Karnataka Times
Trending Stories, Viral News, Gossips & Everything in Kannada

URBN E Bike: ಕೇವಲ 999 ರೂಪಾಯಿಗಳಿಗೆ ಬುಕ್ ಮಾಡಿ ಎಲೆಕ್ಟ್ರಿಕ್ ಬೈಕ್; 120km ಮೈಲೇಜ್ ಕೊಡುತ್ತೆ!

advertisement

ನೀವು ಹೊಸ ವರ್ಷಕ್ಕೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬುಕ್ ಮಾಡಬೇಕು ಅಂದುಕೊಂಡಿದ್ದೀರಾ? ಹಾಗಾದ್ರೆ ಇದು ಸೂಕ್ತ ಸಮಯ ನೋಡಿ. ಏಕೆಂದರೆ ಈ ಒಂದು ಕಂಪನಿಯ ದ್ವಿಚಕ್ರ ವಾಹನ ಬಹಳ ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಅಷ್ಟೇ ಅಲ್ಲ ಇತರ ಎಲ್ಲಾ ಕಂಪನಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Vehicle) ಗಳಿಗೆ ಹೋಲಿಸಿದರೆ ಈ ದ್ವಿಚಕ್ರ ವಾಹನ ನೋಡಲು ಆಕರ್ಷಕವಾಗಿದೆ. ಜೊತೆಗೆ ಹೆಚ್ಚು ಉತ್ತಮ ಕಾರ್ಯಕ್ಷಮತೆಯನ್ನು ಕೂಡ ಹೊಂದಿದೆ.

ಅರ್ಬನ್ ಇ ಬೈಕ್!

Motovolt URBN E Bike ಸಾಕಷ್ಟು ತಂತ್ರಜ್ಞಾನಗಳನ್ನು ಹೊಂದಿರುವ ಬೈಕ್ ಆಗಿದ್ದು, ನಿಮಗೆ ಓಡಿಸುವಾಗ ವಿಶೇಷವಾದ ಅನುಭವ ನೀಡುತ್ತದೆ. ಒಂದು ಚಾರ್ಜ್ ಗೆ 120 ಕಿಲೋಮೀಟರ್ ವರೆಗೆ ಸುಲಭವಾಗಿ ಪ್ರಯಾಣಿಸಬಹುದು. ಅಷ್ಟೇ ಅಲ್ಲ ನಿಮ್ಮ ಪ್ರಯಾಣವನ್ನು ಅತಿ ಅಗ್ಗವಾಗಿಸುತ್ತದೆ ಈ ಬೈಕ್. ಕೇವಲ ಏಳು ಪೈಸೆ ಪ್ರತೀ ಕಿಲೋಮೀಟರ್ ಚಾರ್ಜ್ ಆಗುತ್ತದೆ ಅಷ್ಟೇ.

Motovolt URBN E Bike ವಿಶೇಷತೆ!

advertisement

Motovolt URBN E Bike, BIS ಅನುಮೋದಿತ ಬ್ಯಾಟರಿ ಯನ್ನು ಹೊಂದಿದೆ. ಪೆಡಲ್ ಅಸಿಸ್ಟ್ ಸಂವೇದಕವನ್ನು ಅಳವಡಿಸಲಾಗಿದ್ದು, ಸ್ವಯಂ ಚಾಲಿತ ಸೇರಿದಂತೆ ಸಾಕಷ್ಟು ಹೊಸತನವನ್ನು ಈ ಬೈಕ್ ನಲ್ಲಿ ಅಳವಡಿಸಲಾಗಿದೆ. ಇಗ್ನಿಷನ್ ಕಿ ಸ್ವಿಚ್, ಹ್ಯಾಂಡಲ್ ಲಾಕ್, ಫ್ರಂಟ್ ಅಂಡ್ ಬ್ಯಾಕ್ ಡಿಸ್ಕ್ ಬ್ರೇಕ್, ಹೈಡ್ರೌಲಿಕ್ ರಿಯಲ್ ಶಾಕರ್ ಹೀಗೆ ಬೇರೆ ಬೇರೆ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಅಷ್ಟೇ ಅಲ್ಲ, URBN Motovolt ಇ ಬೈಕ್ ಒಂದು ಸ್ಮಾರ್ಟ್ ಇ ಸೈಕಲ್ ಕೂಡ ಆಗಿದ್ದು, ಸಮಗ್ರ ಸ್ಮಾರ್ಟ್ಫೋನ್ ಅಪ್ಲಿಕೇಶನ್ ನೊಂದಿಗೆ ಚಾಲಿತವಾಗಿರುತ್ತದೆ. ತೂಕ ಕೇವಲ 40 ಕೆಜಿ ಮಾತ್ರ. ಪ್ರತಿ ಗಂಟೆಗೆ 25km ವೇಗ ಪಡೆದುಕೊಳ್ಳುತ್ತದೆ. ಈ ಬೈಕ್ ನ ಬ್ಯಾಟರಿ ಚಾರ್ಜ್ ಮಾಡಲು ನಾಲ್ಕು ಗಂಟೆ ಬೇಕು.

Motovolt URBN ಇ ಬೈಕ್ ಬೆಲೆ!

ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಇ – ಬೈಕ್ ಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ಬೆಲೆಗೆ ನೀವು URBN Motovolt ಇ ಬೈಕ್ ಖರೀದಿ ಮಾಡಬಹುದು. ಇದರ ಬೆಲೆ ಎಕ್ಸ್ ಶೋರೂಮ್ ಪ್ರಕಾರ 49,999 ರೂಪಾಯಿಗಳಿಂದ ಆರಂಭವಾಗುತ್ತದೆ. ನೀವು ಅಧಿಕೃತ ವೆಬ್ಸೈಟ್ನಲ್ಲಿ ಅಥವಾ ನೂರಕ್ಕೂ ಹೆಚ್ಚಿನ ರಿಟೇಲ್ ಪಾಯಿಂಟ್ ಗಳಲ್ಲಿ ಕೇವಲ 999 ರೂಪಾಯಿಗಳಿಗೆ ಈ ಬೈಕ್ ಬುಕ್ ಮಾಡಬಹುದು. ನಂತರ ಪ್ರತಿ ತಿಂಗಳು EMI ಪಾವತಿಸಿದರೆ ಆಯ್ತು. ಅಂದ ಹಾಗೆ ಈ ಬೈಕ್ ಸೈಕಲ್ ಮಾದರಿಯದಾಗಿದ್ದು ಇದನ್ನ ಚಲಾಯಿಸಲು ಯಾವುದೇ ಪರವಾನಿಗೆ ಅಥವಾ ನೋಂದಣಿ ಮಾಡಿಕೊಳ್ಳುವ ಅಗತ್ಯವಿಲ್ಲ. ಪರಿಸರ ಸ್ನೇಹಿ ಇ – ಬೈಕ್ ಖರೀದಿ ಮಾಡಲು ಇಂದೇ ಬುಕಿಂಗ್ ಮಾಡಿ.

advertisement

Leave A Reply

Your email address will not be published.