Karnataka Times
Trending Stories, Viral News, Gossips & Everything in Kannada

Marriage Loan: ಮದುವೆಗೆ ಸಾಲ ಬೇಕೇ? ಈ ನಾಲ್ಕು ಆಯ್ಕೆಯಲ್ಲಿ ಅತಿ ಸುಲಭವಾಗಿ ಸಾಲ ಪಡೆಯಬಹುದು!

advertisement

ಹಿಂದಿನ ಕಾಲದಲ್ಲಿ ಮದುವೆಗಳು ಬಹಳ ಸರಳವಾಗಿ ನಡೆಯುತ್ತಿದ್ದವು. ಅದರೆ ಇಂದು ಮಧ್ಯಮ ವರ್ಗದವರ ಮದುವೆಗಳು‌ ಕೂಡ ಅದ್ದೂರಿಯಾಗಿ ಸಾಲ ಮಾಡಿಯಾದರೂ ಮಾಡುತ್ತಾರೆ. ಅದ್ದೂರಿ ಮದುವೆ ಎಂದಾಗ ಖರ್ಚು ವೆಚ್ಚಗಳು ಕೂಡ ಹೆಚ್ಚಿರುತ್ತದೆ. ಹೀಗಾಗಿ ಸಾಲಕ್ಕೆ ಅವಲಂಬಿತರಾಗಲೇ ಬೇಕು. ಇಂದು ಹೆಚ್ಚಾಗಿ ಖಾಸಗಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಬೇಕಾದಷ್ಟು ಪ್ರಮಾಣದ ಸಾಲ (Loan) ಗಳನ್ನು ನೀಡುತ್ತವೆ.ಆದರೆ ಸಾಲವನ್ನು‌ಆಯ್ಕೆ ಮಾಡಿ ಕೊಳ್ಳುವಾಗ ಯಾವುದು ಉತ್ತಮ‌ ಆಯ್ಕೆ, ಬಡ್ಡಿ ಯಾವುದರಲ್ಲಿ ಕಡಿಮೆ ಎಂಬುದನ್ನು ತಿಳಿದುಕೊಂಡಿರಬೇಕು.

ಇಲ್ಲಿ ಉತ್ತಮ ಆಯ್ಕೆ:

advertisement

ನೀವು ಉದ್ಯೋಗದಲ್ಲಿದ್ದರೆ ‌ PF ಖಾತೆಯ ಮೂಲಕ‌ ಸಾಲ ಸೌಲಭ್ಯವನ್ನು ಪಡೆಯಲು ಉತ್ತಮ ಆಯ್ಕೆ ಯಾಗಿದೆ. EPFO ಅವಧಿ7 ವರ್ಷಗಳನ್ನು ಪೂರ್ಣಗೊಳಿಸಿದ್ದರೆ, ನಿಮ್ಮ ಸ್ವಂತ ಮದುವೆಗೆ, ಮಗ ಅಥವಾ ಮಗಳ ಮದುವೆಯ ಖರ್ಚಿಗೆ ಪಡೆಯಬಹುದು.

 

 

  • ಅದೇ ರೀತಿ LIC Policy ಯ ಮೇಲೆ ಸಾಲ ಪಡೆಯಬಹುದು. ಇಲ್ಲಿ ಹೂಡಿಕೆ ಮೂಲಕ ಎಫ್ ಡಿ ಮಾಡಿದ್ದರೆ ಸಾಲಕ್ಕೆ ಉತ್ತಮ ಆಯ್ಕೆಯು ಇಲ್ಲಿದೆ. ಜನರು ತಮ್ಮ ಎಫ್‌ಡಿಯನ್ನು ಇಲ್ಲಿ ಹೂಡಿಕೆ ಮಾಡಿ ಮದುವೆ ಇತ್ಯಾದಿಗಳಿಗೆ ಬಳಸುತ್ತಾರೆ, ಎಲ್ಐಸಿಯ ಎಲ್ಲಾ ಪಾಲಿಸಿಗಳ ಮೇಲೆ ಸಾಲ (Marriage Loan) ಸೌಲಭ್ಯ ಲಭ್ಯವಿದೆ. 80 ರಿಂದ 90 ಪ್ರತಿಶತದಷ್ಟು ಸಾಲವನ್ನು ಪಡೆಯಬಹುದು. ಪಾಲಿಸಿಯ ವಿರುದ್ಧ ಸಾಲವನ್ನು ನೀಡುವಾಗ, ವಿಮಾ ಕಂಪನಿಯು ನಿಮ್ಮ ಪಾಲಿಸಿಯನ್ನು ಅಡಮಾನ ಇಟ್ಟು ಸಾಲ ನೀಡುತ್ತದೆ.
  • ಅದೇ ರೀತಿ ಮದುವೆಗೆ ನೀವು ಚಿನ್ನದ ಸಾಲ (Gold Loan) ಕೂಡ ಪಡೆಯಬಹುದು.ಮದುವೆ ಖರ್ಚು ಪೂರೈಸಲು ಚಿನ್ನದ ಸಾಲವು ಸಹಾಯಕವಾಗಬಹುದು. ಇದು ತ್ವರಿತ ಗತಿಯಲ್ಲಿ ನಿಮಗೆ ಸಾಲ ನೀಡಲಿದ್ದು ಚಿನ್ನದ ಸಾಲದ ಅಡಿಯಲ್ಲಿ, 50 ಲಕ್ಷದವರೆಗೆ ನೀವು‌ ಸಾಲವನ್ನು ಪಡೆಯಬಹುದು. ಎಲ್ಲಾ ಸರ್ಕಾರಿ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಚಿನ್ನದ ಸಾಲಗಳನ್ನು ಒದಗಿಸುತ್ತವೆ
  • ಎಸ್ಬಿಐ ಅಥವಾ ಯಾವುದೇ ಇತರ ಬ್ಯಾಂಕ್‌ನಲ್ಲಿ ಸಂಬಳ ಖಾತೆಯನ್ನು ಹೊಂದಿದ್ದರೆ ಅಥವಾ ನೀವು ಪಿಂಚಣಿದಾರರಾಗಿದ್ದರೆ, ನೀವು ಎಸ್ಬಿಐ ಮದುವೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
  • ಅದೇ ರೀತಿ‌ ನೀವು ಮದುವೆಗಾಗಿ ನೀವು ವೈಯಕ್ತಿಕ ಸಾಲ (Personal Loan) ಆಯ್ಕೆಯನ್ನು ಆರಿಸಿಕೊಳ್ಳಬಹುದು. ನಿಮ್ಮ ಮಾಸಿಕ ಆದಾಯ ಮತ್ತು ಕ್ರೆಡಿಟ್ ಸ್ಕೋರ್ (Credit Score) ಇತ್ಯಾದಿಗಳನ್ನು ಅವಲಂಬಿಸಿ ಸಾಲವನ್ನು ನೀಡಲಾಗುತ್ತದೆ.

advertisement

Leave A Reply

Your email address will not be published.