Karnataka Times
Trending Stories, Viral News, Gossips & Everything in Kannada

FASTag KYC: ಈ ದಾಖಲೆಗಳೊಂದಿಗೆ ಫಾಸ್ಟ್ ಟ್ಯಾಗ್ KYC ನವೀಕರಿಸಿಕೊಳ್ಳಿ, ಆಗಿದ್ರೆ ಹೀಗೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!

advertisement

ಜನವರಿ 31, 2024 ಅಂದ್ರೆ ನಾಳೆ ಸರ್ಕಾರದ ಕೆಲವು ನಿಯಮಗಳ ಪ್ರಕಾರ ನೀವು ಅಗತ್ಯ ಇರುವ ನವೀಕರಣಗಳನ್ನು ಮಾಡಿಕೊಳ್ಳಬೇಕು. ಅವುಗಳಲ್ಲಿ ಫಾಸ್ಟ್ ಟ್ಯಾಗ್ ಗಳಿಗೆ ಕೆ ವೈ ಸಿ (KYC) ಮಾಡಿಸುವುದು ಒಂದು.

ಜನವರಿ 31 ಈ ಕೆಲಸಕ್ಕೆ ಕೊನೆಯ ದಿನಾಂಕ:

ಸರ್ಕಾರ ಈಗಾಗಲೇ ತಿಳಿಸಿರುವಂತೆ ಫಾಸ್ಟ್ ಟ್ಯಾಗ್ (FASTag) ಗೆ ಸಂಬಂಧಪಟ್ಟ ಗಡವು ನಾಳೆ ಮುಗಿಯಲಿದೆ. ನೀವು ಹೆದ್ದಾರಿಯಲ್ಲಿ ವಾಹನ ಚಲಾವಣೆ ಮಾಡುವವರಾಗಿದ್ದರೆ, ನಿಮ್ಮ ದೈನಂದಿನ ಸಮಯವನ್ನು ಹೆಚ್ಚು ಕಳೆಯದೆ ಬೇಗ ನಿಮ್ಮ ಕೆಲಸ ಮುಗಿಸಿಕೊಳ್ಳಲು ಪ್ರಯಾಣ ಬೆಳೆಸುವವರಾಗಿದ್ದರೆ ಖಂಡಿತವಾಗಿಯೂ ಈ ವಿಷಯವನ್ನು ನೀವು ಮಾಡಲೇಬೇಕು.

ಹೌದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಇತ್ತೀಚಿಗೆ ನೀಡಿರುವ ಮಾಹಿತಿಯ ಪ್ರಕಾರ, ಜನವರಿ 31, 2024 ಅಂದರೆ ನಾಳೆ ಗ್ರಾಹಕರು ತಮ್ಮ ಫಾಸ್ಟ್ ಟ್ಯಾಗ್ ಗಳಿಗೆ KYC ಮಾಡಿಕೊಳ್ಳದೆ ಇದ್ದರೆ ಅಂತಹ ಫಾಸ್ಟ್ ಟ್ಯಾಗ್ ಅನ್ನು ನಿಷ್ಕ್ರಿಯಗೊಳಿಸಲಾಗುವುದು ಅಥವಾ ಕಪ್ಪುಪಟ್ಟಿಗೆ ಸೇರಿಸಲಾಗುವುದು.

FASTag Update:

 

 

advertisement

ಹೆದ್ದಾರಿಗಳಲ್ಲಿ ಟೋಲ್ (Toll) ಸಂಗ್ರಹಿಸಲು ಫಾಸ್ಟ್ ಟ್ಯಾಗ್ ಒಂದು ಎಲೆಕ್ಟ್ರಾನಿಕ್ ವ್ಯವಸ್ಥೆ ಆಗಿದೆ. ಫಾಸ್ಟ್ ಟ್ಯಾಗ್ ಮೂಲಕ ಟೋಲ್ (Toll) ನಲ್ಲಿ ಚಲಿಸುವ ವಾಹನಗಳ ಮೇಲೆ ನಿಗಾ ಇಡಲಾಗುತ್ತದೆ. ಜೊತೆಗೆ ತೆರಿಗೆ ಸಂಗ್ರಹಿಸಲಾಗುತ್ತದೆ. ತೆರಿಗೆ ಸಂಗ್ರಹಿಸಲು ಫಾಸ್ಟ್ ಟ್ಯಾಗ್ (FASTag) ಅನ್ನು ಬ್ಯಾಂಕ ಖಾತೆಗೆ ಅಥವಾ ಪ್ರಿಪೇಯ್ಡ್ ಕಾರ್ಡ್ ಗೆ ಸಂಪರ್ಕ ಹೊಂದಿರುವುದರಿಂದ ಟೋಲ್ ನಲ್ಲಿ ಫಸ್ಟ್ ಟ್ಯಾಗ್ ನಲ್ಲಿ ಇರುವ ಹಣ ಆಟೋಮೆಟಿಕ್ ಆಗಿ ಕಡಿತಗೊಳ್ಳುತ್ತದೆ. ಫಾಸ್ಟ್ ಟ್ಯಾಗ್ ಹೊಂದಿರುವ ಯಾವುದೇ ವಾಹನ ಟೋಲ್ ಬೂತ್ ಗೆ ಪ್ರವೇಶಿಸಿದರೆ ಸುಲಭವಾಗಿ ಸ್ಕ್ಯಾನ್ ಮಾಡುವುದರ ಮೂಲಕ ಟೋಲ್ ತೆರಿಗೆ ಕಡಿತಗೊಳ್ಳುತ್ತದೆ. ಹಾಗೂ ಕೆಲವೇ ಸೆಕೆಂಡುಗಳಲ್ಲಿ ಟೋಲ್ ಪ್ಲಾಜಾ ವನ್ನು ವಾಹನ ಪಾಸ್ ಆಗಬಹುದು.

Update KYC For FASTag:

 • ಇದಕ್ಕಾಗಿ ನೀವು ಅಧಿಕೃತ ಬ್ಯಾಂಕ್ ನ ಲಿಂಕ್ ಆಗಿರುವ ಫಾಸ್ಟ್ ಟ್ಯಾಗ್ ವೆಬ್ಸೈಟ್ ಗೆ ಹೋಗಿ.
 • ಈ ವೆಬ್ ಸೈಟ್ ತೆರೆದ ನಂತರ ನಿಮ್ಮ ಮೊಬೈಲ್ ಸಂಖ್ಯೆಯನ್ನು ಹಾಕಿ ಅದಕ್ಕೆ ಓಟಿಪಿ ಕಳುಹಿಸಲಾಗುತ್ತದೆ. ಬಳಿಕ ಪಾಸ್ವರ್ಡ್ ಹಾಕಿ ಲಾಗಿನ್ ಆಗಿ.
 • ಈಗ ನನ್ನ ಪ್ರೊಫೈಲ್ ಎನ್ನುವ ವಿಭಾಗ ಕಾಣಿಸುತ್ತದೆ. ಅಲ್ಲಿ ಕೆ ವೈ ಸಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 • ಮುಂದಿನ ಹಂತದಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ಅಗತ್ಯ ಇರುವ ವಿವರಗಳನ್ನು ಸಲ್ಲಿಸಿ. ಸಬ್ಮಿಟ್ ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿ.
 • ಇಷ್ಟು ಮಾಡಿದ್ರೆ, ಕೆವೈಸಿ ಪೂರ್ಣಗೊಳ್ಳುತ್ತದೆ ಹಾಗೂ ನಿಮ್ಮ ಫಾಸ್ಟ್ ಟ್ಯಾಗ್ ನವೀಕರಣಗೊಂಡ ಸ್ಥಿತಿಯನ್ನು ನೀವು ಕಾಣಬಹುದು.

FASTag KYC ಗೆ ಅಗತ್ಯ ಇರುವ ದಾಖಲೆಗಳು:

 1. Vehicle registration certificate
 2. Identity Proof
 3. Aadhaar Card
 4. Driving Licence
 5. Passport Size Photo

How to Know FASTag Renewal Status?

 • https://fastag.ihmcl.com ವೆಬ್ಸೈಟ್ ಗೆ ಹೋಗಿ. ಮೇಲ್ಭಾಗದಲ್ಲಿ ಇರುವ ಲಾಗಿನ್ ಟ್ಯಾಬ್ ಕ್ಲಿಕ್ ಮಾಡಿ. ಓ ಟಿ ಪಿ ಬರುತ್ತದೆ ಅದನ್ನು ನೋಂದಾಯಿಸಿಕೊಳ್ಳಿ.
 • ಲಾಗಿನ್ ಆದ ನಂತರ ಪ್ರೊಫೈಲ್ ವಿಭಾಗದಲ್ಲಿ ಫಸ್ಟ್ಯಾಗ್ ಕೆ ವೈ ಸಿ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರಲ್ಲಿ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳಬಹುದು. ಬ್ಯಾಂಕ್ ನ ವೆಬ್ಸೈಟ್ ಮೂಲಕವೂ ಕೆ ವೈ ಸಿ ಸ್ಥಿತಿ ಪರಿಶೀಲಿಸಬಹುದು.

advertisement

Leave A Reply

Your email address will not be published.