Karnataka Times
Trending Stories, Viral News, Gossips & Everything in Kannada

Udyamashilate: ಮಹಿಳೆಯರಿಗೆ ಈ ಯೋಜನೆಯಲ್ಲಿ ಉಚಿತ 10,000 ರೂಪಾಯಿ ಪಡೆಯಲು ಜನವರಿ 31 ಕೊನೆಯ ದಿನ, ಕೂಡಲೇ ಅಪ್ಲೈ ಮಾಡಿ

advertisement

ಇಂದು ಮಹೀಳಾ ಪರವಾದ ಯೋಜನೆಗಳನ್ನು ಸರಕಾರ ಹೆಚ್ಚು ಜಾರಿಗೆ ತರುತ್ತಿದೆ. ಈಗಾಗಲೇ ರಾಜ್ಯ ಸರಕಾರ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಇತ್ಯಾದಿ ಆರಂಭಿಸಿದೆ.‌ಈ ಯೋಜನೆ ಬಹಳಷ್ಟು ಬಡ ವರ್ಗದ ಮಹೀಳೆಯರಿಗೆ ಸಹಾಯವಾಗುತ್ತಿದೆ. ಅದೇ ರೀತಿ ಮಹೀಳೆಯರು ಸ್ವಾವಲಂಬಿ ಯಾಗಿ ಬದುಕು ಕಟ್ಟಿಕೊಳ್ಳಲು ಇಂದು ಸ್ವ ಉದ್ಯಮ ತರಭೇತಿ, ಕಡಿಮೆ ಬಡ್ಡಿಯಲ್ಲಿ ಸಾಲ, ಇತ್ಯಾದಿಯನ್ನು ಸರಕಾರ ರೂಪಿಸುತ್ತಲೆ ಬಂದಿದೆ.‌  ಅದೇ ರೀತಿ ಈ ಹೊಸ ಯೋಜನೆಯ ಮೂಲಕ ನೀವು ತರಭೇತಿ ಪಡೆದು ಕೊಳ್ಳಲು ಅರ್ಜಿ ಆಹ್ವಾನ ಮಾಡಲಾಗಿದೆ.

ತರಬೇತಿ ಯೋಜನೆ

ಇದೀಗ ಪರಿಶಿಷ್ಟ  ಜಾತಿಯ ಮಹಿಳಾ ಪದವೀಧರರು ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಐಐಎಂ ಬೆಂಗಳೂರು ಸಂಸ್ಥೆಯ ಮೂಲಕ ನೀಡಲಾಗುವ ಉದ್ಯಮಶೀಲತಾ (Udyamashilate) ತರಬೇತಿ ಅರ್ಜಿ ಆಹ್ವಾನ ಮಾಡಲಾಗಿದ್ದು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿ ಮುಗಿದ ನಂತರ ಪ್ರಮಾಣಪತ್ರ ಜೊತೆಗೆ 10,000 ರೂಪಾಯಿ ಶಿಷ್ಯವೇತನ ಸಿಗುತ್ತೆ. ಈ ತರಬೇತಿಯಲ್ಲಿ ಸ್ವಂತ ಉದ್ಯಮವನ್ನು ಸ್ಥಾಪಿಸುವ ಉದ್ದೇಶ, ಲಾಭ ಗಳಿಕೆ, ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಉದ್ಯಮ ನಿರ್ವಹಣೆ ಹೇಗೆ ಇತ್ಯಾದಿ ವಿಷಯಗಳ ಕುರಿತು ತರಬೇತಿಯನ್ನು ನೀಡಲಾಗುತ್ತದೆ.

ಇಲ್ಲಿ ಅರ್ಜಿ ಸಲ್ಲಿಸಿ

advertisement

ಅರ್ಜಿ ಸಲ್ಲಿಕೆ ಮಾಡುವ ಮಹೀಳೆಯರು ಜನವರಿ 31ರ ಒಳಗೆ ಅರ್ಜಿ ಸಲ್ಲಿಕೆ ಮಾಡಬಹುದು.‌ ಸಮಾಜ ಕಲ್ಯಾಣ ಇಲಾಖೆಯ ವೆಬ್ https://swdservices.karnataka.gov.in/ ಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಿ.ಹೆಚ್ಚಿನ ಮಾಹಿತಿಗಾಗಿ ಸಮಾಜ ಕಲ್ಯಾಣ ಇಲಾಖೆಯ ಸಹಾಯವಾಣಿ ಸಂಖ್ಯೆ 9482300400ಗೆ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

ಈ ನಿಯಮ ಇದೆ

ಈ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡುವ ಮಹೀಳೆಯು ಪರಿಶಿಷ್ಟ ಜಾತಿಯ ಮಹಿಳಾ ಪದವೀಧರರಾಗಿದ್ದು ಇವರ ವಯಸ್ಸು 21 ರಿಂದ 45ರ ಒಳಗೆ ಇರಬೇಕು. ಪ್ರತಿ ಅಭ್ಯರ್ಥಿಗೆ ತಗಲುವ ತರಬೇತಿ ಶುಲ್ಕವನ್ನು ಭಾರತೀಯ ವ್ಯವಸ್ಥಾಪ್ರಬಂಧ ಸಂಸ್ಥೆ ಬೆಂಗಳೂರು ಸಂಸ್ಥೆಗೆ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ನೀಡಲಾಗುತ್ತದೆ.

ಈ ದಾಖಲೆ ಬೇಕು

  • ಪದವಿ ಪ್ರಮಾಣ ಪತ್ರ
  • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಜಾತಿ ಪ್ರಮಾಣ ಪತ್ರ
  • ಪೋಟೋ
  • ಆದಾಯ ಪ್ರಮಾಣ ಪತ್ರ.
  • ಆಧಾರ್ ಕಾರ್ಡ್‌
  • ರೇಷನ್ ಕಾರ್ಡ್ ಇತ್ಯಾದಿ

advertisement

Leave A Reply

Your email address will not be published.