Karnataka Times
Trending Stories, Viral News, Gossips & Everything in Kannada

Old Pension Scheme: ಹಳೆ ಪಿಂಚಣಿ ವ್ಯವಸ್ಥೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ, ಇಂತಹ ನೌಕರರಿಗೆ ಮಾತ್ರ ಅವಕಾಶ!

advertisement

ಪಿಂಚಣಿ ಯೋಜನೆಯೂ ಅಧಿಕ ಮಾನ್ಯತೆ ಪಡೆದಿರುವ ವಿಚಾರ ನಮಗೆಲ್ಲ ತಿಳಿದಿದೆ. ಪಿಂಚಣಿ ಯೋಜನೆ ಈ ಹಿಂದಿಗಿಂತ ಈಗ ಭಿನ್ನವಾಗಿದೆ. ಕೆಲಸದ ನಿವೃತ್ತಿಯ ಅವಧಿಯಲ್ಲಿ ಈ ಒಂದು ಪಿಂಚಣಿಯ ಹಣ ಭವಿಷ್ಯದ ಭದ್ರತೆಗೆ ಸಾಕ್ಷಿಯಾಗಿದೆ. ರಾಜ್ಯ ಸರಕಾರಿ ನೌಕರರ ಪಿಂಚಣಿ ವ್ಯವಸ್ಥೆಯಲ್ಲಿ ಬದಲಾವಣೆ ತರುವಂತೆ ಅನೇಕ ವರ್ಷಗಳಿಂದ ಬೇಡಿಕೆ ಮುಂದಿಟ್ಟಿದ್ದ ಕಾರಣ ಹಳೆ ಪಿಂಚಣಿ ವ್ಯವಸ್ಥೆ (Old Pension Scheme) ಜಾರಿಗೊಳಿಸುವ ಬಗ್ಗೆ ರಾಜ್ಯ ಸರಕಾರ ಕೆಲ ಆದೇಶ ಹೊರಡಿಸಿದೆ.

ಹಳೆ ಪಿಂಚಣೆಗೆ ಒತ್ತಾಯ:

ರಾಜ್ಯ ಸರಕಾರಿ ನೌಕರರ ಹಳೆ ಪಿಂಚಣಿ ವ್ಯವಸ್ಥೆ Old Pension Scheme (OPS) ಎಂದು ಜಾರಿಗೆ ತಂದಿತ್ತು. ಆದರೆ ಬಳಿಕ ಅದು NPS ಆಗಿ ಜಾರಿ ಮಾಡಲಾಗಿದ್ದು ರಾಷ್ಟೀಯ ಪಿಂಚಣಿ ಯೋಜನೆ ಅಂದರೆ National Pension Scheme (NPS) ಎಂದು ಇದರ ಹೆಸರು. ಹಳೆ ಪಿಂಚಣಿ ವ್ಯಚಸ್ಥೆಯಲ್ಲಿ ಉದ್ಯೋಗಿಯ ಸಂಬಳದಲ್ಲಿ ಖಡಿತವಾದ ಹಣಕ್ಕೆ ಇಂತಿಷ್ಟು ಉದ್ಯೋಗ ನೀಡಿದ್ದ ಕಂಪೆನಿ ಹಣ ಹಾಗೂ ಸರಕಾರದಿಂದ ಬಡ್ಡಿಸಹ ಬರುತ್ತದೆ.

ಎನ್ ಪಿಎಸ್ ಮಾದರಿಯಲ್ಲಿ ನಮ್ಮ ಸಂಬಳ ಎಷ್ಟು ಖಡಿತವಾಗಿದೆಯೋ ಅದನ್ನು‌ ಮಾತ್ರ ನೀಡಲಾಗುತ್ತದೆ. ಇದರಿಂದಾಗಿ ಪಿಂಚಣಿ ಸಿಗುವ ಬಡ್ಡಿ ಮೊತ್ತ ಸಹ ಸಿಗುತ್ತಿಲ್ಲ ಅದು ಜನರಿಗೆ ಇದನ್ನೆ ನಂಬಿ ನಿವೃತ್ತಿ ಕಳೆಯಬೇಕು ಎಂದವರಿಗೆ ಕಷ್ಟ ಆಗುತ್ತದೆ ಹಾಗಾಗಿ ಈ ವಿಚಾರದ ಬಗ್ಗೆ ಸರಕಾರ ಕ್ರಮ ಕೈಗೊಳ್ಳಬೇಕು. ಒಪಿಎಸ್ (OPS) ಅನ್ನೇ ಜನರಿಗೆ ನೀಡುವಂತೆ ಅನೇಕ ಸಂಘಟನೆ ಮೂಲಕ ಜನಸಾಮಾನ್ಯತು ಮನವಿ ಮಾಡಿದ್ದಾರೆ.

advertisement

ಹಳೆ ಪಿಂಚಣಿ ಸೌಲಭ್ಯ:

 

 

ಪ್ರಸ್ತುತ ಇರುವ ನಿಯಮದ ಪ್ರಕಾರ ಎಪ್ರಿಲ್ 1, 2006 ಬಳಿಕ ಯಾರೆಲ್ಲ ಸರಕಾರಿ ನೌಕರರಿಗೆ ಎನ್ ಪಿಎಸ್ ಯೋಜನೆ ಮೂಲಕ ಪಿಂಚಣಿ ವ್ಯವಸ್ಥೆ ನೀಡಲು ತೀರ್ಮಾನ ಕೈಗೊಳ್ಳಲಾಗಿತ್ತು. ಹಾಗಿದ್ದರೂ ಎಪ್ರಿಲ್ 1 2006 ರ ಪೂರ್ವದಲ್ಲಿ ಕೆಲಸಕ್ಕೆ ಸೇರಿದ್ದವರು ಹಳೆ ಪಿಂಚಣಿ ವ್ಯವಸ್ಥೆ ಅಡಿಯಲ್ಲಿ ಪಿಂಚಣಿ ವ್ಯವಸ್ಥೆ ಪಡೆಯಲು ಇಚ್ಛಿಸಿದರೆ ಅಂತವರು ಅರ್ಜಿ ಸಲ್ಲಿಸಬೇಕು. ಹಿಂದಿನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲ ದಾಖಲೆಗಳು ಕೂಡ ಅಗತ್ಯವಾಗಿದೆ.

ಈ ದಾಖಲೆ ಅಗತ್ಯ:

ನೇಮಕಾತಿ ಆದೇಶ ದಿನಾಂಕ ಪ್ರತಿ, ಹುದ್ದೆಗಳ ಭರ್ತಿಗಾಗಿ ಪ್ರಕಟಿಸಲಾದ ನೇಮಕಾತಿ ಅಧಿಸೂಚನೆ ದಿನಾಂಕ, ಸಂಬಂಧ ಪಟ್ಟ ಆಯ್ಕೆ ಪಟ್ಟಿ ದಿನಾಂಕ ಪ್ರತಿ, ಒಮ್ಮೆ ನೇಮಕಾತಿ ಆದ ಬಳಿಕ ಇಲಾಖೆ ಬದಲಾಗಿದೆಯೇ ಈ ಬಗ್ಗೆ ವಿವರಣೆ ನೀಡುವುದು, ಪ್ರಸ್ತುತ ಕಾರ್ಯ ನಿರ್ವಹಣೆಯ ಕಚೇರಿಯ ವಿಳಾಸದ ಮಾಹಿತಿ, ಕೆಜಿಐಡಿ ಸಂಖ್ಯೆ, NPS ಪ್ರಾನ್ ಸಂಖ್ಯೆ, ಪ್ರಸ್ತುತ ವೇತನದ ಚೀಟಿ ಇತ್ಯಾದಿ ಮಾಹಿತಿ ಹಾಗೂ ದಾಖಲೆಯನ್ನು ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಅರ್ಜಿ ಸಲ್ಲಿಸುವ ವೇಳೆಯಲ್ಲಿ ನೀಡುವುದು ಕಡ್ಡಾಯವಾಗಿದೆ.

advertisement

Leave A Reply

Your email address will not be published.