುಗಳನ್ನು ಬಲಪಡಿಸಿತು ಉತ್ತರಾಧಿಕಾರ ಕಾನೂನನ್ನು ತಿದ್ದುಪಡಿ ಮಾಡುವ ಮೂಲಕ ತಂದೆಯ ಆಸ್ತಿಯಲ್ಲಿ ಮಗಳಿಗೂ ಕೂಡ ಸಮಾನವಾದ ಪಾಲು ಸಿಗಬೇಕು ಎಂಬ ಮಹತ್ವದ ನಿರ್ಧಾರ ಮಾಡಿತ್ತು.

ಅವಿವಾಹಿತ ಮಗಳಿಗೂ ಪಾಲು ಸಿಗಲಿದೆಯೇ ?

ಮಗಳು ವಿವಾಹಿತೆ ಆಗಿರಲಿ ಅಥವಾ ಅವಿವಾಹಿತೆ ಆಗಿರಲಿ ಎರಡೂ ಸಂದರ್ಭಗಳಲ್ಲಿ ಮಗಳಿಗೆ ತನ್ನ ತಂದೆಯ ಆಸ್ತಿ (Father’s Property) ಯಲ್ಲಿ ಸಮಾನ ಹಕ್ಕನ್ನು ಕೇಳುವ ಅವಕಾಶ ಇದೆ. ಇದರಿಂದ ಹೆಣ್ಣು ಮಕ್ಕಳಿಗೂ ಕೂಡ ಒಂದು ಬಗೆಯ ಆರ್ಥಿಕ ಸ್ವಾವಲಂಬನೆ ಸಿಕ್ಕಂತಾಯಿತು ಹಾಗೂ ಮಾನಸಿಕವಾಗಿ ಇವರನ್ನು ಗಟ್ಟಿಗೊಳಿಸಿತು.

ಯಾವ ಸಂದರ್ಭದಲ್ಲಿ ಮಗಳಿಗೆ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ ?

ಒಂದು ವೇಳೆ ತಂದೆಯ ಬಳಿ ಇರುವ ಆಸ್ತಿ ಪಿತ್ರಾರ್ಜಿತ ಆಗದೇ ಸ್ವಯಾರ್ಜಿತ ಆಸ್ತಿ ಆಗಿದ್ದಲ್ಲಿ ಅಂತಹ ಸಂದರ್ಭದಲ್ಲಿ ತಂದೆ ತನ್ನ ಇಡೀ ಆಸ್ತಿಯನ್ನು ತನ್ನ ಮಗನ ಹೆಸರಿಗೆ ಅಥವಾ ಅವರಿಗೆ ಯಾರು ಬೇಕೋ ಅವರ ಹೆಸರಲ್ಲಿ ಬರೆದಿಡಬಹುದು. ಇಂತಹ ಸಂದರ್ಭದಲ್ಲಿ ಮಗಳಿಗೆ ಆಸ್ತಿಯಲ್ಲಿ ಹಕ್ಕು ಕೇಳುವ ಅವಕಾಶ ಇರುವುದಿಲ್ಲ.

advertisement

Leave A Reply

Your email address will not be published.