Karnataka Times
Trending Stories, Viral News, Gossips & Everything in Kannada

PM Awas Yojana: ಪ್ರಧಾನ ಮಂತ್ರಿ ಆವಾಸ್ ಯೋಜನೆ ಫಲಾನುಭವಿಗಳ ಪಟ್ಟಿ ಬಿಡುಗಡೆ, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ!

advertisement

ಇಂದು ಪ್ರತಿಯೊಬ್ಬರಿಗೂ ಹೊಸ ಮನೆಯನ್ನು ನಿರ್ಮಿಸುವ ಆಸೆ, ಆಕಾಂಕ್ಷೆಗಳು ಬಹಳಷ್ಟು ಇರುತ್ತದೆ. ಆದರೆ ಬಡ ವರ್ಗದ ಜನತೆಗೆ ಸ್ವಂತ ಸೂರನ್ನು ನಿರ್ಮಿಸುವುದು ಕಷ್ಟವೆ. ಇಂದು ಮನೆ ನಿರ್ಮಾಣ ದ ಖರ್ಚು ವೆಚ್ಚಗಳು ಕೂಡ ಹೆಚ್ಚಾಗಿರುವುದರಿಂದ ಹೆಚ್ಚಿನ ಜನರು ಸ್ವಂತ ಮನೆ ನಿರ್ಮಾಣಕ್ಕೆ ಹಿಂದೆ ಸರಿಯುತ್ತಾರೆ. ಆದ್ರೆ ಮದ್ಯಮ ವರ್ಗದ ಜನತೆಯು ಸ್ವಂತ ಮನೆ ನಿರ್ಮಿಸಬೇಕು ಎಂಬ ಉದ್ದೇಶ ದಿಂದ ಸರಕಾರ ಕೂಡ ಈ ಯೋಜನೆಯನ್ನು ನಿರ್ಮಿಸಿದ್ದು ಹೆಚ್ಚಿನ‌ ಜನರು ಈ ಯೋಜನೆಯ ಅವಕಾಶವನ್ನು ಪಡೆದು ಕೊಂಡಿದ್ದಾರೆ.

ಯಾವ ಯೋಜನೆ?

 

 

2022 ರ ಸಂದರ್ಭದಲ್ಲಿ ಎಲ್ಲ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಯನ್ನು ಕಲ್ಪಿಸಿ ಕೊಡಬೇಕು, ಸಹಾಯ ಧನ ನೀಡಬೇಕು ಎಂಬ ನಿಟ್ಟಿನಲ್ಲಿ ಕೇಂದ್ರ ಸರಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆ (PM Awas Yojana) ಆರಂಭ ಮಾಡಿದ್ದು ಈ ಯೋಜನೆ ಮೂಲಕ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ತಮ್ಮ ಸ್ವಂತ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ.

advertisement

ಪಟ್ಟಿ ಬಿಡುಗಡೆ:

ಇದೀಗ ಅರ್ಜಿ ಸಲ್ಲಿಸಿದ ಫಲಾನುಭವಿಗಳ ‌ಪಟ್ಟಿ ಬಿಡುಗಡೆ ಗೊಂಡಿದ್ದು ಅರ್ಜಿಯನ್ನು ಪರಿಶೀಲನೆ ಮಾಡಬಹುದಾಗಿದೆ. ನೀವು ಬಡತನ ರೇಖೆಗಿಂತ ಕೆಳಗಿದ್ದರೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ (PM Awas Yojana) ಸೌಲಭ್ಯ ವನ್ನು ಬಳಸಿಕೊಳ್ಳಬಹುದಾಗಿದೆ.ನಿಮ್ಮ ಅರ್ಜಿ ಪರಿಶೀಲನೆ ಮಾಡಲು ‌ ಗ್ರಾಮೀಣ ವಸತಿ ಯೋಜನೆಯ ಅಧಿಕೃತ ವೆಬ್ಸೈಟ್ನಲ್ಲಿ ತಿಳಿಯಬಹುದಾಗಿದೆ.ಮೊದಲಿಗೆ ಈ ವೆಬ್ ಸೈಟ್ ಗೆ ಲಾಗ್ ಇನ್ ಮಾಡಿ.ಪಿಎಂಐ ಗ್ರಾಮೀಣ ಪಟ್ಟಿ ಪುಟಕ್ಕೆ ಭೇಟಿ ನೀಡಿ, ಅಪ್ಲಿಕೇಶನ್ ಅನ್ನು ಟ್ರ್ಯಾಕ್ ಮಾಡಿ ನಿಮ್ಮ ಅಪ್ಲಿಕೇಶನ್ ಐಡಿಯನ್ನು ಬಳಸಿ.ಇಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆಮಾಡಿ. ತದ ನಂತರ ಕ್ಯಾಪ್ಚಾವನ್ನು ನಮೂದಿಸಿ ಮತ್ತು ಸರ್ಚ್ ಅನ್ನು ಕ್ಲಿಕ್ ಮಾಡಿ.ಇಲ್ಲಿ ನಿಮ್ಮ ಮಾಹಿತಿ ಅಡಕವಾಗಿರುತ್ತದೆ.

ಎಷ್ಟು ಹಣ ದೊರೆಯಲಿದೆ?

ಗ್ರಾಮೀಣ ಹಾಗೂ ನಗರ ಎರಡು ಪ್ರದೇಶಗಳಿಗೆ ಪ್ರತ್ಯೇಕವಾಗಿ PM Awas Yojana ಇದ್ದು 3 ಲಕ್ಷದಿಂದ 18 ಲಕ್ಷ ರೂ ವರೆಗಿನ ಆದಾಯ ಇರುವ ಕುಟುಂಬಗಳು ಈ ಯೋಜನೆಯನ್ನು‌ ಉಪಯೋಗ ಮಾಡ ಬಹುದಾಗಿದ್ದು‌ ಗ್ರಾಮೀಣ ಪ್ರದೇಶಗಳಿಗೆ 1.5 ಲಕ್ಷ ಮತ್ತು ನಗರ ಪ್ರದೇಶಗಳಿಗೆ 2.25 ಲಕ್ಷ ಅನುದಾನವನ್ನು ಪಡೆಯಬಹುದಾಗಿದೆ. ಅದೇ ರೀತಿ ಶೌಚಾಲಯ ನಿರ್ಮಾಣಕ್ಕಾಗಿ ಸಬ್ಸಿಡಿಗಳನ್ನು ಮತ್ತು ನಗರ ಪ್ರದೇಶದ ಫಲಾನುಭವಿಗಳಿಗೆ ಕಡಿಮೆ ಬಡ್ಡಿದರದ ಸಾಲಗಳನ್ನು ಕೂಡ ನೀಡಲಾಗುತ್ತದೆ.

advertisement

Leave A Reply

Your email address will not be published.