Karnataka Times
Trending Stories, Viral News, Gossips & Everything in Kannada

Raita Siri: ರೈತರಿಗೆ ರಾಜ್ಯ ಸರಕಾರದಿಂದ ಭರ್ಜರಿ ಕೊಡುಗೆ, ಸಿಗಲಿದೆ 10,000 ರೂಪಾಯಿ ಉಚಿತ

advertisement

ಕೇಂದ್ರ ಮತ್ತು ರಾಜ್ಯ ಸರಕಾರಗಳು ಬಹಳ ಹಿಂದಿನಿಂದಲೂ ರೈತಪರ ಅಭಿವೃದ್ಧಿ ಕಾರ್ಯ ಚಟುವಟಿಕೆಗೆ ಬೆಂಬಲ ನೀಡುತ್ತಲೇ ಬಂದಿದೆ. ರಾಜ್ಯದಲ್ಲಿ ರೈತರಿಗೆ ಅನೇಕ ವಿಧವಾದ ಯೋಜನೆಗಳು ಲಭ್ಯವಾಗುತ್ತಿದ್ದು ಕೃಷಿ ಪರಿಕರ ವಿತರಣೆ, ಬೀಜ ರಸಗೊಬ್ಬರ ವಿತರಣೆ, ಬೆಲೆ ಬೆಂಬಲ ನೀತಿ, ಸಬ್ಸಿಡಿ ವಿತರಣೆ, ಸಹಾಯಧನ, ಬರ ನಷ್ಟಕ್ಕೆ ಪರಿಹಾರ ಇನ್ನೂ ಅನೇಕ ವಿಧವಾದ ಸೇವೆಯನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನೀಡುತ್ತಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರವು ಹೊಸದೊಂದು ಯೋಜನೆಗೆ ಮುಂದಾಗಿದ್ದು ರಾಜ್ಯದ ಬಡ ವರ್ಗದ ಜನರಿಗೆ ಈ ಯೋಜನೆ ಸಾಕಷ್ಟು ಸಹಕಾರಿ ಆಗಲಿದೆ.

ರೈತ ನಮ್ಮ ದೇಶದ ಬೆನ್ನೆಲುಬು ಎಂಬ ಮಾತಿದೆ ಆತ ಖುಷಿಯಿಂದ ಜೀವನ ನಡೆಸಿದರೆ ಅನ್ನದಾತರಿಂದ ಇಡೀ ದೇಶವೇ ಸಮೃದ್ಧವಾಗಿ ರೂಪುಗೊಳ್ಳಲಿದೆ. ಈಗಂತೂ ಕೃಷಿ ಚಟುವಟಿಕೆ ಕಣ್ಮರೆ ಆಗುತ್ತಿದ್ದು ಕೃಷಿಗೆ ಬೆಂಬಲದ ಅಗತ್ಯ ಕೂಡ ಬಹಳ ಇದೆ. ಈ ನಿಟ್ಟಿನಲ್ಲಿ ಕರ್ನಾಟಕದ ಕಾಂಗ್ರೆಸ್ ಸರಕಾರವು ನೂತನ ಯೋಜನೆ ಜಾರಿಗೆ ತರಲು ಮುಂದಾಗಿದ್ದು ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಆಹ್ವಾನಿಸಲಾಗಿದೆ.

ಯಾವುದು ಈ ಯೋಜನೆ?

 

 

advertisement

ರಾಜ್ಯದಲ್ಲಿ ಕೃಷಿಕರಿಗೆ ಬೊಂಪರ್ ಕೊಡುಗೆಯೊಂದು ದೊರೆಯಲಿದೆ. ಈ ಯೋಜನೆಯ ಹೆಸರು ರೈತ ಸಿರಿ ಯೋಜನೆ (Raita Siri Yojana) ಎಂದಾಗಿದ್ದು ಇದಕ್ಕೆ ಅರ್ಹ ರೈತರಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ರಾಜ್ಯದ ರೈತರು ಅರ್ಜಿ ಸಲ್ಲಿಸಬಹುದಾಗಿದ್ದು ಅರ್ಹರಿಗೆ 10 ಸಾವಿರ ರೂಪಾಯಿಗಳ ಸಹಾಯಧನ ಸಿಗಲಿದೆ. ಹಾಗಾದರೆ ಇದಕ್ಕೆ ಅರ್ಹತೆ ಏನು, ಯಾರಿಗಾಗಿ ಈ ಯೋಜನೆ , ಯಾವೆಲ್ಲ ದಾಖಲೆ ಪತ್ರಗಳು ಇಲ್ಲಿ ತುಂಬಾ ಅಗತ್ಯವಾಗಿದೆ ಎಂಬ ಇತ್ಯಾದಿ ಮಾಹಿತಿಯನ್ನು ಈ ಕೆಳಗಿನಂತೆ ನೀವು ತಿಳಿಯಬಹುದು.

ಈ ಹಿಂದೆ ಜಾರಿಗೆ ಬಂದಿತ್ತು

ರೈತ ಸಿರಿ ಯೋಜನೆ (Raita Siri Yojana) ಯನ್ನು 2019, 2020ರಲ್ಲಿಯೇ ಜಾರಿಗೆ ತರಲಾಗಿದ್ದು ಬಳಿಕ ಅದನ್ನು ಸ್ಥಗಿತ ಮಾಡಲಾಗಿದೆ. ಈಗ ಮತ್ತೆ 2024ರಲ್ಲಿ ರಾಜ್ಯ ಸರಕಾರ ಈ ಯೋಜನೆ ಮರು ಜಾರಿಗೆ ತರುತ್ತಿದೆ. ಇದರಲ್ಲಿ ಹತ್ತು ಸಾವಿರ ಧನ ಸಹಾಯದ ಜೊತೆಗೆ ನೀರಾವರಿ ಸೌಲಭ್ಯವನ್ನು ಸಹ ನೀಡಲಿದೆ. ಇಸ್ರೇಲ್ ಮಾದರಿಯ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ನಮ್ಮ ದೇಶದಲ್ಲಿ ಅಳವಡಿಸಲು ಈ ವಿಧಾನ ಸಹಕಾರಿ ಆಗಿದೆ. ಕೃಷಿಗೆ ಅಗತ್ಯವಾದ ಕೃಷಿ ಹೊಂಡ, ಬದು ನಿರ್ಮಾಣ, ಇತರ ವ್ಯವಸ್ಥೆ ನೀಡುವುದು ಸಹ ಇದರಲ್ಲಿ ಇದೆ‌.

ಈ ಅರ್ಹತೆ ಅಗತ್ಯ

  • ಕರ್ನಾಟಕದಲ್ಲಿ ವಾಸ್ತವ್ಯ ಇದ್ದ ಕೃಷಿಕರು ಈ ಯೋಜನೆಗೆ ಅರ್ಹರಾಗಿದ್ದಾರೆ.
  • ರಾಗಿ ಬೆಳೆಯುವ ಪ್ರಾಥಮಿಕ ಬೆಳೆಗಾರರಿಗೆ ಮೊದಲ ಆದ್ಯತೆ.
  • ಕನಿಷ್ಠ ಒಂದು ಹೆಕ್ಟೇರ್ ಭೂಮಿ ಹೊಂದಿರಬೇಕು.
  • ಅರ್ಜಿ ಸಲ್ಲಿಸಲು ರೈತರ ಆಧಾರ್ ಕಾರ್ಡ್, ಭೂ ದಾಖಲೆ, ನಿವಾಸ ಪತ್ರ, ಪಹಣಿ ಪತ್ರಗಳ ಪ್ರತಿ,ಬ್ಯಾಂಕಿನ ಖಾತೆ ವಿವರ, ಪಡಿತರ ಕಾರ್ಡ್ ಪ್ರತಿ , ಶಾಶ್ವತ ನಿವಾಸ ವಿವರ, ಪಾಸ್ ಪೋರ್ಟ್ ಫೋಟೊ ಇರಬೇಕು.
  • ಹೆಚ್ಚಿನ ಮಾಹಿತಿಗೆ ಹತ್ತಿರದ ಕೃಷಿ ಕೇಂದ್ರ ಸಂಪರ್ಕಿಸಿ.

advertisement

Leave A Reply

Your email address will not be published.