Karnataka Times
Trending Stories, Viral News, Gossips & Everything in Kannada

PM Kisan: ಪಿಎಂ ಕಿಸಾನ್ ಯೋಜನೆ 16ನೇ ಕಂತು ಈ ದಿನಾಂಕದಂದು ಬಿಡುಗಡೆ, ಹೀಗೆ ಸ್ಟೇಟಸ್ ಚೆಕ್ ಮಾಡಿಕೊಳ್ಳಿ!

advertisement

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ (PM Kisan Samman Nidhi Yojana) ಯ 16ನೇ ಕಂತು ಸದ್ಯದಲ್ಲಿಯೇ ಬಿಡುಗಡೆ ಆಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ರೈತರಿಗೆ ಅನುಕೂಲವಾಗುವಂತಹ ಪ್ರಧಾನಮಂತ್ರಿ ಯೋಜನೆ ಆರಂಭವಾಗಿ ಕೆಲವು ವರ್ಷಗಳು ಕಳೆದಿದ್ದು, ಸಾಕಷ್ಟು ರೈತರು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ.

PM Kisan Samman Nidhi Yojana:

 

 

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Samman Nidhi Yojana) ಅಡಿಯಲ್ಲಿ ರೈತರಿಗೆ ಪ್ರತಿ ವರ್ಷ 6,000 ಆರ್ಥಿಕ ನೆರವು ನೀಡಲಾಗುತ್ತಿದೆ. ಪ್ರತಿ 2,000ಗಳನ್ನು ಮೂರು ಕಂತುಗಳಲ್ಲಿ ಜಮಾ ಮಾಡಲಾಗುತ್ತಿದೆ. ಇಲ್ಲಿಯವರೆಗೆ ರೈತರಿಗೆ 15 ಕಂತುಗಳ ಮೂಲಕ 2,000ಗಳನ್ನು ಪ್ರತಿ ಗಂಟೆಗೆ ನೇರವಾಗಿ ರೈತರ ಖಾತೆಗೆ ಜಮಾ ಮಾಡಲಾಗಿದೆ.

advertisement

ಕಿಸಾನ್ ಸಮ್ಮಾನ ನಿಧಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಗಿದ್ದು, ಈಕೆ ವೈ ಸಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿದೆ. ರೈತರು ತಮ್ಮ ಖಾತೆಗೆ E-KYC ಮಾಡಿಸಿಕೊಳ್ಳದೆ ಇದ್ದರೆ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆಗುವುದಿಲ್ಲ. ಈ ಕಾರಣಕ್ಕೆ ಕಳೆದ ಎರಡು ಕಂತುಗಳ ಹಣ ಕೆಲವರ ಖಾತೆಗೆ ತಲುಪಿಲ್ಲ. ನೀವು ತಕ್ಷಣ ಈಕೆ ವೈ ಸಿ ಮಾಡಿಸಿಕೊಂಡು 16ನೇ ಕಂತಿನ ಹಣ ನಿಮ್ಮ ಖಾತೆಗೆ ತಲುಪುವಂತೆ ಮಾಡಿಕೊಳ್ಳಿ.

ಪಿ ಎಂ ಕಿಸಾನ್ ಸಮ್ಮಾನ್ ನಿಧಿ ಸ್ಟೇಟಸ್ ಚೆಕ್ ಮಾಡಿ:

ಸ್ಟೇಟಸ್ ಚೆಕ್ ಮಾಡಲು ಮೊದಲು https://pmkisan.gov.in/ ಈ ವೆಬ್ಸೈಟ್ಗೆ ಭೇಟಿ ನೀಡಿ. ಬಲಭಾಗದಲ್ಲಿ ಕಾಣಿಸುವ Know Your Status ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಈಗ ನೀವು ನಿಮ್ಮ ರಿಜಿಸ್ಟ್ರೇಷನ್ ನಂಬರ್ ನಮೂದಿಸಬೇಕಾಗುತ್ತದೆ. ಒಂದು ವೇಳೆ ರಿಜಿಸ್ಟ್ರೇಷನ್ ನಂಬರ್ ಗೊತ್ತಿಲ್ಲದೆ ಇದ್ದರೆ ಅಲ್ಲಿಗೆ ಮೇಲ್ಭಾಗದಲ್ಲಿ ಕಾಣಿಸುವ ನೌ ಯುವರ್ ರೆಜಿಸ್ಟ್ರೇಷನ್ ನಂಬರ್ ಎನ್ನುವ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.

ಬಳಿಕ ನೀವು ನಿಮ್ಮ ರಿಜಿಸ್ಟರ್ಡ್ ಮೊಬೈಲ್ ನಂಬರ್ (Mobile Number) ಅಥವಾ ಆಧಾರ್ ನಂಬರ್ (Aadhaar Card) ಅನ್ನು ನಮೂದಿಸಬೇಕು. ಬಳಿಕ ಕ್ಯಾಪ್ಚ ಸಂಖ್ಯೆಯನ್ನು ಹಾಕಿ. ಈಗ ಗೆಟ್ ಡೀಟೇಲ್ಸ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ ನಿಮಗೆ ರಿಜಿಸ್ಟ್ರೇಷನ್ ನಂಬರ್ ಸಿಗುತ್ತದೆ.

ಈಗ ಬ್ಯಾಕ್ ಹೋಗಿ ಈ ರಿಜಿಸ್ಟ್ರೇಷನ್ ನಂಬರ್ ಹಾಕಿ. ಬಳಿಕ ನೀವು ನಿಮ್ಮ ಖಾತೆಗೆ ಕಿಸಾನ್ ಸಮ್ಮಾನ ನಿಧಿ ಎಷ್ಟು ಕಂತಿನ ಹಣ ಜಮಾ ಆಗಿದೆ ಎನ್ನುವ ಮಾಹಿತಿ ತಿಳಿದುಕೊಳ್ಳುತ್ತೀರಿ. ಜೊತೆಗೆ ನಿಮ್ಮ ಖಾತೆಗೆ ಹಣ ಜಮಾ ಆಗದೇ ಇದ್ದರೆ ಯಾವ ಕಾರಣಕ್ಕೆ ಜಮಾ ಆಗಿಲ್ಲ ಎನ್ನುವ ಮಾಹಿತಿಯು ಸಿಗುತ್ತದೆ. ಆ ಕಾರಣವನ್ನು ನೋಡಿ ಖಾತೆಗೆ ಸಂಬಂಧಿಸಿದ ಬದಲಾವಣೆಗಳನ್ನು ಮಾಡಿಕೊಂಡರೆ ಮುಂದಿನ ಕಂತಿನ ಹಣ ಜಮಾ ಆಗುತ್ತದೆ.

advertisement

Leave A Reply

Your email address will not be published.