Karnataka Times
Trending Stories, Viral News, Gossips & Everything in Kannada

PM Kisan: ರೈತರೇ ಕಂತಿನ ಹಣಕ್ಕಾಗಿ ಈ ತಪ್ಪು ಮಾಡಿದ್ರೆ ಕ್ಷಣಮಾತ್ರದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳುತ್ತೀರಿ!

advertisement

ಕೇಂದ್ರ ಸರ್ಕಾರ ರೈತರಿಗಾಗಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ (PM-Kisan Samman Nidhi) ಯನ್ನು ಆರಂಭಿಸಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹ ರೈತರಿಗೆ ಪ್ರತಿ ವರ್ಷ 6,000ಗಳನ್ನು ಕಂತುಗಳಲ್ಲಿ ನೀಡಲಾಗುತ್ತದೆ. ವರ್ಷಕ್ಕೆ ಮೂರು ಕಂತುಗಳು ಹಾಗೂ ಪ್ರತಿ ಕಂತಿಗೆ 2000 ಗಳಂತೆ 6,000 ರೈತರ ಖಾತೆ ಸೇರುತ್ತವೆ.

16ನೇ ಕಂತಿನ ಹಣ ಜಮಾ:

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ (PM-Kisan Samman Nidhi) ನಿಧಿ ಯೋಜನೆಯ ಅಡಿಯಲ್ಲಿ ಈಗಾಗಲೇ 15 ಕಂತಿನ ಹಣ ಬಿಡುಗಡೆ ಆಗಿದೆ. ಹದಿನಾರನೇ ಕಂತಿನ ಹಣ ಫೆಬ್ರವರಿ ಮೊದಲ ವಾರದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ನಿಮ್ಮ ಖಾತೆಗೆ 16ನೇ ಕಂತಿನ ಹಣವು ಬಂದು ಸೇರಬೇಕು ಅಂದ್ರೆ ತಕ್ಷಣ ಈ ಕೆಲಸ ಮಾಡಿ.

 

 

ರೈತರು ಈ ತಪ್ಪನ್ನು ಸರಿಪಡಿಸಿಕೊಳ್ಳಿ:

ಈಕೆವೈಸಿ ಹೆಸರಿನಲ್ಲಿ ವಂಚನೆ:

advertisement

ಪ್ರಧಾನ ಮಂತ್ರಿ ಕಿಸಾನ್ (PM Kisan) ಯೋಜನೆಯಲ್ಲಿ ರೈತರು ತಮ್ಮ ಬ್ಯಾಂಕ್ ಖಾತೆಗೆ E-kyc ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ತಪ್ಪಾಗಿ ಯಾವುದೇ ಕರೆ ಅಥವಾ ಸಂದೇಶ ಅಥವಾ ಅಪರಿಚಿತ ಲಿಂಕ್ ಸ್ವೀಕರಿಸಿದ್ದು ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಖಾತೆಯ ಹಣ ಕಣ್ಮರೆಯಾಗಬಹುದು. ಇಂತಹ ಯಾವುದೇ ತಪ್ಪನ್ನು ನೀವು ಮಾಡಬೇಡಿ, ಮೋಸ ಹೋಗಬೇಡಿ.

ಇಂಥವರಿಂದ ದೂರ ಇರಿ:

ಒಂದು ವೇಳೆ ನಿಮಗೆ ಒಂದು ಕಂತಿನ ಕಿಸಾನ್ ಯೋಜನೆಯ ಹಣ ಬಂದಿಲ್ಲ ಎಂದು ಭಾವಿಸಿ. ಆಗ ನೀವು ಅದನ್ನ ಬೇರೆಯವರ ಬಳಿ ಹೇಳಿಕೊಳ್ಳುತ್ತೀರಿ. ಅಂತಹ ಸಂದರ್ಭದಲ್ಲಿ ನಾವು ನಿಮ್ಮ ಕಂತಿನ ಹಣ ಬರುವಂತೆ ಮಾಡುತ್ತೇವೆ ಎಲ್ಲ ಮಾಹಿತಿ ಕೊಡಿ ಎಂದು ಕೇಳಿದರೆ ಯಾರಿಗೂ ನಿಮ್ಮ ಮಾಹಿತಿಯನ್ನು ಕೊಡಬೇಡಿ. ಯಾಕೆಂದರೆ ಯಾರು ಕೂಡ ಹೀಗೆ ನಿಮ್ಮ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಲು ಸಾಧ್ಯವಿಲ್ಲ. ಹಾಗೆ ನಿಮಗೆ ಹಣ ಬಾರದೆ ಇದ್ದರೆ ಬ್ಯಾಂಕಿಗೆ ಹೋಗಿ ಮಾಹಿತಿ ತಿಳಿದುಕೊಳ್ಳಿ. ಇಲ್ಲವಾದರೆ ವಂಚನೆಗೆ ಒಳಗಾಗುತ್ತೀರಿ.

ವಂಚಕರ ಕರೆ:

ಈಕೆ ವೈ ಸಿ ಮಾಡಲು ರೈತರಿಗೆ ತಿಳಿಯದೆ ಇರಬಹುದು. ಅಂತಹ ಸಂದರ್ಭದಲ್ಲಿ ನೇರವಾಗಿ ಬ್ಯಾಂಕಿಗೆ ಹೋಗಿ ಕೆ ವೈ ಸಿ ಮಾಡಿಸಿಕೊಳ್ಳಿ. ಅದನ್ನು ಹೊರತುಪಡಿಸಿ ಯಾರಾದರೂ ನಿಮ್ಮ ಫೋನ್ ಗೆ ಕರೆ ಮಾಡಿ ಈಕೆ ವೈ ಸಿ ಆಗಿಲ್ಲ, ಎಲ್ಲಾ ಮಾಹಿತಿ ಕೊಡಿ ನಾವೇ ಮಾಡುತ್ತೇವೆ. ಎಂದು ಹೇಳಿದರೆ ಬ್ಯಾಂಕಿಂಗ್ ಮಾಹಿತಿಯನ್ನು ನೀಡಬೇಡಿ. ನೀವು ನಿಮ್ಮ ಹೆಸರು ಪಾಸ್ವರ್ಡ್ ಮೊದಲಾದವುಗಳನ್ನು ಹಂಚಿಕೊಂಡರೆ ಖಂಡಿತವಾಗಿಯೂ ನಿಮ್ಮ ಖಾತೆಯಿಂದ ಎಲ್ಲಾ ಹಣವನ್ನು ಲಪಟಾಯಿಸಿ ಬಿಡಬಹುದು.

ಬ್ಯಾಂಕ್ ಖಾತೆ ನವೀಕರಿಸಿಕೊಳ್ಳುವುದು:

ಪಿ ಎಂ ಕಿಸಾನ್ ಯೋಜನೆ (PM Kisan Scheme) ಗೆ ಕೆವೈಸಿ ಕಡ್ಡಾಯವಾಗಿದೆ ಹಾಗಂದ ಮಾತ್ರಕ್ಕೆ ಬೇರೆಯವರ ಬಳಿ ಈ ಕೆಲಸ ಮಾಡಿಸಿಕೊಳ್ಳಬೇಕಾಗಿಲ್ಲ. ನೀವೇ ನೇರವಾಗಿ ಬ್ಯಾಂಕಿಗೆ ಹೋಗಿ ಕೆವೈಸಿ ಮಾಡಿಸಿಕೊಳ್ಳಬಹುದು. ಅಥವಾ ನಿಮ್ಮ ಬ್ಯಾಂಕ್ ಶಾಖೆಯ ವೆಬ್ಸೈಟ್ ಗೆ ಹೋಗಿ ಅಲ್ಲಿಯೂ ಕೆವೈಸಿ ಮಾಡಿಸಿಕೊಳ್ಳಲು ಸಾಧ್ಯವಿದೆ. ಇದನ್ನು ಹೊರತುಪಡಿಸಿ ಬೇರೆಯವರ ಬಳಿ ಮಾಹಿತಿ ಹಂಚಿಕೊಂಡು ಮೋಸಕ್ಕೆ ಒಳಗಾಗಬೇಡಿ.

advertisement

Leave A Reply

Your email address will not be published.