Karnataka Times
Trending Stories, Viral News, Gossips & Everything in Kannada

Modi 3.0: ಮೋದಿ 3.0 ಭಾರತ ಹೇಗಿರುತ್ತದೆ? ಮುಂದಿನ 5 ವರ್ಷಗಳ ಪ್ಲಾನ್ ಏನು?

advertisement

ತಮ್ಮ ಮೂರನೇ ಅಧಿಕಾರಾವಧಿಯಲ್ಲಿ ಭಾರತ ವಿಶ್ವದ ಆರ್ಥಿಕತೆಯಲ್ಲಿ ವಿಶ್ವದ ಮೊದಲ ಮೂರು ಸ್ಥಾನಗಳಲ್ಲಿ ಒಂದು ಸ್ಥಾನವನ್ನು ತಲುಪುವಂತೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಭರವಸೆ ನೀಡಿದ್ದಾರೆ.ಮುಂದಿನ ಐದು ವರ್ಷಗಳ ಅವಧಿಗೆ ತಮ್ಮ ದೃಷ್ಟಿಕೋನವನ್ನು ವಿವರಿಸಿದ್ದಾರೆ. Modi 3.0 ಸರ್ಕಾರವು ‘ವಿಕಸಿತ ಭಾರತ’ ಅಥವಾ ಅಭಿವೃದ್ಧಿ ಹೊಂದಿದ ರಾಷ್ಟ್ರ. ನಿರ್ಮಾಣಕ್ಕೆ ಅಡಿಪಾಯದ ಗುರಿ ಹೊಂದಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರವು ಆರ್ಥಿಕತೆಯನ್ನು ಅಸಮರ್ಪಕವಾಗಿ ನಿರ್ವಹಣೆ ಮಾಡಿತ್ತು. 10 ವರ್ಷಗಳಲ್ಲಿ ನಮ್ಮ ಸರ್ಕಾರ ಎಲ್ಲ ವಿಭಾಗಗಳ ಅಭಿವೃದ್ಧಿಗೆ ಶ್ರಮಿಸಿದೆ ಎಂದು ಹೇಳಿದ್ದಾರೆ.

ಆರ್ಥಿಕತೆ ಬಗ್ಗೆ ಹೇಳಿದ್ದೇನು?

ಯುಪಿಎ ಅವಧಿಯಲ್ಲಿ ‘ಫ್ರಜೈಲ್ ಫೈವ್’ (ದುರ್ಬಲ ಆರ್ಥಿಕತೆಯ 5 ರಾಷ್ಟ್ರಗಳಲ್ಲಿ ಸ್ಥಾನ) ಹಂತದಲ್ಲಿದ್ದ ಭಾರತದ ಆರ್ಥಿಕತೆ ಈಗ ವಿಶ್ವದ ಟಾಪ್ 5 ಆರ್ಥಿಕತೆಗಳಲ್ಲಿ ಒಂದಾಗಿದೆ.‘ಸಬ್ ಕಾ ಸಾಥ್’ ಕೇವಲ ಘೋಷಣೆಯಲ್ಲ, ಅದು ಮೋದಿಯ ಗ್ಯಾರಂಟಿ’ ಎಂದು ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 2047ರಲ್ಲಿ ಸ್ವಾತಂತ್ರ್ಯೋತ್ಸವದ ಶತಮಾನೋತ್ಸವ ಆಚರಿಸುವ ಹೊತ್ತಿಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ವಿಕಸಿತ ಭಾರತ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದ್ದಾರೆ.

ಐದು ವರ್ಷಗಳ ದೃಷ್ಟಿಕೋನ ಹೇಗಿದೆ:

 

advertisement

 

ವಿಕಸಿತ ಭಾರತ ಎಂಬುದು ಆಟಕ್ಕಾಗಿ ಇಟ್ಟಿರುವ ಪದವಲ್ಲ, ಅದು ನಮ್ಮ ಬದ್ಧತೆ ಎಂದು ಮುಂದಿನ ಐದು ವರ್ಷಗಳ ದೃಷ್ಟಿಕೋನವನ್ನು ವಿವರಿಸುವಾಗ ಮೋದಿ ಹೇಳಿದರು. ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2ನೇ ಅಧಿಕಾರಾವಧಿಯ ಅಂತಿಮ ಘಟ್ಟದಲ್ಲಿದ್ದು, ಏಪ್ರಿಲ್ ಅಥವಾ ಮೇ ನಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ನಮ್ಮ ಸರ್ಕಾರದ 3 ನೇ ಅವಧಿಯು ಬಹಳ ದೂರವಿಲ್ಲ. ಕೆಲವರು ಇದನ್ನು Modi 3.0 ಎಂದು ಕರೆಯುತ್ತಾರೆ. ವಿಕಸಿತ ಭಾರತದ ಅಡಿಪಾಯ ಗಟ್ಟಿಗೊಳಿಸಲು Modi 3.0 ಎಲ್ಲ ಪ್ರಯತ್ನಪಡಲಿದೆ ಎಂದು ಮೋದಿ ಹೇಳಿದ್ದಾರೆ.

ಜನರಿಗೆ ಆಗುವ ಉಪಯೋಗವೇನು?

5 ವರ್ಷಗಳ ದೃಷ್ಟಿಕೋನವನ್ನು ವಿವರಿಸಿದ ಮೋದಿ, ಪಿಎಂ ಕಿಸಾನ್ (PM Kisan), ಪಿಎಂ ಆವಾಸ್ ಯೋಜನೆ (PM Awas Yojana), ಉಚಿತ ಪಡಿತರ, ಆಯುಷ್ಮಾನ್ ಭಾರತ್ (Ayushman Bharat) ಮತ್ತು ಅಗ್ಗದ ಬೆಲೆಯ ಔಷಧಿ ಸೌಲಭ್ಯಗಳು ಮುಂದುವರಿಯಲಿವೆ ಎಂದು ಹೇಳಿದರು.

ಭಾರತವು ಹಲವು ಪಟ್ಟು ವೈದ್ಯಕೀಯ ಕಾಲೇಜುಗಳು ಮತ್ತು ವೈದ್ಯರ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ. ವೈದ್ಯಕೀಯ ಚಿಕಿತ್ಸೆ ಸುಲಭವಾಗಿ ಮತ್ತು ಅಗ್ಗದ ದರಲ್ಲಿ ಸಿಗಲಿದೆ. ಇನ್ನಷ್ಟು ಸ್ಟಾರ್ಟಪ್‌ಗಳು, ಒಂದು ಲಕ್ಷ ಯೂನಿಕಾರ್ನ್‌ಗಳು,ಅತ್ಯುತ್ತಮ ವಿಶ್ವವಿದ್ಯಾಲಯಗಳು, ಅಂತರರಾಷ್ಟ್ರೀಯ ಕ್ರೀಡೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವಿಕೆ, ಸಾರ್ವಜನಿಕ ಸಾರಿಗೆಯಲ್ಲಿ ಪರಿವರ್ತನೆ, ಬುಲೆಟ್ ಟ್ರೇನ್‌ಗಳನ್ನು ದೇಶ ಕಾಣಲಿದೆ ಎಂದರು.

Modi 3.0 ಅವಧಿಯಲ್ಲಿ ಭಾರತವು ವ್ಯಾಪಕವಾಗಿ AI (ಕೃತಕ ಬುದ್ಧಿಮತ್ತೆ) ಬಳಕೆ, ನ್ಯಾನೊ ಗೊಬ್ಬರ, ಹಸಿರು ತಂತ್ರಜ್ಞಾನ, ನೈಸರ್ಗಿಕ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲಿದೆ ಎಂದು ಮೋದಿ ಹೇಳಿದ್ದಾರೆ.
ಸೆಮಿಕಂಡಕ್ಟರ್ ವಲಯ, ಎಲೆಕ್ಟ್ರಾನಿಕ್ ವಸ್ತುಗಳು, ಗ್ರೀನ್ ಹೈಡ್ರೋಜನ್ ವಲಯಗಳಲ್ಲಿ ಭಾರತ ಗಮನಾರ್ಹ ಅಭಿವೃದ್ಧಿ ಕಾಣಲಿದೆ ಎಂದೂ ಪ್ರಧಾನಿ ಹೇಳಿದ್ದಾರೆ.

advertisement

Leave A Reply

Your email address will not be published.