Karnataka Times
Trending Stories, Viral News, Gossips & Everything in Kannada

Income Tax: ಭಾರತದ ಈ ರಾಜ್ಯದಲ್ಲಿ ಜನರು ಯಾವುದೇ ರೀತಿಯ ಆದಾಯ ತೆರಿಗೆ ಕಟ್ಟಲ್ಲ, ಯಾವ ರಾಜ್ಯ ಗೊತ್ತೇ?

advertisement

ನೌಕರಿ ಮಾಡಿ ಸಂಬಳ ಪಡೆಯುತ್ತಿರುವ ವರ್ಗದ ಸಾಮಾನ್ಯ ಸಮಸ್ಯೆ ಎಂದರೆ ಆದಾಯ ತೆರಿಗೆ (Income Tax). ಸಂಬಳ ಹೆಚ್ಚಾಗುತ್ತಿದ್ದಂತೆ ಆದಾಯ ತೆರಿಗೆಯ ಸ್ಲಾಬ್ ಕೂಡ ಬದಲಾಗುವುದರಿಂದ ಸಂಬಳದ 15 ರಿಂದ 30 ಶೇಕಡದ ತನಕ ಆದಾಯ ಇನ್ಕಮ್ ಟ್ಯಾಕ್ಸ್ (Income Tax)  ರೂಪದಲ್ಲಿ ಹೋಗುತ್ತದೆ. ಇದನ್ನು ಕಡಿಮೆ ಮಾಡಲು ಅಥವಾ ಆದಾಯ ತೆರಿಗೆ ಪಾವತಿ ಮಾಡದೆ ಇರುವಂತೆ ಮಾಡಲು ಗೃಹ ಸಾಲ (Home Loan), ಇನ್ಶುರೆನ್ಸ್ (Insurance), ಪಿಪಿಎಫ್ (PPF) ಮುಂತಾದ ಹಲವು ಹೂಡಿಕೆಗಳನ್ನು ಮಾಡಬೇಕಾಗುತ್ತದೆ.

ಆದರೆ ಭಾರತದಲ್ಲಿ ತೆರಿಗೆ ವಿನಾಯಿತಿ ಇರುವ ಒಂದು ರಾಜ್ಯ ಇದೆ ಎಂದು ನಿಮಗೆ ಗೊತ್ತೇ ? ಸಿಕ್ಕಿಂ ರಾಜ್ಯದಲ್ಲಿ ಈ ವಿನಾಯಿತಿ ಲಭ್ಯವಿದೆ. ಇಲ್ಲಿಯ ಮೂಲ ನಿವಾಸಿಗಳು ಆದಾಯ ತೆರಿಗೆ ಕಟ್ಟಬೇಕಾಗಿಲ್ಲ ಇದು ನಿಮಗೆ ತಿಳಿದಿತ್ತೇ?

ಈಶಾನ್ಯ ರಾಜ್ಯಗಳ ವಿಶೇಷ ಸ್ಥಾನಮಾನ:

ದೇಶದ ಈಶಾನ್ಯ ರಾಜ್ಯಗಳು ಸಂವಿಧಾನದ 371 ವಿಧಿಯ ಪ್ರಕಾರ ವಿಶೇಷ ಸ್ಥಾನಮಾನವನ್ನು ಪಡೆದುಕೊಳ್ಳುತ್ತವೆ. ಇದೆ ಆಧಾರದಲ್ಲಿ ಸಿಕ್ಕಿಂನ ಸ್ಥಳೀಯ ನಿವಾಸಿಗಳಿಗೆ ಆದಾಯ ತೆರಿಗೆ ಕಾಯಿದೆ 1961ರ ಸೆಕ್ಷನ್ 10 (26 ಎಏ) ಅಡಿಯಲ್ಲಿ ಆದಾಯ ತೆರಿಗೆಯಿಂದ ವಿನಾಯಿತಿ ಸಿಗುತ್ತದೆ. ಇದು ಸಿಕ್ಕಿಂನ ಮೂಲ ನಿವಾಸಿಗಳಿಗೆ ಸಿಗುವ ವಿನಾಯಿತಿ ಆಗಿದ್ದು ಸುಪ್ರೀಂ ಕೋರ್ಟ್ (Supreme Court) ನ ತೀರ್ಪಿನ ಪ್ರಕಾರ ರಾಜ್ಯದ ಜನಸಂಖ್ಯೆಯ 95 ಶೇಕಡಾ ಜನರು ಈ ವಿನಾಯಿತಿ ಪಡೆದುಕೊಳ್ಳುತ್ತಾರೆ.

 

 

advertisement

ಮೊದಲು ಸಿಕ್ಕಿಂ ವಿಷಯ ಪ್ರಮಾಣ ಪತ್ರವನ್ನು ಹೊಂದಿರುವ ಜನರು ಮತ್ತು ಅವರ ವಂಶಸ್ಥರನ್ನು ಮಾತ್ರ ಈ ರಾಜ್ಯದ ಸ್ಥಳೀಯರು ಅಥವಾ ಮೂಲ ನಿವಾಸಿಗಳು ಎಂದು ಪರಿಗಣಿಸಲಾಗಿತ್ತು. ಸುಪ್ರೀಂ ಕೋರ್ಟ್ ಒಂದು ನಿರ್ಧಾರದಲ್ಲಿ 26ನೇ ಏಪ್ರಿಲ್ 1975ರ ವರೆಗೆ ಸಿಕ್ಕಿಂನಲ್ಲಿ ನೆಲೆಸಿದ್ದ ಎಲ್ಲಾ ಜನರನ್ನು ಸಿಕ್ಕಿಂ ಮೂಲ ನಿವಾಸಿಗಳು ಎಂದು ಪರಿಗಣಿಸಿ ಸ್ಥಾನಮಾನವನ್ನು ನೀಡಿತ್ತು. ಹೀಗಾಗಿ ರಾಜ್ಯದ ಹೆಚ್ಚಿನ ಜನತೆ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುತ್ತಾರೆ.

ಭಾರತದೊಂದಿಗೆ ಸಿಕ್ಕಿಂ ವಿಲೀನವಾದರೂ ಹಳೆಯ ಆದಾಯ ತೆರಿಗೆ ನೀತಿ ಜಾರಿ:

1642 ರಲ್ಲಿ ಸಿಕ್ಕಿಂ ರಾಜ್ಯವನ್ನು ಸ್ಥಾಪನೆ ಮಾಡಲಾಯಿತು. ಇದು ಭಾರತದ ಸ್ವಾತಂತ್ರ್ಯದ ಸಮಯದಲ್ಲಿ ಅಂದರೆ 1947ರಲ್ಲಿ ಭಾರತದ ಜೊತೆಗೆ ವಿಲೀನ ಆಗದೆ 1975ರಲ್ಲಿ ವಿಲೀನವಾಯಿತು. ಸಿಕ್ಕಿಂನ ಚೋಗ್ಯಾಲ್ ದೊರೆ 1948 ರಲ್ಲಿ ಸಿಕ್ಕಿಂ ಆದಾಯ ತೆರಿಗೆ ಕೈಪಿಡಿ ಬಿಡುಗಡೆ ಮಾಡಿದ್ದರು ಇದೇ ಕಾಯ್ದೆ ಈಗಲೂ ಮುಂದುವರೆಯುತ್ತಿದೆ. ಈ ಆದಾಯ ತೆರಿಗೆ ಕೈಪಿಡಿ ಪ್ರಕಾರ ರಾಜ್ಯದ ಜನರಿಂದ ಯಾವುದೇ ಆದಾಯ ತೆರಿಗೆಯನ್ನು ಸಂಗ್ರಹಿಸಬಾರದು ಎಂದು ನಿರ್ಧರಿಸಲಾಗಿತ್ತು.

ತೆರಿಗೆ ಮುಕ್ತ ರಾಜ್ಯ ಸ್ಥಾನಮಾನವನ್ನು ರದ್ದುಗೊಳಿಸುವ ಕೂಗು:

ಆದರೆ ಇಂದಿನ ದಿನದಲ್ಲಿ ಹಲವಾರು ಜನರು ಈ ಒಂದು ವಿಶೇಷ ಸ್ಥಾನಮಾನದ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಿಂದಾಗಿ ದೇಶಕ್ಕೆ ಸಲ್ಲಬೇಕಾದ ಆದಾಯ ತೆರಿಗೆ (Income Tax) ಸೇರುತ್ತಿಲ್ಲ. ಇದರಿಂದಾಗಿ ಸಿಕ್ಕಿಂ ಅನ್ನು ತೆರಿಗೆ ಮುಕ್ತ ರಾಜ್ಯ ಎಂಬ ಸ್ಥಾನಮಾನದಿಂದ ಮುಕ್ತಗೊಳಿಸಿ ಸಿಕ್ಕಿಂನ ಜನರಿಗೂ ಆದಾಯ ತೆರಿಗೆಯನ್ನು ಭಾರತದ ಇತರ ರಾಜ್ಯಗಳ ಪ್ರಕಾರವೇ ನಿಗದಿ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿದೆ

advertisement

Leave A Reply

Your email address will not be published.