Karnataka Times
Trending Stories, Viral News, Gossips & Everything in Kannada

Bank Locker: ಬ್ಯಾಂಕ್ ಲಾಕರ್ ಅಲ್ಲಿಟ್ಟ ಆಭರಣ, ಆಸ್ತಿ ಪತ್ರ ನಷ್ಟವಾದರೆ ಯಾರು ಹೊಣೆ?

advertisement

ಬ್ಯಾಂಕ್ ಲಾಕರ್‌ (Bank Locker) ನಲ್ಲಿ ಕ್ಯಾಶ್ ಇಡಬೇಕು ಅಂತ ನೀವು ಯೋಚಿಸುತ್ತಿದ್ದರೆ ಇನ್ನೊಮ್ಮೆ ಆಲೋಚನೆ ಮಾಡಿ. ಏಕೆಂದರೆ ಇದಕ್ಕೆ ಕಾರಣವಿದೆ. ಉತ್ತರ ಪ್ರದೇಶದ ಮುರಾದಾಬಾದ್‌ನಲ್ಲಿ ಒಬ್ಬ ಮಹಿಳೆ, ಹೀಗೆಯೇ ಲಾಕರ್‌ನಲ್ಲಿ ಕ್ಯಾಶ್ ಇಟ್ಟು ಬಾರಿ ಫಜೀತಿಗೆ ಸಿಲುಕಿಕೊಂಡಿದ್ದರು. ಲಾಕರ್‌ಗೆ ಗೆದ್ದಲು ಸೇರಿಕೊಂಡಿತ್ತು. ಅಷ್ಟೂ ನಗದು ಹಾಳಾಗಿ ಹೋಗಿಬಿಟ್ಟಿತ್ತು. ಹಾಗಿದ್ರೆ ಇಂಥ ನಷ್ಟಕ್ಕೆ ಬ್ಯಾಂಕ್ ಜವಾಬ್ದಾರನಾಗುತ್ತದೆಯಾ? ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಬ್ಯಾಂಕ್ ಲಾಕರ್‌ನಲ್ಲಿ ಏನನ್ನು ಇಡಬಹುದು..?

 

 

ಬ್ಯಾಂಕ್ ಲಾಕರ್ ಇಟ್ಟುಕೊಳ್ಳುವ ಉದ್ದೇಶ ನಗದು ಇಟ್ಟುಕೊಳ್ಳುವುದಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ವೆಬ್‌ಸೈಟ್‌ನಲ್ಲಿ ಪರಿಷ್ಕರಿಸಿದ ಸೇಫ್‌ ಡೆಪಾಸಿಟ್ ಲಾಕರ್ (Safe Deposit Locker) ಕರಾರಿನ ಪ್ರಕಾರ ಲಾಕರ್ ಅನ್ನು ಸರಿಯಾದ ಉದ್ದೇಶಕ್ಕೆ ಮಾತ್ರ ಬಳಕೆ ಮಾಡಬೇಕು. ಆಭರಣ (Jewelry) ಮತ್ತು ಡಾಕ್ಯುಮೆಂಟ್‌ಗಳನ್ನ (Documents) ಇಟ್ಟುಕೊಳ್ಳಲು ಮಾತ್ರ ಬಳಸಬಹುದು. ಕ್ಯಾಶ್‌ (Cash) ಅಥವಾ ಕರೆನ್ಸಿಯನ್ನು ಲಾಕರ್‌ನಲ್ಲಿ ಇಡುವ ಹಾಗಿಲ್ಲ. ಅಷ್ಟೇ ಅಲ್ಲ, ಕರಾರಿನ ಪ್ರಕಾರ, ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಅಥವಾ ಯಾವುದೇ ನಿಷೇಧಿತ ಸಾಮಗ್ರಿಗಳನ್ನು ಲಾಕರ್‌ನಲ್ಲಿ ಇಡುವಂತಿಲ್ಲ. ಹಾಳಾದ ಅಥವಾ ಹಾಳಾಗುವ ಸಾಮಗ್ರಿಗಳು, ರೇಡಿಯೋಆಕ್ಟಿವ್ ಅಥವಾ ಕಾನೂನು ಪ್ರಕಾರ ನಿರ್ಬಂಧಿಸಿದ ಸಾಮಗ್ರಿಗಳನ್ನು ಇಡುವಂತಿಲ್ಲ. ಬ್ಯಾಂಕ್ ಅಥವಾ ಬ್ಯಾಂಕ್‌ನ ಗ್ರಾಹಕರಿಗೆ ಅಪಾಯ ಒಡ್ಡುವಂತ ಸಾಮಗ್ರಿಗಳನ್ನೂ ಲಾಕರ್‌ನಲ್ಲಿ ಇಡುವಂತಿಲ್ಲ.

ಬ್ಯಾಂಕ್ ಹೊರಡಿಸಿದ ಸುತ್ತೋಲೆಗಳೇನು?

2021 ಆಗಸ್ಟ್‌ನಲ್ಲಿ ‘ಸೇಫ್ ಡೆಪಾಸಿಟ್ ಲಾಕರ್’ನ ಬಗ್ಗೆ ಭಾರತೀಯ ರಿಸರ್ವ್‌ ಬ್ಯಾಂಕ್ (Reserve Bank of India) ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಭೂಕಂಪ, ಪ್ರವಾಹ ಇತ್ಯಾದಿ ನೈಸರ್ಗಿಕ ವಿಪತ್ತಿನಿಂದಾಗಿ ಲಾಕರ್‌ನಲ್ಲಿ ಇಟ್ಟ ಸಾಮಗ್ರಿ ಹಾನಿಗೀಡಾದರೆ, ಅಥವಾ ಗ್ರಾಹಕರ ತಪ್ಪು ಅಥವಾ ನಿರ್ಲಕ್ಷ್ಯದಿಂದ ಹಾಳಾದರೂ ಕೂಡ ಬ್ಯಾಂಕ್ ಜವಾಬ್ದಾರನಾಗುವುದಿಲ್ಲ. ಆದರೆ ವಿಪತ್ತಿನಿಂದ ಲಾಕರ್ ಸಿಸ್ಟಮ್ (Locker System) ರಕ್ಷಿಸಲು ಬ್ಯಾಂಕ್‌ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸೇಫ್ ಡೆಪಾಸಿಟ್ ವಾಲ್ಟ್‌ಗಳು ಇರುವ ಪ್ರದೇಶವನ್ನು ಸುರಕ್ಷಿತವಾಗಿಡುವುದು ಬ್ಯಾಂಕ್‌ಗಳ ಜವಾಬ್ದಾರಿಯಾಗಿದೆ. ಆರ್‌ಬಿಐ ಪ್ರಕಾರ, ಅಗ್ನಿ ಅವಘಡ, ಕಳ್ಳತನ, ಕಟ್ಟಡ ಕುಸಿತ ಇತ್ಯಾದಿ ಘಟನೆ ಎದುರಾರಾದರೆ ಮಾತ್ರ ಅದಕ್ಕೆ ಬ್ಯಾಂಕ್ ಹೊಣೆಗಾರನಾಗುತ್ತದೆ.

advertisement

ಲಾಕರ್‌ನಲ್ಲಿ ಇಟ್ಟಿರುವ ಸಾಮಗ್ರಿಗಳು ಈ ಮೇಲೆ ನಮೂದಿಸಿದ ಕಾರಣಗಳಿಂದಾಗಿ ನಷ್ಟಕ್ಕೆ ಒಳಗಾದರೆ, ಬ್ಯಾಂಕ್‌ನ ಉದ್ಯೋಗಿಗಳ ಅಪ್ರಾಮಾಣಿಕತೆಯಿಂದಾಗಿ ನಷ್ಟವಾದರೆ, ಬ್ಯಾಂಕ್ ಹೊಣೆಯಾಗುತ್ತದೆ. ಇಂತಹ ಪ್ರಕರಣಗಳಲ್ಲಿ, ಲಾಕರ್‌ನ ವಾರ್ಷಿಕ ಬಡ್ಡಿಯ 100 ಪಟ್ಟು ದಂಡವನ್ನು ಬ್ಯಾಂಕ್ ಪಾವತಿ ಮಾಡಬೇಕಾಗುತ್ತದೆ. ಉದಾಹರಣೆಗೆ, ವಾರ್ಷಿಕ ಲಾಕರ್‌ ಬಾಡಿಗೆ ರೂ. 2000 ಆಗಿದ್ದರೆ, ಬ್ಯಾಂಕ್‌ ಇದಕ್ಕೆ ಪರಿಹಾರವಾಗಿ 100 ಪಟ್ಟು ಅಂದರೆ, 2 ಲಕ್ಷ ರೂ. ಪಾವತಿ ಮಾಡಬೇಕು. ಆದರೆ, ಲಾಕರ್‌ನಲ್ಲಿ ಇಟ್ಟ ಆಭರಣದ ಮೌಲ್ಯ 10 ಲಕ್ಷ ರೂ. ಆಗಿದ್ದರೆ, ನಿಮಗೆ ಭಾರಿ ನಷ್ಟ ಆದಂತಾಯಿತು. ಬ್ಯಾಂಕ್ ಲಾಕರ್ ಇನ್ಶುರೆನ್ಸ್‌ನ ಪ್ರೀಮಿಯಂ ತುಂಬಾ ಕಡಿಮೆ ಇರುತ್ತದೆ.

ವಿಮೆ ಯಾವಾಗ ಮಾಡಬೇಕು?

ಆಭರಣ ಸೇರಿದಂತೆ ಲಾಕರ್‌ನಲ್ಲಿ ಇರುವ ಎಲ್ಲ ಸಾಮಗ್ರಿಗಳಿಗೂ ವಿಮೆ ಮಾಡಿಸುವುದು ಅಗತ್ಯ. ಮನೆ ವಿಮೆ (Home Insurance) ಅಥವಾ ಕಂಟೆಂಟ್ ವಿಮೆ (Content Insurance) ಪ್ರಾಡಕ್ಟ್‌ಗಳ ಅಡಿಯಲ್ಲಿ ಬ್ಯಾಂಕ್ ಲಾಕರ್ (Bank Locker) ವಿಮೆಯನ್ನು ಜನರಲ್ ಇನ್ಶುರೆನ್ಸ್ ಕಂಪನಿಗಳು ಒದಗಿಸುತ್ತವೆ. ಉದಾಹರಣೆಗೆ, ಇಫ್ಕೋ ಟೋಕಿಯೋ ಜನರಲ್ ಇನ್ಶುರೆನ್ಸ್ ಬ್ಯಾಂಕ್ ಲಾಕರ್ ಪಾಲಿಸಿ ಹೊಂದಿದೆ. ಇದರಲ್ಲಿ 3 ರಿಂದ 40 ಲಕ್ಷ ರು.ವರೆಗೆ ಕವರೇಜ್ ಕೊಡುತ್ತದೆ. ಇಂತಹ ಪಾಲಿಸಿಗಳಲ್ಲಿ ಆಭರಣ, ಮನೆ ದಾಖಲೆಗಳು (House Documents), ಷೇರು ಸರ್ಟಿಫಿಕೇಟ್‌ಗಳು ಮತ್ತು ಪಾಸ್‌ಪೋರ್ಟ್‌ಗಳಿಗೆ ಕವರ್ ಒದಗಿಸುತ್ತದೆ. ಕಳ್ಳತನ, ದಾಂಧಲೆ, ಅಗ್ನಿ ಅನಾಹುತ ಮತ್ತು ಇತರ ಘಟನೆಗಳಿಂದ ಉಂಟಾದ ನಷ್ಟವನ್ನು ಕವರ್ ಮಾಡುತ್ತದೆ. ಅಮೂಲ್ಯ ಐಟಂನ ಬಾಳಿಕೆ ಅಥವಾ ಅದರ ಪ್ರಾಪರ್ಟಿಗೆ ಇನ್ಶುರೆನ್ಸ್ (Property Insurance) ಮಾಡಿಸಿಕೊಳ್ಳಬೇಕು. ಆರ್ಥಿಕವಾಗಿ ನಿಮಗೆ ನಷ್ಟವಾಗುವ ಯಾವುದೇ ಇದ್ದರೂ ಅದಕ್ಕೆ ವಿಮೆ ಮಾಡಿಸಿಕೊಳ್ಳಬೇಕು. ಯಾಕೆಂದರೆ, ಕಳ್ಳತನ ಅಥವಾ ದಾಂಧಲೆಯ ಪ್ರಕರಣ ಕಡಿಮೆ ಇರುತ್ತದೆ. ಲಾಕರ್ ಇನ್ಶುರೆನ್ಸ್‌ಗೆ ಪ್ರೀಮಿಯಂ ಹಣವು ವಿಮೆ ಮೊತ್ತವನ್ನು ಆಧರಿಸಿ ಇರುತ್ತದೆ.

ನೀವು ಲಾಕರ್ ಬಳಸುತ್ತಿದ್ದರೆ ಹೀಗೆ ಮಾಡೋದು ಬೆಸ್ಟ್:

 

 

ನೀವು ಬ್ಯಾಂಕ್ ಲಾಕರ್ ಇಟ್ಟುಕೊಂಡಿದ್ದರೆ, ಒಳಗೆ ಇಟ್ಟಿರುವ ಐಟಂಗಳಿಗೆ ಇನ್ಶುರೆನ್ಸ್ ಮಾಡಿಸಿಕೊಳ್ಳಿ. ಈ ಅಗ್ರೀಮೆಂಟ್‌ನಲ್ಲಿ ಅವೆಲ್ಲವೂ ಕವರ್ ಆಗುವುದಿಲ್ಲ. ಲಾಕರ್ ಅಗ್ರೀಮೆಂಟ್‌ನಲ್ಲಿ ಇರುವ ನಿಯಮಗಳನ್ನು ಸರಿಯಾಗಿ ಓದಿಕೊಳ್ಳಿ. ನೀವು ಎಂದಿಗೂ ಅಮೂಲ್ಯ ಐಟಂಗಳನ್ನು ಇನ್ಶೂರ್ ಮಾಡಿಟ್ಟುಕೊಳ್ಳಬೇಕು. ಇನ್ಶುರೆನ್ಸ್‌ನಲ್ಲಿ ಲಾಕರ್ ಒಳಗೆ ಇಟ್ಟಿರುವ ಸಾಮಗ್ರಿ ಮಾತ್ರವಲ್ಲ, ಹೊರಗೆ ಇಟ್ಟಿರುವ ಸಾಮಗ್ರಿಗೂ ಕವರ್ ಆಗುತ್ತದೆ. ನೀವು ಬ್ಯಾಂಕ್ ಲಾಕರ್‌ನಿಂದ ಐಟಂ ಅನ್ನು ಹೊರಗೆ ತೆಗೆದ ನಂತರವೂ ಅದಕ್ಕೆ ಕವರ್ ಇರುತ್ತದೆ. ಮದುವೆಗೆ ಅಂತ ಲಾಕರ್‌ನಿಂದ ಆಭರಣವನ್ನು ತೆಗೆದುಕೊಂಡಿದ್ದು, ಅದು ಕಳೆದು ಹೋದರೆ, ಇನ್ಶುರೆನ್ಸ್ ಕಂಪನಿಯಿಂದ ಆದ ನಷ್ಟಕ್ಕೆ ನೀವು ಕ್ಲೇಮ್ ಮಾಡಬಹುದು. ಆದರೆ, ನೀವು ಒಂದು ಎಫ್‌ಐಆರ್ ಅನ್ನು ಸಲ್ಲಿಸಬೇಕಿರುತ್ತದೆ.

advertisement

Leave A Reply

Your email address will not be published.