Karnataka Times
Trending Stories, Viral News, Gossips & Everything in Kannada

Property Rights: ತಾಯಿಯ ಹೆಸರಿನಲ್ಲಿ ತಂದೆ ಆಸ್ತಿ ಖರೀದಿ ಮಾಡಿದ್ರೆ ಮಗನಿಗೆ ಪಾಲು ಸಿಗುತ್ತಾ? ಏನನ್ನುತ್ತೆ ಕಾನೂನು?

advertisement

ಇತ್ತೀಚಿಗೆ ಅಲಹಾಬಾದ್ ಕೋರ್ಟ್ ನಲ್ಲಿ ಆಸ್ತಿ (Property) ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಪ್ರಕರಣ ಒಂದು ದಾಖಲಾಗಿತ್ತು. ಈ ಪ್ರಕರಣವನ್ನು ಕೇಳಿ ವಾದ ವಿವಾದಗಳನ್ನು ಆಲಿಸಿರುವ ಅಲಹಾಬಾದ್ ಹೈಕೋರ್ಟ್ ನ್ಯಾಯಾಧೀಶರು ಈ ರೀತಿಯಾಗಿ ತೀರ್ಪನ್ನು ನೀಡಿದ್ದಾರೆ. ಇದು ಪ್ರತಿಯೊಬ್ಬರಿಗೂ ಕೂಡ ಅನ್ವಯವಾಗುತ್ತದೆ ಹಾಗೂ ಇದನ್ನು ಪಾಲನೆ ಮಾಡದೇ ಇದ್ದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುವ ಸಾಧ್ಯತೆಯೂ ಇರುತ್ತದೆ.

ಏನದು ಪ್ರಕರಣ?

ನಮ್ಮ ದೇಶದಲ್ಲಿ ಆಸ್ತಿಗೆ ಸಂಬಂಧಪಟ್ಟ ಹಾಗೆ ಬೇರೆ ಬೇರೆ ರೀತಿಯ ಕಾನೂನು ಇದೆ. ನಾವು ಯಾವಾಗ ಎಲ್ಲಿ ಬೇಕಾದರೂ ಎಂತಹ ಆಸ್ತಿಯನ್ನು ಖರೀದಿಸಬಹುದು. ಆದರೆ ಅದಕ್ಕೆ ಅದರದ್ದೇ ತೆರಿಗೆ ನಿಯಮಗಳನ್ನು ಕೂಡ ಪಾಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಒಬ್ಬ ಪತಿ ತನ್ನ ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿ (Property Purchase) ಮಾಡುವುದು ಸಹಜ. ಹೀಗೆ ತನ್ನ ಗೃಹಿಣಿ ಪತ್ನಿಯ ಹೆಸರಿನಲ್ಲಿ ಪತಿ ಆಸ್ತಿಯನ್ನು ಖರೀದಿ ಮಾಡಿದ್ರೆ ಆ ಆಸ್ತಿ ಯಾರ ಪಾಲಾಗುತ್ತದೆ ಅಥವಾ ಆಸ್ತಿಯ ಜವಾಬ್ದಾರಿ ಯಾರದ್ದು? ಎನ್ನುವ ಪ್ರಕರಣ ಅಲಹಾಬಾದ್ ಕೋರ್ಟ್ ಎದುರು ತರಲಾಗಿತ್ತು. ಇದರ ಬಗ್ಗೆ ನ್ಯಾಯಮೂರ್ತಿ ಅರುಣ್ ಸಿಂಗ್ ದೇಶ್ವಾಲ್ ಅವರು ತೀರ್ಪನ್ನು ನೀಡಿದ್ದಾರೆ.

advertisement

ಯಾವುದೇ ಒಬ್ಬ ಪತ್ನಿ ಗೃಹಿಣಿ ಯಾಗಿದ್ದು, ಅಂದರೆ ಆಕೆಗೆ ಯಾವುದೇ ಬೇರೆ ಆದಾಯದ ಮೂಲ ಹೊಂದಿರದೆ ಇದ್ದರೆ, ಆಕೆಯ ಹೆಸರಿನಲ್ಲಿ ಗಂಡ ಖರೀದಿ ಮಾಡಿದ ಆಸ್ತಿ ಕುಟುಂಬದ ಆಸ್ತಿ ಎನ್ನುವುದಾಗಿ ಪರಿಗಣಿಸಬೇಕು ಎಂದು ನ್ಯಾಯಮೂರ್ತಿ ಅರುಣ್ ಸಿಂಗ್ ಅವರು ತಿಳಿಸಿದ್ದಾರೆ.

ಹೆಂಡತಿಯ ಹೆಸರಿನಲ್ಲಿ ಆಸ್ತಿ ಖರೀದಿಸುವುದು ಹಿಂದೂ ಕುಟುಂಬದಲ್ಲಿ ಸಾಮಾನ್ಯವಾಗಿದೆ. ಮೃತ ತಂದೆಯ ಆಸ್ತಿಯಲ್ಲಿ ತನಗೆ ಶೇರು ನೀಡುವಂತೆ ಕೋರಿ ಒಬ್ಬ ಮಗ ಅಲಹಾಬಾದ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ. ಸಾಕ್ಷ್ಯಾಧಾರಾ ಕಾಯ್ದೆಯ ಸೆಕ್ಷನ್ 114ರ ಅಡಿಯಲ್ಲಿ ಪತಿ, ಸ್ವಂತ ಆದಾಯ ಇಲ್ಲದೆ ಇರುವ ತನ್ನ ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿಸಿದರೆ ಅದು ಕುಟುಂಬಕ್ಕೆ ಸೇರಿದ್ದು. ಪತ್ನಿಯ ಆದಾಯದಿಂದ ಖರೀದಿಸಿದ ಆಸ್ತಿ ಎನ್ನುವ ಬಗ್ಗೆ ಪುರಾವೆಗಳನ್ನು ಪ್ರಸ್ತುತಪಡಿಸದೆ ಇದ್ದರೆ ಆ ಆಸ್ತಿಯನ್ನು ಕುಟುಂಬದ ಆಸ್ತಿ ಎಂದೇ ಪರಿಗಣಿಸಬೇಕು ಎಂದು ಕೋರ್ಟ್ ತೀರ್ಮಾನ ನೀಡಿದೆ.

ತನ್ನ ತಂದೆ, ತಾಯಿಯ ಹೆಸರಿನಲ್ಲಿ ಆಸ್ತಿಯನ್ನು ಖರೀದಿಸಿದ್ದರೆ ತಾನು ಕೂಡ ನಾಲ್ಕನೆಯ ಒಂದು ಭಾಗದಷ್ಟು ಶೇರುದಾರ ಆಗಬೇಕು ಎಂದು ಒಬ್ಬ ವ್ಯಕ್ತಿ ಸಿವಿಲ್ ಮೂಖದ್ದಮೆ ಹೂಡಿದ್ದ. ಇದಲ್ಲದೆ ಮೂರನೇ ವ್ಯಕ್ತಿಗೆ ಆಸ್ತಿ ಮಾರಾಟ ಮಾಡದಂತೆ ನಿಷೇಧ ಹೇರಬೇಕು ಎಂದು ಕೂಡ ಆತ ಮನವಿ ಸಲ್ಲಿಸಿದ್ದ. ಹಾಗಾಗಿ ತಂದೆ ತನ್ನ ಪತ್ನಿಯ ಹೆಸರಿನಲ್ಲಿ ಆಸ್ತಿ ಖರೀದಿ ಮಾಡಿದರೆ ಆ ಆಸ್ತಿಯಲ್ಲಿ ಆಕೆಯ ಮಕ್ಕಳಿಗೆ ಸಂಪೂರ್ಣ ಪಾಲು ಕೊಡಬೇಕು ಎಂದು ಹೇಳುವಂತಿಲ್ಲ.

advertisement

Leave A Reply

Your email address will not be published.