Karnataka Times
Trending Stories, Viral News, Gossips & Everything in Kannada

PM Janman Scheme: ಮೋದಿ ಸರ್ಕಾರದ ಜನ್ಮನ್ ಯೋಜನೆಯ ಮೊದಲ ಕಂತಿನ ಹಣ ಇವರಿಗೆ ಜಮೆ

advertisement

ಇಂದು ರಾಜ್ಯ ಮತ್ತು ಕೇಂದ್ರ ಸರಕಾರ ಬಡವರ್ಗದ ಜನತೆಯನ್ನು ಬೆಂಬಲಿಸಲು ಹಲವು ರೀತಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುತ್ತಲೆ ಬಂದಿದೆ.‌ಅದೇ ರೀತಿ ಕಾರ್ಮಿಕ ರನ್ನು, ರೈತರನ್ನು, ಮಹೀಳೆಯರನ್ನು ಬೆಂಬಲಿಸುತ್ತಾ ಬಂದಿದ್ದು ಕಿಸಾನ್ ಯೋಜನೆ, ಮುದ್ರಾಯೋಜನೆ‌ ಇತ್ಯಾದಿ ಯನ್ನು ಆರಂಭ ಮಾಡಿದೆ. ಕೇಂದ್ರ ಸರಕಾರವು ಅದಿವಾಸಿಗಳ ಅಭಿವೃದ್ಧಿಗಾಗಿ ಜನ್ಮನ್ ಯೋಜನೆ (PM Janman Scheme)ಯನ್ನು ಆರಂಭ ಮಾಡಿದ್ದು ಮೊದಲ ಕಂತು ಬಿಡುಗಡೆ ಗೊಂಡಿದ್ದು ಶೀಘ್ರದಲ್ಲೆ ಫಲಾನುಭವಿಗಳ ಕೈ ಸೇರಲಿದೆ ಎನ್ನಲಾಗಿದೆ.

ಯಾರಿಗಾಗಿ ಈ ಯೋಜನೆ

ಈ ಪಿಎಂ ಜನ್ಮನ್ ಯೋಜನೆಯು ಬುಡಕಟ್ಟು ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ಮುಖ್ಯ ಉದ್ದೇಶ ಆಗಿದೆ. ಆರ್ಥಿಕ ವಾಗಿ ಅವರನ್ನು ಸಬಲ ರನ್ನಾಗಿ ಮಾಡುವ ಮುಖ್ಯ ಉದ್ದೇಶ ಆಗಿದ್ದು ಸುಮಾರು ಒಂದು ಲಕ್ಷ ಫಲಾನುಭವಿಗಳಿಗೆ ಈ ಹಣ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.ಈ ಯೋಜನೆಯ ಮೂಲಕ 4.90 ಲಕ್ಷ ಮನೆಗಳನ್ನು ಒದಗಿಸುವ ಉದ್ದೇಶ ಹೊಂದಿದ್ದು ಪ್ರತಿ ಮನೆಗೆ 2.39 ಲಕ್ಷ ರೂಪಾಯಿ ಹಣವನ್ನು ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಮೂಲಕ ಫಲಾನುಭವಿಗಳಿಗೆ ನೀಡಲಾಗುತ್ತದೆ.

ಅರ್ಜಿ ಸಲ್ಲಿಸಬಹುದು

advertisement

ಈ ಯೋಜನೆಯ ಮೂಲಕ ಪರಿಶಿಷ್ಟ ಪಂಗಡಗಳಿಗೆ ಸಹಾಯಧನ ನೀಡುತ್ತದೆ. ಅಭಿವೃದ್ಧಿ ಕ್ರಿಯಾ ಯೋಜನೆಯಡಿ 2023-24 ರಿಂದ 2025-26 ರ ಆರ್ಥಿಕ ವರ್ಷಕ್ಕೆ 24,104 ಕೋಟಿ ರೂಪಾಯಿ ನಿಗದಿ ಪಡಿಸಿದ್ದು ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸಹಾಯಧನ ಪಡೆಯಲಿದ್ದಾರೆ.

ಈ ಸೌಲಭ್ಯ ಸಿಗುವಂತಾಗಬೇಕು

ಬಡ ವರ್ಗದ ಜನತೆಗೆ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು, ಸುಧಾರಿತ ಆರೋಗ್ಯ, ಶಿಕ್ಷಣ, ರಸ್ತೆ ಮತ್ತು ದೂರಸಂಪರ್ಕ ಸಂಪರ್ಕ, ಜೊತೆಗೆ ಸುಸ್ಥಿರ ಜೀವನೋಪಾಯಕ್ಕಾಗಿ ಅವಶ್ಯಕ ಸೌಲಭ್ಯ ಗಳು ಸಿಗುವಂತಾಗಬೇಕು.ಇದಕ್ಕಾಗಿ ಸರಕಾರ ಬುಡಕಟ್ಟು ಸಮುದಾಯದ ಅರ್ಹ ಫಲಾನುಭವಿಗಳಿಗೆ ಸಿಗುವಂತೆ‌ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ.ಅದೇ ರೀತಿ ಆಯುಷ್ಮಾನ್ ಕಾರ್ಡ್, ಪಿಎಂ ಕಿಸಾನ್ ಸಮ್ಮಾನ್ ನಿಧಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮುಂತಾದ ಯೋಜನೆಗಳನ್ನುಬಡವರ್ಗದ ಜನತೆಗೆ ನೀಡಬೇಕಾಗಿರುವುದು ಕಡ್ಡಾಯ ಎಂದು ಕೇಂದ್ರ ಸರಕಾರ ತಿಳಿಸಿದೆ.

advertisement

Leave A Reply

Your email address will not be published.