Karnataka Times
Trending Stories, Viral News, Gossips & Everything in Kannada

FASTag KYC: ಈಗ ಮನೆಯಲ್ಲೇ ಕುಳಿತು FASTag KYC ಅಪ್ಡೇಟ್ ಮಾಡಲು ಈ ವಿಧಾನ ಅನುಸರಿಸಿ!

advertisement

ಫಾಸ್ಟ್‌ಟ್ಯಾಗ್ (FASTag) ಅನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭ ಮಾಡಿದ್ದು ಪ್ರತಿ ಯೊಬ್ಬ ವಾಹನ ಸವಾರನಿಗೂ ಈ ನಿಯಮ ಅನ್ವಯ ವಾಗುತ್ತದೆ. ಇದು ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಎಲೆಕ್ಟ್ರಾನಿಕ್ ಸಂಗ್ರಹಣೆಯ ರೂಪದಲ್ಲಿ ಕಾರ್ಯನಿರ್ವಹಣೆ ಮಾಡುತ್ತದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುವಾಗ ವಾಹನ ಸವಾರರು ಫಾಸ್ಟ್​ಟ್ಯಾಗ್ ಮೂಲಕ ಟೋಲ್​ ಶುಲ್ಕವನ್ನು ​ಪಾವತಿಸಬೇಕಾಗುತ್ತದೆ. ಇದೀಗ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜನವರಿ 31ರ ಒಳಗೆ ಫಾಸ್ಟ್‌ ಟ್ಯಾಗ್‌ಗಳ ಕೆವೈಸಿ ಪೂರ್ಣಗೊಳಿಸಲು ಡೆಡ್‌ ಲೈನ್ ನೀಡಿದ್ದು ಈ ಬಗ್ಗೆ ವಾಹನ ಸವಾರರು ಈ‌ ಕೆಲಸ ಮೊದಲು ಮಾಡಬೇಕಿದೆ

ವಾಹನ ಚಾಲಕರು ತಮ್ಮ ಫಾಸ್ಟ್‌ ಟ್ಯಾಗ್ ಮಾಹಿತಿ ತಿಳಿದು ಕೊಳ್ಳಲು ಬ್ಯಾಂಕ್‌ ಸಂಪರ್ಕ ಅಥವಾ ‌ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಇರುವ ಟೋಲ್ ಬೂತ್‌ಗಳಲ್ಲೂ ಈ ಕುರಿತು ಮಾಹಿತಿ ಪಡೆಯಬಹುದಾಗಿದೆ. ನಿಮ್ಮ FASTag KYC ಮಾಹಿತಿಯನ್ನು ನವೀಕರಿಸಲು ಫಾಸ್ಟ್ಯಾಗ್ ನೀಡುವ ಬ್ಯಾಂಕ್‌ನ ಹತ್ತಿರದ ಶಾಖೆಗೆ ಭೇಟಿ ನೀಡುವ ಮೂಲಕ ನೀವು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. ಇದಕ್ಕಾಗಿ ಅಲ್ಲಿ ನೀಡಲಾದ ಅರ್ಜಿ ನಮೂನೆಯನ್ನು ಫಿಲ್ ಮಾಡಬೇಕಾಗುತ್ತದೆ.

FASTag KYC ಅನ್ ಲೈನ್ ಮೂಲಕ ಮಾಡಿ

advertisement

ಮೊದಲಿಗೆ ನೀವು IHMCL ಫಾಸ್ಟ್ಯಾಗ್ ಪೋರ್ಟಲ್‌ಗೆ ತೆರಳುವ ಮೂಲಕ ನೊಂದಣಿ ಮಾಡಬೇಕು. ನಂತರದಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಲಾಗ್ ಇನ್ ಮಾಡಿ, My ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿ. ಇಲ್ಲಿ KYC ಟ್ಯಾಬ್ ಮೇಲೆ ಕ್ಲಿಕ್ ಮಾಡಿ ವಿಳಾಸ, ದಾಖಲೆ ID ಮಾಹಿತಿ ನೀಡಿ. ಹೀಗೆ ಫಾಸ್ಟ್‌ಟ್ಯಾಗ್ ಅನ್ನು ಆನ್‌ಲೈನ್‌ನಲ್ಲಿ ನವೀಕರಣ ಮಾಡಬಹುದು.

NHAI ಪ್ರಿಪೇಯ್ಡ್ ವಾಲೆಟ್ ಪರಿಶೀಲನೆ ಹೇಗೆ?

ಮೊದಲಿಗೆ ನಿಮ್ಮ ಫೋನ್‌ನಲ್ಲಿ ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ಗೆ ತೆರಳಿ My FASTag ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. ಇಲ್ಲಿ‌ ನಿಮ್ಮ ಲಾಗಿನ್ ಮಾಹಿತಿ‌ ವಿವರಗಳನ್ನು ನಮೂದಿಸಿ. ಇಲ್ಲಿ ವಹಿವಾಟಿನ ‌ಮಿತಿ ಮಾಹಿತಿ‌ ದೊರೆಯುತ್ತದೆ.

advertisement

Leave A Reply

Your email address will not be published.