Karnataka Times
Trending Stories, Viral News, Gossips & Everything in Kannada

PNB Bank: FD ದರಗಳನ್ನು ಹೆಚ್ಚಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಹೇಗಿದೆ ಬಡ್ಡಿದರ?

advertisement

ಇಂದು ಹೆಚ್ಚಿನ‌ ಜನರು ಸ್ವಲ್ಪವಾದರೂ ಹಣವನ್ನು ಸೆವಿಂಗ್ಸ್ ಮಾಡಿ ಇಟ್ಟಿರುತ್ತಾರೆ. ಅದರಲ್ಲೂ ಸೇವಿಂಗ್ ಮಾಡುವಾಗ ಯಾವ ಬ್ಯಾಂಕ್ ಉತ್ತಮ? ಬಡ್ಡಿದರ ಹೇಗಿದೆ ಎಂಬುದನ್ನು ಖಚಿತ ಪಡಿಸಿಕೊಂಡು ಆಯ್ಕೆ ಮಾಡುತ್ತಾರೆ‌. ಇತ್ತೀಚಿನ ದಿನದಲ್ಲಿ ಕೆಲವೊಂದು ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ‌ ಹೆಚ್ಚು ಮಾಡುತ್ತ ಬಂದಿದೆ. ಇದರಿಂದ ಎಫ್ ಡಿ ಇಟ್ಟ ಗ್ರಾಹಕರಿಗೆ ಖುಷಿ ಸಿಕ್ಕಿದಂತಾಗಿದೆ. ಇಂದು ಅನೇಕ ಬ್ಯಾಂಕ್‌ಗಳು ಈಗಾಗಲೇ ಎಫ್‌ಡಿ ಮೇಲಿನ ಬಡ್ಡಿ ದರಗಳನ್ನು ಹೆಚ್ಚಿಸಿದ್ದು ಇದೀಗ ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಕೂಡ ಎಫ್ ಡಿ ದರ ಹೆಚ್ಚು ಮಾಡಿದೆ.

ಎಷ್ಟು ಹೆಚ್ಚಳ?

ಇದೀಗ ಈ ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 3.50% ರಿಂದ 7.25% ರ ನಡುವಿನ ಬಡ್ಡಿದರಗಳನ್ನು ನೀಡಲಿದ್ದು, ಹಿರಿಯ ನಾಗರಿಕರಿಗೆ, ಬ್ಯಾಂಕ್ 4% ರಿಂದ 7.75% ರ ನಡುವೆ ನೀಡುತ್ತದೆ ಮತ್ತು ಸೂಪರ್ ಹಿರಿಯ ನಾಗರಿಕರಿಗೆ, 4.30% ರಿಂದ 8.05% ರ ತನಕ ಬಡ್ಡಿ ದರ ನೀಡುತ್ತದೆ.

ಸ್ಥಿರ ಠೇವಣಿ ಮೇಲೆ ಎಷ್ಟು ಬಡ್ಡಿದರ?

ಪಂಜಾಬ್ ನ್ಯಾಷನಲ್ ಬ್ಯಾಂಕ್ ಇತ್ತೀಚೆಗೆ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚು ಮಾಡಿದ್ದು ಈ ದರ ಏರಿಕೆಯು 2 ಕೋಟಿಗಿಂತ ಕಡಿಮೆ ಎಫ್‌ಡಿಗಳಿಗೆ ಅಪ್ಲೈ ಆಗುತ್ತದೆ. ಇದರಿಂದ ಬ್ಯಾಂಕ್ ನಲ್ಲಿ ಹಣ ಇಟ್ಟವರಿಗೆ ಖುಷಿಯ ವಿಚಾರ ಇದಾಗಿದೆ. ಇದೀಗ ಸಾಮಾನ್ಯ ನಾಗರಿಕರಿಗೆ 180 ರಿಂದ 270 ದಿನಗಳ ಅವಧಿಗೆ 5.5 ಶೇಕಡಾದಿಂದ 6 ಶೇಕಡಾ ವರೆಗೆ ಬಡ್ಡಿದರವನ್ನು ಹೆಚ್ಚು ಮಾಡಿದ್ದು 5.80 ರಿಂದ 6.25 ಪ್ರತಿಶತದಷ್ಟು ಬಡ್ಡಿ ಹೆಚ್ಚು ಮಾಡಿದೆ.

advertisement

ಹಿರಿಯ ನಾಗರಿಕರಿಗೆ ಎಷ್ಟು?

ಹಿರಿಯ ನಾಗರಿಕರ ಠೇವಣೆ ಮೇಲೆಯು ಬಡ್ಡಿದರ ಹೆಚ್ಚು ಮಾಡಿದ್ದು 46 ರಿಂದ 179 ದಿನಗಳ ಸಮಯದವರೆಗೆ ಹಿರಿಯ ನಾಗರಿಕರಿಗೆ ಶೇ.5 ಮತ್ತು ಸೂಪರ್ ಸೀನಿಯರ್ ನಾಗರಿಕರಿಗೆ ಶೇ.5.30.
180 ರಿಂದ 270 ದಿನಗಳ ಅವಧಿಗೆ ಹಿರಿಯ ನಾಗರಿಕರಿಗೆ ಶೇ.6.50 ಮತ್ತು ಸೂಪರ್ ಸೀನಿಯರ್ ಸಿಟಿಜನ್ ಗಳಿಗೆ ಶೇ.6.80 ರಷ್ಟು ಹೆಚ್ಚು ಮಾಡಿದೆ.

ಈ ಬ್ಯಾಂಕ್ ‌ನಲ್ಲಿ ಹೆಚ್ಚಳ

ಬ್ಯಾಂಕ್ ಆಫ್ ಇಂಡಿಯಾ, ಡಿಸಿಬಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕುಗಳು ಡೆಪಾಸಿಟ್ ದರಗಳನ್ನು ಹೆಚ್ಚು ಮಾಡಿದ್ದು ಇಲ್ಲಿ ಎಫ್ ಡಿ ಇಡಲು ಸೂಕ್ತ ಆಯ್ಕೆ ಯಾಗಿದೆ. ಬ್ಯಾಂಕುಗಳು ಈಗಾಗಲೇ ತಮ್ಮಲ್ಲಿನ ಠೇವಣಿ ದರಗಳನ್ನು ಪರಿಷ್ಕರಿಸುತ್ತಲೇ ಬರ್ತಾ ಇದ್ದು ಠೇವಣಿ ಇಟ್ಟವರಿಗೆ‌ ಇದರಿಂದ ಲಾಭ ದೊರಕಿದಂತಾಗುತ್ತದೆ.

advertisement

Leave A Reply

Your email address will not be published.