Karnataka Times
Trending Stories, Viral News, Gossips & Everything in Kannada

Father Property: ತಂದೆಯ ಅಸ್ತಿಯಲ್ಲಿ ಮಕ್ಕಳು ಪಾಲು ತೆಗೆದುಕೊಳ್ಳೋದು ಹೇಗೆ?

advertisement

ಇಲ್ಲಿ ಯಾವುದೂ ಶಾಶ್ವತವಲ್ಲ, ಯಾರೂ ಶಾಶ್ವತರಲ್ಲ. ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಹೆಚ್ಚು ಕಡಿಮೆ ಅನಿರೀಕ್ಷಿತವಾಗಿಯೇ ಎಲ್ಲವನ್ನೂ ಬಿಟ್ಟು ಹೋಗಬೇಕಾಗುತ್ತದೆ. ಬಿಟ್ಟು ಹೋಗುವುದೇನೋ ಸರಿ, ಆದರೆ ಆಸ್ತಿಯ ವಿಚಾರಕ್ಕೆ ಬಂದಾಗ ಎಷ್ಟು ಮಂದಿ ತಾವು ಕೊನೆಯ ಉಸಿರು ಎಳೆಯುವ ಮೊದಲು ತಮ್ಮ ಆಸ್ತಿಯನ್ನು ಮಕ್ಕಳಿಗೆ ಅಥವಾ ವಾರಸುದಾರರಿಗೆ ಸಮರ್ಪಕವಾಗಿ ಹಂಚಿರುತ್ತಾರೆ.

ಆಸ್ತಿಯ ಭಾಗಕ್ಕೂ ಮುಂಚಿನ ಸೂಚನೆಗಳು:

ಪಿತ್ರಾರ್ಜಿತ ಆಸ್ತಿ ಭಾಗಕ್ಕೆ ಕುಟಂಬದ ಜನರೆಲ್ಲರ ಒಪ್ಪಿಗೆ. ಹೆಣ್ಣುಮಕ್ಕಳ ಒಪ್ಪಿಗೆಯೂ ಬೇಕಾಗುತ್ತದೆ. ಸಾಲ (Loan) ಕೂಡ ವಿಲೇವಾರಿ ಮಾಡಬೇಕಾಗುತ್ತದೆ. ಅದೇ ಸ್ವಯಾರ್ಜಿತ ಆಸ್ತಿ ಆದರೆ ಅವರಷ್ಟಕ್ಕೆ ತಕ್ಕಂತೆ ಮಕ್ಕಳಿಗೆ ನೀಡಬಹುದು. ಯಾರಿಗೆ ಎಷ್ಟು ಬೇಕಾದರೂ ಕೂಡ ನೀಡಬಹುದು ಅದನ್ನು ಯಾರು ಕೂಡ ಪ್ರಶ್ನಿಸುವಂತಿಲ್ಲ.

ಸ್ತಿ ಹಂಚಿಕೆ ಹೇಗೆ ಮಾಡುವುದು?

advertisement

ಮಾತು ಕತೆಯ ಮೂಲಕ ಒಪ್ಪಂದ ಪತ್ರ ಬರೆಯುವ ಮೂಲಕ ಹಂಚಿಕೆ ಮಾಡಬಹುದು. ಹಿರಿಯರ ಸಮ್ಮುಖದಲ್ಲಿ ಜಮೀನಿನ ದಾಖಲೆಗಳಿಗೆ ಬಿಳಿ ಹಾಳೆಯಲ್ಲಿ ಇಲ್ಲವೇ ಸ್ಟಾಂಪ್ ಪೇಪರ್ ಮೇಲೆ ಸಹಿ ತೆಗೆದುಕೊಳ್ಳಬೇಕು.

ಜಮೀನಿನ ಅಳತೆ ಕಾರ್ಯ ಮತ್ತು ನಕ್ಷೆ Gift ಅಥವಾ Partition ಮಾಡಿಕೊಂಡು 11E ನಕ್ಷೆ & ಸರ್ವೆ ಮಾಡಲು ನಾಡಕಛೇರಿಯಲ್ಲಿ ಅರ್ಜಿ ನೀಡಬೇಕು. ನೀವು ಸಲ್ಲಿಸಿದ ಅರ್ಜಿಯಲ್ಲಿ ನಮೂದಿಸಿರುವ ನಿಗದಿತ ದಿನಾಂಕದ ಒಳಗೆ ಭುಮಾಪಕರು ಅಳತೆ ಮಾಡಿ ಇಲಾಖೆ ವರದಿ ಸಲ್ಲಿಸಿದ ನಂತರ ನಕ್ಷೆಯ ಪ್ರಿಂಟ್ ತೆಗೆದುಕೊಳ್ಳಬೇಕು. ಅಲ್ಲೇ ಚರ್ಚೆ ನಡೆಸಿ ಕಚ್ಚಾ ನಕ್ಷೆಯನ್ನು ಸಹಾ ಪರಿಶೀಲಿಸಿ ಕೊಳ್ಳಬೇಕು.

ಜಮೀನು ಹಂಚಿಕೆ ಹೇಗೆ ಮಾಡುವದು:

ಈಗಾಗಲೇ ಮಾಡಿಸಿದ ಜಮೀನಿನ ನಕ್ಷೆ, ಕುಟುಂಬಸ್ಥರ ಅಧಾರ ಕಾರ್ಡ (Aadhaar Card), ವಂಶಾವಳಿ ಪ್ರಮಾಣ ಪತ್ರ, ಎರಡು ಜನ ಸಾಕ್ಷಿಧಾರರೊಂದಿಗೆ ಉಪ ನೋಂದಣಿ ಕಚೇರಿಯಲ್ಲಿ ನೊಂದಣಿ ಪ್ರಕ್ರಿಯೆ ಮಾಡಬೇಕು.15 ದಿನಗಳ ಒಳಗಾಗಿ ಈ ಕಾರ್ಯವನ್ನು ಪೂರ್ಣಗೊಳಿಸಬೇಕು.15 ದಿನಗಳ ನಂತರ ಭೂಮಿ ಕೇಂದ್ರದಲ್ಲಿ ಮ್ಯುಟೇಶನ್ ಮೂಲಕ ಹಕ್ಕು ವರ್ಗಾವಣೆ ಮಾಡಬಹುದಾಗಿದೆ.

advertisement

Leave A Reply

Your email address will not be published.