Karnataka Times
Trending Stories, Viral News, Gossips & Everything in Kannada

Home Loan: ಕಡಿಮೆ ಬಡ್ಡಿದರದಲ್ಲಿ ಯಾವ ಬ್ಯಾಂಕ್ ನಲ್ಲಿ ಗೃಹಸಾಲ ಸಿಗುತ್ತದೆಂದು ಹುಡುಕುತ್ತಿದ್ದರೆ ಈ ಬ್ಯಾಂಕ್ ನತ್ತ ಲಕ್ಷ್ಯ ಕೊಡಿ!!

advertisement

ಮನೆ ಕಟ್ಟುವುದು ಪ್ರತಿಯೊಬ್ಬರ ಕನಸು. ಆದರೆ ಈ ಕನಸು ನನಸಬೇಕಾದರೆ ದುಡ್ಡು ಇದ್ದರೆ ಮಾತ್ರ ಸಾಧ್ಯ. ಮನೆ ಕಟ್ಟುವ ಸಲುವಾಗಿ ದುಡಿದು ಬರುವ ಸಂಬಳದಲ್ಲಿ ಅಲ್ಪ ಸ್ವಲ್ಪ ಹಣವನ್ನು ಕೂಡಿಡುತ್ತಾರೆ. ಹೀಗಾಗಿ ಕನಿಷ್ಠ ಪಕ್ಷ ಸ್ವಲ್ಪ ಹಣವನ್ನು ಉಳಿತಾಯ (Saving) ಮಾಡುತ್ತಾರೆ. ಮನೆ ಕಟ್ಟಲು ಬೇಕಾಗುವ ಕಚ್ಚಾಸಾಮಗ್ರಿಗಳ ಬೆಲೆಯೂ ತುಟ್ಟಿಯಾಗಿರುವ ಕಾರಣ ಸಾಲ ಮಾಡದೇನೆ ಮನೆ ಕಟ್ಟುವುದು ಕಷ್ಟದ ಮಾತು. ಹೀಗಾಗಿ ಮನೆ ನಿರ್ಮಾಣ ಮಾಡಲು ಸಾಲ (Loan) ಮಾಡುವುದು ಅವಶ್ಯಕ. ಈಗಾಗಲೇ ಹಲವು ಬ್ಯಾಂಕ್ ಗಳು ಗೃಹಸಾಲ (Home Loan) ವನ್ನು ನೀಡುತ್ತವೆ. ಹಾಗಾದ್ರೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಈ ಬ್ಯಾಂಕ್ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳಿ.

ಈ ಬ್ಯಾಂಕಿನಲ್ಲಿ ಗೃಹ ಸಾಲದ ಮೇಲಿನ ಬಡ್ಡಿಯು ತುಂಬಾ ಕಡಿಮೆಯಂತೆ:

advertisement

ಬ್ಯಾಂಕ್ ಗಳಲ್ಲಿ ಗೃಹಸಾಲ ತೆಗೆದುಕೊಳ್ಳುವಾಗ ಬಡ್ಡಿದರವನ್ನು ನೋಡಿಕೊಂಡು ಸಾಲ ಪಡೆದುಕೊಳ್ಳುವುದು ಮುಖ್ಯ. ಒಂದು ಬ್ಯಾಂಕ್ ಗೆ ಹೋಲಿಕೆ ಮಾಡಿದರೆ ಮತ್ತೊಂದು ಬ್ಯಾಂಕ್ ನಲ್ಲಿ ಗೃಹಸಾಲದ ಮೇಲಿನ ಬಡ್ಡಿದರ (Home Loan Interest) ದಲ್ಲಿ ವ್ಯತ್ಯಾಸವಿರುತ್ತವೆ. ಆದರೆ ಈ ಬ್ಯಾಂಕಿನಲ್ಲಿ ಬೇರೆ ಬ್ಯಾಂಕ್ ಗಳಿಗೆ ಹೋಲಿಕೆ ಮಾಡಿದರೆ ಗೃಹಸಾಲದ ಮೇಲಿನ ಬಡ್ಡಿದರವು ಸ್ವಲ್ಪ ಕಡಿಮೆಯೆನ್ನಬಹುದು.

 

 

ಗೃಹ ಸಾಲ ಪಡೆಯುವವರಿಗಾಗಿ ಬ್ಯಾಂಕ್ ಆಫ್ ಇಂಡಿಯಾ (Bank Of India) ವು 8.30% ಕಡಿಮೆ ದರದಲ್ಲಿ ಗೃಹ ಸಾಲವನ್ನು ನೀಡುತ್ತಿದೆ. ಇತರ ಬ್ಯಾಂಕುಗಳು 8.35 ರಿಂದ 8.60% ವರೆಗಿನ ಬಡ್ಡಿದರವಿದ್ದರೆ ಈ ಬ್ಯಾಂಕಿನಲ್ಲಿ ಬಡ್ಡಿದರವು ಕಡಿಮೆಯಿದೆ. ಆದರೆ ಬ್ಯಾಂಕ್ ಗಳಲ್ಲಿ ಗೃಹ ಸಾಲದ ಬಡ್ಡಿಯು ಕ್ರೆಡಿಟ್ ಸ್ಕೋರ್ (Credit Score), ಸಾಲದ ಮೊತ್ತ ಮತ್ತು ಅರ್ಜಿದಾರರ ಪ್ರೊಫೈಲ್ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಅಗ್ಗದ ಬಡ್ಡಿದರದಲ್ಲಿ ಸಿಗುವ ಗೃಹಸಾಲಕ್ಕೆ ಮೊದಲು ಬ್ಯಾಂಕ್ ಆಫ್ ಇಂಡಿಯಾವನ್ನು ಆಯ್ಕೆ ಮಾಡಿಕೊಳ್ಳಬಹುದು.

advertisement

Leave A Reply

Your email address will not be published.