Karnataka Times
Trending Stories, Viral News, Gossips & Everything in Kannada

Arecanut Plantation: ಹಾಳಾಗಿದ್ದ ಅಡಿಕೆ ತೋಟಕ್ಕೆ ಈ ಟ್ರಿಕ್ಸ್ ಬಳಸಿ ಲಕ್ಷ ಲಕ್ಷ ಗಳಿಸಿದ ರೈತ! ಎತ್ತರಕ್ಕೆ ಬೆಳೆದ ಗಿಡಗಳು

advertisement

ಅಡಿಕೆ ತೋಟ (Arecanut Plantation) ಅಂದ ತಕ್ಷಣ ವರ್ಷದಲ್ಲಿ ನಾಲ್ಕೈದು ಬಾರಿ ಗೊಬ್ಬರ ಹಾಕಬೇಕು. ಅದಕ್ಕಾಗಿ ಕುರಿ ಗೊಬ್ಬರ, ಸಾವಯವ ಗೊಬ್ಬರ ಅಥವಾ ಹಸುವಿನ ಗೊಬ್ಬರವನ್ನು ಖರೀದಿ ಮಾಡಬೇಕು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಹಣವನ್ನ ಮೀಸಲಿಡಬೇಕು. ನಮಗೆ ಅಷ್ಟು ಫಸಲೆ jiಬರೋದಿಲ್ಲ. ಅಂತದ್ರಲ್ಲಿ ಇಷ್ಟೊಂದು ಹಣವನ್ನ ಗೊಬ್ಬರಕ್ಕಾಗಿ ಖರ್ಚು ಮಾಡೋದು ಹೇಗೆ ಅಂತ ಪ್ರತಿಯೊಬ್ಬ ಅಡಿಕೆ ಬಳೆಗಾರ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ಆದರೆ ನೀವು ಅಷ್ಟೆಲ್ಲ ತಲೆಕೆಡಿಸಿಕೊಳ್ಳುವುದು ಬೇಡ. ಈ ಒಬ್ಬ ರೈತ ಮಾಡಿರುವ ಕೆಲಸವನ್ನು ನಿಮ್ಮ ತೋಟದಲ್ಲಿಯೂ ಅಳವಡಿಸಿಕೊಂಡು ನೋಡಿ. ಯಾವ ಗೊಬ್ಬರನ್ನು ಖರೀದಿ ಮಾಡುವುದು ಬೇಡ  ನಿಮ್ಮ ತೋಟದಲ್ಲಿ ಅತ್ಯುತ್ತಮ ಫಸಲನ್ನು ಪಡೆದುಕೊಳ್ಳುತ್ತೀರಿ.

ಹಾಳಾಗಿದ್ದ ಅಡಿಕೆ ತೋಟಕ್ಕೆ ಹಸಿರೆಲೆ ಗೊಬ್ಬರವೇ ಸಾಕು:

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿಯ ನಿವಾಸಿ ಆಗಿರುವ ವಿಶ್ವನಾಥ್ ಆಚಾರ್ ಎನ್ನುವ ರೈತ ಇಂದು ತಮ್ಮ ಜಮೀನಿನಲ್ಲಿ ಕೇವಲ ಅಡಿಕೆ ಬೆಳೆ (Arecanut Plantation) ಯಿಂದ ಲಕ್ಷಗಟ್ಟಲೆ ಆದಾಯವನ್ನು ಪಡೆದುಕೊಳ್ಳುತ್ತಿದ್ದಾರೆ ಇದಕ್ಕೆ ಅವರು ಅನುಸರಿಸಿರುವ ಸಾವಯವ ಕೃಷಿ ಹಾಗೂ ಹಸಿರೆಲೆ ಗೊಬ್ಬರವೆ ಮುಖ್ಯ ಕಾರಣ.

ರೈತ ವಿಶ್ವನಾಥ್ ಆಚಾರ್ ಹೇಳುವಂತೆ:

“ಕಳೆದ ಕೆಲವು ವರ್ಷಗಳ ಹಿಂದೆ ನನ್ನ ತೋಟ ಆಚೆ-ಈಚೆ ಅವರು ಆಡಿಕೊಳ್ಳುವಷ್ಟು ಕೆಟ್ಟದಾಗಿ ಇತ್ತು, ಗಿಡಗಳು ಒಣಗಿ ಹೋಗಿದ್ದವು, ಕೆಂಪಾಗಿದ್ದವು ಫಸಲು ಸಿಗುವ ಮಾತೇ ಇರಲಿಲ್ಲ. ಆದರೆ ಈಗ ಹಾಗಿಲ್ಲ ಅದೇ ಅಕ್ಕ ಪಕ್ಕದವರು ನನ್ನ ತೋಟವನ್ನು ನೋಡಿ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುತ್ತಾರೆ. ಇದಕ್ಕೆ ಕಾರಣ ನಾನು ಬಳಸುತ್ತಿರುವ ಹಸಿರೆಲೆ ಗೊಬ್ಬರ. ಇತ್ತೀಚಿನ ಕೆಲವು ವರ್ಷಗಳಲ್ಲಿ ಕುರಿ ಕೋಳಿ ಗೊಬ್ಬರಗಳನ್ನೆಲ್ಲ ನಾನು ನನ್ನ ತೋಟಕ್ಕೆ ಬಳಸಿಲ್ಲ. ಅದರ ಬದಲು ಸೆಣಬು ಮತ್ತು ಡಯಾಂಚ ಮಿಶ್ರಿತ ಗಿಡಗಳನ್ನು ಬೆಳೆಸಿ ಅದರಿಂದ ಟನ್ ಗಟ್ಟಲೆ ಗೊಬ್ಬರ ಉತ್ಪಾದನೆ ಮಾಡುತ್ತೇನೆ ಇದನ್ನೇ ನನ್ನ ತೋಟಕ್ಕೆ ಬಳಸುತ್ತೇನೆ. ಇದರಿಂದ ಸಾಕಷ್ಟು ಗೊಬ್ಬರಕ್ಕೆ ಖರ್ಚು ಮಾಡುವ ಹಣ ಉಳಿತಾಯ ಆಗಿರುವುದು ಮಾತ್ರವಲ್ಲದೆ ಕೈತುಂಬ ಆದಾಯ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗಿದೆ” ಅನ್ನುತ್ತಾರೆ ರೈತ ವಿಶ್ವನಾಥ್.

advertisement

ಏನಿದು ಹಸಿರೆಲೆ ಗೊಬ್ಬರ?

 

Image Source: Mathrubhumi English

 

ನಿಮ್ಮ ತೋಟಗಳಲ್ಲಿ (Arecanut Plantation) ಸೆಣಬು ಮತ್ತು ಡಯಾಂಚ ಮಿಶ್ರಿತ ಹಸಿರೆಲೆ ಗೊಬ್ಬರ ತಯಾರಿಸಲು ನಿಮ್ಮ ತೋಟದಲ್ಲಿಯೇ ಗಿಡಗಳನ್ನು ಬೆಳೆಸಿ ಕೃತಕ ನೈಟ್ರೋಜನ್ ಸೃಷ್ಟಿಸಿಕೊಳ್ಳಬಹುದು. ರೈಸೋಬಿಯಂ (Rhizobium) ಮೂಲಕ ಮಣ್ಣನ್ನು ಮೃದುವಾಗಿಸಿಕೊಳ್ಳಬಹುದು. ನೀವು ಒಂದು ವರ್ಷ ಡಯಾಂಚ ಬೆಳೆಸಿ ಇನ್ನೊಂದು ವರ್ಷ ಸೆಣಬು ಬೆಳೆಸಿ ಇವುಗಳ ಮೂಲಕ ಹಸಿರು ಎಲೆ ಗೊಬ್ಬರವನ್ನು ತಯಾರಿಸಿಕೊಳ್ಳಬಹುದು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ. ಜೊತೆಗೆ ಮಣ್ಣಿಗೆ ನೀವು ಡಾಕ್ಟರ್ ಸಾಯಿಲ್ ಲಿಕ್ವಿಡ್ ಬಳಸಿದಾಗ ಮಣ್ಣಿನಲ್ಲಿ ಎರೆಹುಳುಗಳ ಬೆಳವಣಿಗೆ ಜಾಸ್ತಿಯಾಗುತ್ತದೆ. ಈ ಎರೆಹುಳುಗಳು ಮಣ್ಣಿನಲ್ಲಿ ಫಲವತ್ತತೆ ಜಾಸ್ತಿ ಮಾಡುವುದು ಮಾತ್ರವಲ್ಲದೆ ನೀರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯನ್ನು ಹೆಚ್ಚಿಸುತ್ತವೆ.

ಡಾಕ್ಟರ್ ಸಾಯಿಲ್ ಬಳಸಿದರೆ ಭೂಮಿಯಲ್ಲಿ ಕಾರ್ಬನ್ ಪ್ರಮಾಣ ಹೆಚ್ಚಾಗುತ್ತದೆ. ಹಸಿರು ಗೊಬ್ಬರವನ್ನು ನೀವೇ ತಯಾರಿಸುವುದರಿಂದ ಎಕರೆಗೆ 25 ಟನ್ ನಷ್ಟು ಗೊಬ್ಬರ ತಯಾರಿಸಿಕೊಳ್ಳಬಹುದು. 25 ಟನ್ ಹಸಿರೆಲೆ ಗೊಬ್ಬರ ಖರೀದಿ ಮಾಡುವುದಕ್ಕೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತದೆ ಅದರ ಬದಲು ನೀವೇ ನಿಮ್ಮ ತೋಟದಲ್ಲಿ ಹಸಿರು ಎಲೆ ಗೊಬ್ಬರ ಮಾಡುವಂತಹ ಗಿಡಗಳನ್ನು ಬೆಳೆಸಿ ಅವುಗಳ ತ್ಯಾಜ್ಯದಿಂದ ಗೊಬ್ಬರ ತಯಾರಿಸಿಕೊಳ್ಳಬಹುದು.

ಹೀಗಾಗಿ ನೀವು ಕುರಿ ಗೊಬ್ಬರ, ಹಸುವಿನ ಗೊಬ್ಬರ ಖರೀದಿಸುವ ಅಗತ್ಯ ಇರುವುದಿಲ್ಲ. ಈ ಹಸಿರೆಲೆ ಗೊಬ್ಬರ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳನ್ನು ಎನ್ರಿಚ್ ಮಾಡುತ್ತದೆ. ಹಾಗೇನೆ ಇದರಿಂದ ನೀವು ಮಣ್ಣಿನ ಫಲವತ್ತತೆನ ಹೆಚ್ಚಿಸಿಕೊಂಡು ಉತ್ತಮ ಫಸಲನ್ನು ಪ್ರತಿ ವರ್ಷ ಪಡೆದುಕೊಳ್ಳಬಹುದು. ಈ ರೀತಿ ಹಸಿರೆಲೆ ಗೊಬ್ಬರವನ್ನು ಭೂಮಿಗೆ ಹಾಕುವುದರಿಂದ ಅಡಿಕೆ ಬೆಳೆಗೆ ಯಾವುದೇ ಕೀಟಗಳ ಬಾಧೆ ಇರುವುದಿಲ್ಲ. ರೋಗ ನಿರೋಧಕ ಶಕ್ತಿ ಗಿಡಗಳಲ್ಲಿ ಹೆಚ್ಚಾಗುತ್ತೆ. ಅದೇ ರೀತಿ ಗಿಡಗಳಲ್ಲಿ ಉತ್ತಮ ಚಿಗುರು ಒಡೆದು ಹೆಚ್ಚು ತೂಕ ಹೊಂದಿರುವ ಅಡಿಕೆಯನ್ನು ಪ್ರತಿ ಗೊನೆಯಲ್ಲಿ ಪಡೆದುಕೊಳ್ಳಲು ಸಾಧ್ಯವಿದೆ.

ವಿಶ್ವನಾಥ್ ಎನ್ನುವ ರೈತ ಈ ರೀತಿ ಹಸಿರು ಎಲೆ ಗೊಬ್ಬರವನ್ನು ತಾವೇ ತಯಾರಿಸಿ ಭೂಮಿಗೆ ಹಾಕಿ ಅಡಿಕೆ ಬೆಳೆಯಲ್ಲಿ ಲಕ್ಷಾಂತರ ರೂಪಾಯಿಗಳ ಆದಾಯ ಗಳಿಸುತ್ತಿದ್ದಾರೆ. ನೀವು ಕೂಡ ಅಡಿಕೆ ಬೆಳೆಗಾರರಾಗಿದ್ರೆ ತಪ್ಪದೇ ಈ ಪದ್ಧತಿಯನ್ನು ಅನುಸರಿಸಿ ಹೊರಗಿನಿಂದ ಗೊಬ್ಬರ ತರಿಸುವ ಹಣವನ್ನು ಉಳಿಸಿ ಜೊತೆಗೆ ಉತ್ತಮ ಆದಾಯವನ್ನು ಗಳಿಸಿ.

advertisement

Leave A Reply

Your email address will not be published.