Karnataka Times
Trending Stories, Viral News, Gossips & Everything in Kannada

Profitable Crop: 1.5 ಎಕರೆಯಲ್ಲಿ 8 ಲಕ್ಷ ಆದಾಯ ಗಳಿಸುತ್ತಿರುವ ರೈತ! ತೋಟ ನೋಡಲು ಮುಗಿಬಿದ್ದ ಜನ

advertisement

ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೂಡ ಆರ್ಗ್ಯಾನಿಕ್ ಗೊಬ್ಬರ ಮತ್ತು ಸರ್ಕಾರದಿಂದ ನೀಡಲಾಗುವಂತಹ ಕೃಷಿ ಕೇಂದ್ರಗಳಲ್ಲಿ ಸಿಗುವಂತಹ ಗೊಬ್ಬರಗಳನ್ನು ಬಳಸಿ ಕೃಷಿಯನ್ನು ಮಾಡುತ್ತಾ ಇದ್ದಾರೆ. ಆದರೆ ಸರ್ಕಾರ ನೀಡುವಂತಹ ಗೊಬ್ಬರ ಮತ್ತು ಆರ್ಗಾನಿಕ್ ಔಷಧಿಗಳ ಮೂಲಕ ಭೂಮಿಯ ನಾಶ ಉಂಟಾಗುತ್ತದೆ ಎಂದು ಕೆಲವು ರೈತರ ವಾದ ಆಗಿದೆ. ಸಾವಯವ ಕೃಷಿಯನ್ನು ಅದರಲ್ಲಿಯೇ ಮಿಶ್ರ ಬೆಳೆಯನ್ನು ಬೆಳೆಯುತ್ತಾ ಜೊತೆಗೆ ಆರ್ಗಾನಿಕ್ ಗೊಬ್ಬರ (Organic Fertilizer) ಬಳಸದೆ ಮನೆಯಲ್ಲಿಯೇ ಕೊಟ್ಟಿಗೆ ಮತ್ತು ತೋಟದ ಗೊಬ್ಬರವನ್ನು ಬಳಸುತ್ತಾ ಕೃಷಿ ಮಾಡುವವರು ಇನ್ನು ಇದ್ದಾರೆ.

ತೆಂಗಿನ ಇಳುವರಿ:

ಇನ್ನು ಸಾವಯವ ಕೃಷಿಯಲ್ಲಿ ಮುಖ್ಯವಾಗಿ ನಾವು ಅಡಿಕೆ ತೋಟ (Arecanut Plantation) ಕೃಷಿಯನ್ನು ಮಾಡಲು ಬಯಸಿದ್ದೆ ಆದರೆ, ಅಡಿಕೆ ತೋಟದ ಜೊತೆಗೆ ಅದರ ಮಧ್ಯದಲ್ಲಿ ಏಲಕ್ಕಿ , ಮೆಣಸು ಮತ್ತು ಕಾಫಿ ಅಂತಹ ವಿವಿಧ ಮಿಶ್ರ ಬೆಳೆಯನ್ನು ಕೂಡ ಬೆಳೆಯಬಹುದಾಗಿದೆ. ಆದರೆ ಅಡಿಕೆ ತೋಟದ ಮಧ್ಯದಲ್ಲಿ ತೆಂಗನ್ನು ಬೆಳೆಯಬಾರದು. ತೆಂಗು ಬೆಳೆಯುವುದರಿಂದ ತೆಂಗಿನ ಇಳುವರಿ (Coconut Yield) ಯ ಜೊತೆಗೆ ಅದು ಅಡಿಕೆ ಮರದ ಇಳುವರಿಯನ್ನು ಕೂಡ ಕಡಿಮೆ ಮಾಡುತ್ತದೆ. ಆದ ಕಾರಣ ತೆಂಗು ಮತ್ತು ಅಡಿಕೆ ಎರಡು ಒಟ್ಟಾಗಿ ಬೆಳೆಯಬಾರದು ಎಂದು ತಿಳಿದಿರಬೇಕು.

 

Image Source: Vagad Agro Services

 

ಇನ್ನು ಕೃಷಿಯಲ್ಲಿ ಯಾವುದೇ ರೀತಿಯಾದಂತಹ ಆರ್ಗಾನಿಕ್ ಗೊಬ್ಬರಗಳು (Organic Fertilizer) ಮತ್ತು ಔಷಧಿಗಳನ್ನು ಸಿಂಪಡಿಸದೆ ತೋಟದಲ್ಲಿಯೇ ತಯಾರಿಸಲಾದಂತಹ ಗೊಬ್ಬರ ಮತ್ತು ಕೊಟ್ಟಿಗೆಯ ಗೊಬ್ಬರವನ್ನು ಹಾಕುತ್ತಾ ಬೆಳೆಯನ್ನು  ಇಳುವರಿ ಬರುವವರೆಗೂ ತಾಳ್ಮೆಯಿಂದ ಪೋಷಿಸುತ್ತಾ ಹೋಗಬೇಕು. ಹೀಗೆ ಮಾಡಿದರೆ ಸಾವಯವ ಕೃಷಿಯಿಂದಲೇ ಅಧಿಕವಾದಂತಹ ಲಾಭವನ್ನು ಪಡೆಯಬಹುದು ಮತ್ತು ಇಲ್ಲಿ ಮಿಶ್ರಬೆಳೆ (Profitable Crop) ಬೆಳೆಯುವುದರಿಂದ ವಾರ್ಷಿಕವಾಗಿ ಮತ್ತು ತಿಂಗಳಿಗೊಮ್ಮೆ ಯಾವುದಾದರೂ ಇಳುವರಿಯ ಮೂಲಕ ಆದಾಯವನ್ನು ಪಡೆದುಕೊಳ್ಳಬಹುದಾದಂತಹ ವಿಧಾನವು ಇದೆ.

 

advertisement

Image Source: Digpu

Profitable Crop In Mixed Farming:

ಇನ್ನು ಮಿಶ್ರ ಬೆಳೆಯಿಂದಾಗಿ (Mixed Cropping) ಯಾವುದೇ ರೀತಿಯಾದಂತಹ ನಷ್ಟವೂ ಇರದೆ, ವಿವಿಧ ಮೂಲದ ಆದಾಯವನ್ನು ನಾವು ಉತ್ಪಾದನೆ ಮಾಡಬಹುದಾಗಿದೆ. ಇನ್ನು ಅಡಿಕೆ ತೋಟದ (Arecanut Plantation) ಮಧ್ಯೆ ಬಾಳೆ ಮತ್ತು ಏಲಕ್ಕಿ (Cardamom), ಕಾಫಿ (Coffee), ಮೆಣಸು (Pepper) ಈ ರೀತಿ ವಿವಿಧ ಮಿಶ್ರ ಬೆಳೆಗಳು ಬೆಳೆಯಬಹುದು. ಏಲಕ್ಕಿ ಕೆಲವೊಮ್ಮೆ 20 ರಿಂದ 30 ಸಾವಿರದ ವರೆಗೂ ಒಟ್ಟಾಗಿ ಇಳುವರಿಯನ್ನು ನೀಡುತ್ತದೆ. ಇನ್ನು ಮೆಣಸು ಕೂಡ ಸುಮಾರು ಒಂದು ಬಾರಿ ಇಳುವರಿಗೆ 40,000 ದ ವರೆಗೂ ಕೂಡ ಆದಾಯವನ್ನು ನೀಡುತ್ತದೆ. ಇದರ ಜೊತೆಗೆ ಬಾಳೆ ಮತ್ತು ಕಾಫಿ ಕೃಷಿಕರು ತಮ್ಮ ಮನೆಗಾದರೂ ಉಪಯೋಗ ಮಾಡಿಕೊಳ್ಳಬಹುದು. ಅಥವಾ ಅದನ್ನು ತಾವೇ ಮಾರ್ಕೆಟ್ನಲ್ಲಿ ಮಾರಾಟವನ್ನು ಮಾಡಬಹುದು.

 

Image Source: Vajiram & Ravi

 

ಇನ್ನು ಕೃಷಿಕರು ಸಾವಯವ ಕೃಷಿಯನ್ನು ಮಾಡುವ ಮೂಲಕ ಆದಾಯವನ್ನು ಹೇಗೆ ಪಡೆದುಕೊಳ್ಳಬಹುದು ಎಂದರೆ ತಾವೇ ಅಕ್ಕಪಕ್ಕದ ತೋಟದ ಕೃಷಿಕರನ್ನು ಕೂಡ ಸೇರಿಸಿಕೊಂಡು ಒಂದು ಪುಟ್ಟ ಮಾರ್ಕೆಟ್ ರೀತಿ ರಚನೆ ಮಾಡಿಕೊಂಡು ಅದರಲ್ಲಿ ತಮ್ಮ ಬೆಳೆಯನ್ನು ಮರಾಟ ಮಾಡಬಹುದು. ಈ ರೀತಿ ಮಾರಾಟ ಮಾಡುವ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ಕೂಡ ತಪ್ಪಿಸಬಹುದಾಗಿದೆ. ಮತ್ತು ಇದರಿಂದ ಒಳ್ಳೆಯ ಆದಾಯವನ್ನು ಕೂಡ ಪಡೆಯಬಹುದಾಗಿದೆ. ಇನ್ನು ಹೂಡಿಕೆ ಮಾಡಿದ್ದಕ್ಕಿಂತ ಹೆಚ್ಚು ಲಾಭವನ್ನು ಕೂಡ ಸಾವಯವ ಕೃಷಿಯಿಂದ ಪಡೆಯಬಹುದಾಗಿದೆ.

advertisement

Leave A Reply

Your email address will not be published.