Karnataka Times
Trending Stories, Viral News, Gossips & Everything in Kannada

Ration Card: ರೇಷನ್ ಕಾರ್ಡ್ ನಲ್ಲಿ ಮಕ್ಕಳ ಹೆಸರು ಸೇರಿಸುವ ಸುಲಭ ವಿಧಾನ ಇಲ್ಲಿದೆ!

advertisement

ಇಂದು ರೇಷನ್ ಕಾರ್ಡ್ (Ration Card) ಅನ್ನೋದು ಎಷ್ಟು ಮುಖ್ಯವಾದ ದಾಖಲೆ ಅನ್ನೊದು ಎಲ್ಲರಿಗೂ ತಿಳಿದೆ‌ ಇದೆ.‌ ಸರಕಾರದ ಯಾವುದೇ ಸೌಲಭ್ಯ ಪಡೆಯುದಾದ್ರೂ ಸಹ ಈ ರೇಷನ್ ಕಾರ್ಡ್ ಅಗತ್ಯ ವಾಗಿ ಬೇಕಾಗುತ್ತದೆ. ಈ ಕಾರ್ಡ್ ‌ಅನ್ನು ಬಡವರ್ಗದ ಜನತೆಗಾಗಿ ಜಾರಿಗೆ ತಂದಿದ್ದು ಆಹಾರ ಧಾನ್ಯ ಗಳನ್ನು ಸಹ ವಿತರಣೆ ಮಾಡಲಾಗುತ್ತದೆ. ಆದರೆ ಇಂದು‌ ಈ ಕಾರ್ಡ್ ಅನ್ನು ದುರುಪಯೋಗ ‌ಮಾಡುವ ಸಂಖ್ಯೆ ಯು ಹೆಚ್ಚಾಗಿದ್ದು ಈ ಬಗ್ಗೆ ಆಹಾರ ಇಲಾಖೆಯು‌‌‌ ಸೂಕ್ತವಾದ ನಿಯಮಗಳನ್ನು ಸಹ ಜಾರಿಗೆ‌ತಂದಿದೆ.

ವಿಂಗಡಣೆಯ ಹಂಚಿಕೆ:

ಈಗಾಗಲೇ ಈ ಕಾರ್ಡ್ ಅನ್ನು ಮೂರು ವಿಧಗಳಾಗಿ ವಿಭಜನೆ ಮಾಡಿದ್ದು ಅಂತ್ಯೋದಯ (Antyodaya), ಬಿಪಿಎಲ್ (BPL), ಎಪಿಎಲ್ ಕಾರ್ಡ್ (APL Card) ಗಳಾಗಿ ವಿಂಗಡಿಸಿದೆ. ಇದರಲ್ಲಿ ಬಡತನ ರೇಖೆಗಿಂತ ಕೆಳಗಿದ್ದ ಜನರಿಗೆ ಆದ್ಯತಾ ಮೇರೆಗೆ ಅಂತ್ಯೋದಯ (Antyodaya) ಮತ್ತು ಬಿಪಿಎಲ್ ಕಾರ್ಡ್ (BPL Card) ಅನ್ನು ನೀಡಲಾಗುತ್ತದೆ. ಕುಟುಂಬಕ್ಕೆ‌ ಇರುವ ಆದಾಯ ಮತ್ತು ಕುಟುಂಬದ ಗಾತ್ರದ ಆಧಾರದ ಮೇಲೆ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ.

ಮಗುವಿನ ಹೆಸರು ಸೇರಿಸಬೇಕೆ?

ಇಂದು ಈ ಪಡಿತರ ಚೀಟಿಯನ್ನು ಯಾವುದೋ ದಾಖಲೆಯನ್ನು ಮಾಡಿಸಬೇಕಾದರೂ ಸಹ ಅಗತ್ಯವಾಗಿ ಬೇಕಾಗುತ್ತದೆ. ಅದೇ ರೀತಿ ಸರಕಾರ ದಿಂದ ಸಿಗುವ ಸಬ್ಸಿಡಿ ಪ್ರಯೋಜನ ಪಡೆಯಲು ಸಹ ಅಗತ್ಯವಾಗಿ ಈ ರೇಷನ್ ಕಾರ್ಡ್ ಬೇಕಾಗುತ್ತದೆ. ಆದರೆ ಈ ಪಡಿತರ ಚೀಟಿಯಲ್ಲಿ ಮಕ್ಕಳ ಹೆಸರು ಸೇರ್ಪಡೆ ಅವಶ್ಯಕತೆ ಇರುತ್ತದೆ. ಇಂದು ಈ ರೇಷನ್ ಕಾರ್ಡ್ ಹೆಸರು ಸೆರ್ಪಡೆ ಗೆ ನೀವು ಕಛೇರಿ ಅಲೆಯಬೇಕಿಲ್ಲ. ಮನೆಯಲ್ಲಿ ಕುಳಿತು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ.

advertisement

ಈ ರೀತಿ ಮಾಡಿ:

ಮಕ್ಕಳ ಹೆಸರು ಸೆರ್ಪಡೆಗೆ ಸುಲಭ ವಿಧಾನ‌ ಇದ್ದು ಅನ್ ಲೈನ್ ಮೂಲಕ ಸಲ್ಲಿಸಲು ಅವಕಾಶ ಇದೆ.‌ ಆಹಾರ ಇಲಾಖೆಯ ಲಿಂಕ್ ಗೆ ತೆರಳಿ ‌ ಪಡಿತರ ಚೀಟಿಗೆ ಸದಸ್ಯರನ್ನು ಸೇರಿಸಿ ಆಪ್ಶನ್ ಅನ್ನು ಕ್ಲಿಕ್ ಮಾಡಿದ ನಂತರ ಇಲ್ಲಿ ವಿವರಗಳನ್ನು ಫಿಲ್ ಆಪ್ ಮಾಡಿ ಮತ್ತು ಬೇಕಾದ ಅಗತ್ಯ ದಾಖಲೆಗಳನ್ನು ಸಲ್ಲಿಕೆ ಮಾಡಿದ್ರೆ ಈ‌ ಕೆಲಸ ಸುಲಭ ವಾಗಿ‌ ಮನೆಯಿಂದಲೆ ನೀವು ಮಾಡಬಹುದು.

ಹೊಸ ಕಾರ್ಡ್ ಅರ್ಜಿ ಸಲ್ಲಿಕೆ:

ಇಂದು ಹೆಚ್ಚಿನ ಜನರು ಹೊಸ ಕಾರ್ಡ್ ಅರ್ಜಿ ಸಲ್ಲಿಕೆಗೆ ಕಾಯುತ್ತಿದ್ದು ಮುಂದಿನ‌ ದಿನದ ಅತೀ ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ ವಾಗುತ್ತದೆ ಎಂದು ಆಹಾರ ಇಲಾಖೆಯು ಮಾಹಿತಿ ‌ನೀಡಿದೆ. ಅದೇ ರೀತಿ ಆರು ತಿಂಗಳಿನಿಂದ ಪಡಿತರ ಪಡೆಯದೇ ಇದ್ದ ಫಲಾನುಭವಿಗಳ ರೇಷನ್ ಕಾರ್ಡ್ ಕೂಡ ನಿಷ್ಕ್ರಿಯ ವಾಗಬಹುದು‌. ಈ ಬಗ್ಗೆ ಆಹಾರ‌ ಇಲಾಖೆ ಎಚ್ಚರಿಕೆ ‌ನೀಡಿದೆ.

advertisement

Leave A Reply

Your email address will not be published.