Karnataka Times
Trending Stories, Viral News, Gossips & Everything in Kannada

Temple: ಇನ್ಮುಂದೆ ಇಂತಹ ಜನರಿಗೆ ರಾಜ್ಯದ ಯಾವುದೇ ದೇವಸ್ಥಾನದಲ್ಲಿ ಎಂಟ್ರಿ ಇಲ್ಲ, ಹೊಸ ರೂಲ್ಸ್ ಜಾರಿಗೆ!

advertisement

ಇತ್ತೀಚೆಗೆ ದೇವಸ್ಥಾನಕ್ಕೆ ಆಗಮಿಸುವವರ ಸಂಖ್ಯೆ ಹೆಚ್ಚಿದೆ. ಆದರೆ ಸೂಕ್ತ ರೀತಿಯಲ್ಲಿ ಆಗಮಿಸುತ್ತಿಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ.ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಬೇಕು ಅನ್ನೋ ಆಗ್ರಹ ಹಿಂದಿನಿಂದಲೂ ಕೇಳಿಬರುತ್ತಿದ್ದು ಇದೀಗ ಈ ವಿಚಾರವಾಗಿ ಹೊಸ ನಿಯಮ ಜಾರಿಗೆ ಬಂದಿದೆ. ದೇವಾಲಯಗಳಲ್ಲಿ ಇಂದು ಸಂಸ್ಕೃತಿ ಮೀರಿ ವೆಸ್ಟರ್ನ್‌ ಬಟ್ಟೆಗಳನ್ನು ಧರಿಸಿ ಬರುವ ಯುವಕ ಯುವತಿಯರಿಗೆ ಇನ್ಮುಂದೆ ದೇವರ ದರ್ಶನಕ್ಕೆ ಅವಕಾಶ ನೀಡಬಾರದು. ಈ ರೀತಿಯಾಗಿ ದೇವಾಲಯ (Temple)ಕ್ಕೆ ಭೇಟಿ ಕೊಡುವುದು ತಪ್ಪು ಎಂದು ಹೇಳಲಾಗುತ್ತಿದ್ದು ರಾಜ್ಯದ ಕೆಲವು ದೇವಾಲಯಗಳು ಭಾರತೀಯ ಉಡುಪುಗಳನ್ನು ಧರಿಸಿ ಬರುವವರಿಗೆ ಮಾತ್ರ ದೇವರ ದರ್ಶನ ಮಾಡುವ ಅವಕಾಶ ಇದೆ ಎಂದಿದ್ದಾರೆ.

ವಸ್ತ್ರ ಸಂಹಿತೆ ಬೋರ್ಡ್

ಇನ್ಮುಂದೆ ದೇವಸ್ಥಾನ ಗಳಿಗೆ ಅರೆಬರೆ ಬಟ್ಟೆ ಧರಿಸಿ ಬರುವವರಿಗೆ ಪ್ರವೇಶ ನಿರಾಕರಿಸಲಾಗುತ್ತದೆ. ಭಾರತೀಯ ಉಡುಪು ಧರಿಸಿ ಬರುವವರಿಗೆ ಮಾತ್ರ ದೇವಾಲಯಕ್ಕೆ ಪ್ರವೇಶ ನೀಡಲಾಗುತ್ತದೆ. ಈ ಮೂಲಕ ಈಗಾಗಲೇ ಕೆಲವು ದೇವಾಲಯಗಳಲ್ಲಿ ಈ ವಸ್ತ್ರ ಸಂಹಿತೆ ಬೋರ್ಡ್ ಹಾಕುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ.

advertisement

ಸರಕಾರದ ಆದೇಶವೇ?

ಮುಜರಾಯಿ ಇಲಾಖೆ ಈ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಆದರೆ ಆಯಾ ದೇವಸ್ಥಾನದ ಆಚರಣೆಗೆ ಅನುಗುಣವಾಗಿ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ಈ ಉಡುಪು ಧರಿಸುವಂತಿಲ್ಲ

ದೇವಾಲಯಕ್ಕೆ ಬರುವಾಗ ಹೆಚ್ಚಿನವರು ವೆಸ್ಟರ್ನ್ ಡ್ರೇಸ್ ಧರಿಸಿ ಬರುತ್ತಾರೆ, ಬರ್ಮುಡಾ, ಜೀನ್ಸ್, ಟಿಶರ್ಟ್ ಧರಿಸಿಕೊಂಡು ಬರುವಂತಿಲ್ಲ. ಅದೇ ರೀತಿ ಕೆಲವು ದೇವಾಲಯಗಳಲ್ಲಿ ಪುರುಷರು ಅಂಗಿ ಧರಿಸಿ ದೇವಾಲಯದ ಒಳಗೆ ಹೋಗುವಂತಿಲ್ಲ, ಅಂಗಿ ಹಾಗೂ ಬನಿಯನ್ ಕಳಚಿಟ್ಟು ದೇವಾಲಯ ಪ್ರವೇಶಿಸಬೇಕು ಎಂದಿದ್ದಾರೆ. ಈ ವಿಚಾರವಾಗಿ ಕಳೆದ ತಿಂಗಳು ರಾಜ್ಯದ ದೇವಾಲಯ ಮತ್ತು ಮಠಗಳ ಅರ್ಚಕರು ಮತ್ತು ಟ್ರಸ್ಟಿಗಳು ಚರ್ಚೆ ನಡೆಸಿದ್ದರು. ಸಭೆಯಲ್ಲಿ ರಾಜ್ಯದ ಎಲ್ಲ ಅರ್ಚಕರು ಹಾಗೂ ಟ್ರಸ್ಟಿಗಳು ಜನವರಿಯಿಂದ ಈ ನಿಯಮವನ್ನು ಜಾರಿ ಮಾಡಬೇಕೆಂದು ಒತ್ತಾಯ ಮಾಡಿದ್ದರು.

advertisement

Leave A Reply

Your email address will not be published.