Karnataka Times
Trending Stories, Viral News, Gossips & Everything in Kannada

Indian Railway: ರೈಲಿನ ಸಂಪೂರ್ಣ ಒಂದು ಕೋಚ್ ಬುಕ್ ಮಾಡಲು ಎಷ್ಟು ವೆಚ್ಚ ಬೇಕು? ಈ ರೀತಿಯಾಗಿ ಬುಕ್ ಮಾಡಬಹುದು!

advertisement

ಆರಾಮದಾಯಕ ಪ್ರಯಾಣ ಹಾಗೂ ಅತಿ ಕಡಿಮೆ ಖರ್ಚಿನಲ್ಲಿ ಪ್ರಯಾಣ ಮಾಡಲು ಬಯಸಿದರೆ, ರೈಲ್ವೆ ಪ್ರಯಾಣದಷ್ಟು ಉತ್ತಮ ಮಾರ್ಗ ಇನ್ನೊಂದು ಇಲ್ಲ ಎಂದು ಹೇಳಬಹುದು. ದೂರದ ಊರುಗಳಿಗೆ ಸುಲಭವಾಗಿ ಕಡಿಮೆ ದರದಲ್ಲಿ ರೈಲಿನ ಮೂಲಕ ಪ್ರಯಾಣ ಮಾಡಬಹುದು. ರೈಲಿನ ಪ್ರಯಾಣದ ದರ ಕಡಿಮೆ ಇರುವ ಹಿನ್ನೆಲೆಯಲ್ಲಿ ಇಂದು ಕೋಟ್ಯಾಂತರ ಜನ ಪ್ರತಿದಿನ ರೈಲಿನಲ್ಲಿಯೇ ಪ್ರಯಾಣ ಮಾಡುತ್ತಾರೆ ಎನ್ನುವುದು ಗಮನಾರ್ಹ!

ರೈಲಿನಲ್ಲಿ ಪ್ರಯಾಣ ಮಾಡಬೇಕಾದರೆ ಟಿಕೆಟ್ ಬುಕ್ ಮಾಡಿಕೊಂಡು ಪ್ರಯಾಣಿಸುವುದು ಸಹಜ. ಆದ್ರೆ ನೀವು ಒಂದೆರಡು ಟಿಕೆಟ್ಗಳನ್ನಲ್ಲ, ಪೂರ್ತಿ ಕೋಚ್ ಅಥವಾ ಸಂಪೂರ್ಣ ರೈಲನ್ನೇ ಬುಕ್ ಮಾಡಬಹುದು ಎನ್ನುವುದು ನಿಮಗೆ ಗೊತ್ತಾ?

ರೈಲು ಬುಕ್ ಮಾಡುವುದು ಹೇಗೆ?

ಹೌದು, ನೀವು ಯಾವುದಾದರೂ ಊರಿಗೆ ದೊಡ್ಡ ಸಮಾರಂಭಕ್ಕೆ ಹೋಗಬೇಕು ಅಥವಾ ಎಲ್ಲರ ಜೊತೆಗೆ ಸೇರಿ ತೀರ್ಥಯಾತ್ರೆಗೆ ಪ್ಲಾನ್ ಮಾಡಿದ್ದೀರಿ ಎಂದರೆ ನೀವು ಸಂಪೂರ್ಣ ರೈಲು ಅಥವಾ ಸಂಪೂರ್ಣ ಕೋಚ್ ಮಾಡಿಕೊಳ್ಳಬಹುದು. ಐಆರ್ಸಿಟಿಸಿ ಇದಕ್ಕೆ ಕೆಲವು ನಿಬಂಧನೆಗಳನ್ನು ವಿಧಿಸಿದೆ. ಅದರ ಆಧಾರದ ಮೇಲೆ ನೀವು ಬುಕ್ ಮಾಡಿಕೊಳ್ಳಬಹುದು.

IRCTC ಯು ವೆಬ್ಸೈಟ್ https://www.ftr.irctc.co.in ಭೇಟಿ ನೀಡಿ. ಇಲ್ಲಿ ನೀವು ಸಂಪೂರ್ಣ ಕೋಚ್ ಬುಕ್ ಮಾಡಿಕೊಳ್ಳಬಹುದು. ನೀವು ಹೀಗೆ ಸಂಪೂರ್ಣ ಬುಕ್ ಮಾಡಿಕೊಳ್ಳುವುದಿದ್ದರೆ, ನಿಗದಿತ ಮೊತ್ತಕ್ಕಿಂತ 30 ರಿಂದ 35% ನಷ್ಟು ಹೆಚ್ಚು ಹಣವನ್ನು ಪಾವತಿ ಮಾಡಬೇಕು. ಹಾಗೂ ಏಕಾಏಕಿ ಬುಕ್ ಮಾಡಲು ಸಾಧ್ಯವಿಲ್ಲ. ನೀವು ಪ್ರಯಾಣಿಸುವುದಕ್ಕಿಂತ ಆರು ತಿಂಗಳ ಮೊದಲು ಕೋಚ್ ಬುಕ್ ಮಾಡಿಕೊಳ್ಳಬೇಕು.

advertisement

ತಗುಲುವ ವೆಚ್ಚ!

ನೀವು ರೈಲಿನ ಸಂಪೂರ್ಣ ಒಂದು ಕೋಚ್ ಬುಕ್ ಮಾಡಿಕೊಳ್ಳುವುದಿದ್ದರೆ 50,000ಗಳನ್ನು ಅಥವಾ 18 ಕೋಚ್ ಗಳಿರುವ ಸಂಪೂರ್ಣ ರೈಲು ಬುಕ್ ಮಾಡುವುದಾದರೆ ಒಂಬತ್ತು ಲಕ್ಷ ರೂಪಾಯಿಗಳನ್ನು ಪಾವತಿ ಮಾಡಬೇಕು. ಏಳು ದಿನಗಳ ನಂತರ ಪ್ರತಿ ನಿಲುಗಡೆಗೆ ಪ್ರತ್ಯೇಕವಾಗಿ 10,000ಗಳನ್ನು ಪಾವತಿ ಮಾಡಬೇಕು. ಬುಕ್ ಮಾಡಿಕೊಳ್ಳಲು ಸ್ಥಿರ ಭದ್ರತಾ ನಿಧಿಯ ಮೊತ್ತವನ್ನು ರೈಲ್ವೆ ಖಾತೆಗೆ ಮೊದಲೇ ಠೇವಣಿ ಮಾಡಬೇಕು. ಪ್ರಯಾಣದ ನಂತರ ಈ ಹಣವನ್ನು ಹಿಂತಿರುಗಿಸಿ ಕೊಡಲಾಗುತ್ತದೆ.

IRCTC ವೆಬ್ಸೈಟ್ ಗೆ ಹೋಗಿ ನೀವು ಐಡಿ ರಚಿಸಿ ನೋಂದಾಯಿಸಿಕೊಳ್ಳಬೇಕು ನಂತರ ವೆಬ್ಸೈಟ್ನಲ್ಲಿ ಕೋಚ್ ಅಥವಾ ರೈಲು ಬುಕ್ ಮಾಡಿಕೊಳ್ಳಲು ಬೇರೆ ಬೇರೆ ಆಯ್ಕೆಗಳಿರುತ್ತವೆ. ಇದಕ್ಕೆ ನೀವು ಸರಿಯಾದ ವಿವರ, ಪ್ರಯಾಣದ ದಿನಾಂಕ, ಯಾವ ಕೋಚ್ ಬೇಕು ಎಲ್ಲಿಂದ ಎಲ್ಲಿವರೆಗೆ ಪ್ರಯಾಣ ಪ್ರತಿಯೊಂದು ಮಾಹಿತಿಯನ್ನು ಭರ್ತಿ ಮಾಡಬೇಕು ನಂತರ ನೀವು ನಿಗದಿತ ಮೊತ್ತವನ್ನು ಪಾವತಿ ಮಾಡಿದರೆ ಬುಕಿಂಗ್ ಆಗುತ್ತದೆ.

ಇನ್ನು ಆಫ್ಲೈನ್ ಮೂಲಕ ಅಂದರೆ ರೈಲ್ವೆ ಕಚೇರಿಗೆ ಹೋಗಿಯೂ ಕೂಡ ನೀವು ಅಪ್ಲಿಕೇಶನ್ ಕೊಟ್ಟು ನಿಗದಿತ ಮೊತ್ತವನ್ನು ಪಾವತಿ ಮಾಡಿ ಕೋಚ್ ಬುಕ್ ಮಾಡಬಹುದು.

ನಿಮ್ಮ ಸ್ನೇಹಿತರು ಅಥವಾ ಫ್ಯಾಮಿಲಿ ಜೊತೆಗೆ ದೂರದ ಊರಿಗೆ ಆರಾಮದಾಯಕ ಹಾಗೂ ಮೋಜಿನ ಪ್ರಯಾಣ ಮಾಡಲು ಬಯಸಿದರೆ ಈ ರೀತಿ ರೈಲ್ವೆ ಕೋಚ್ ಬುಕ್ ಮಾಡಿಕೊಂಡು ಹೋದರೆ ಚೆನ್ನಾಗಿರುತ್ತೆ.

advertisement

Leave A Reply

Your email address will not be published.