Karnataka Times
Trending Stories, Viral News, Gossips & Everything in Kannada

Ratan Tata: ಯಾವುದೇ ಕಂಪನಿಯ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದವರಿಗೆ ಸಿಹಿಸುದ್ದಿ ಕೊಟ್ಟ ರತನ್ ಟಾಟಾ!

advertisement

ಇತ್ತೀಚಿನ ದಿನಗಳಲ್ಲಿ ವಾಹನ ಮಾರುಕಟ್ಟೆಯಲ್ಲಿ EV ವಾಹನಗಳಿಗೆ ಬೇಡಿಕೆ ಹೆಚ್ಚಿರುವ ಕಾರಣದಿಂದ ಸರ್ಕಾರದ ನಂತರ ಈಗ ಅಂಬಾನಿ, ಅದಾನಿ ಮತ್ತು ಈಗ ಟಾಟಾ ಕೂಡ ಎಲೆಕ್ಟ್ರಿಕ್ ವಾಹನ (Electric Vehicle) ವಿಭಾಗದತ್ತ ತಮ್ಮ ಗಮನ ನೀಡಿದ್ದಾರೆ. ಮುಖೇಶ್ ಅಂಬಾನಿ (Mukesh Ambani), ಗೌತಮ್ ಅದಾನಿ (Gautam Adani) ನಂತರ ಇದೀಗ ಟಾಟಾ (Tata) ಗ್ರೂಪ್ ಕೂಡ ದೇಶಾದ್ಯಂತ ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಹೊರಟಿದೆ. ಇದಕ್ಕಾಗಿ ಸರ್ಕಾರಿ ತೈಲ ಕಂಪನಿ ಜೊತೆ ಟಾಟಾ ಕೈಜೋಡಿಸಿದೆ. ಅಷ್ಟಕ್ಕೂ ಆ ಕಂಪನಿ ಯಾವುದು ನೋಡೋಣ.

ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜೊತೆ ಕೈ ಜೋಡಿಸಿದ ಟಾಟಾ:

ಸರ್ಕಾರ ನಿರಂತರವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡುತ್ತಲೆ ಬಂದಿದೆ. ಸರ್ಕಾರದ ಜೊತೆಗೆ ಈಗ ದೇಶದ ದೊಡ್ಡ ಕಂಪನಿಗಳೂ ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿವೆ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ವ್ಯಾಪ್ತಿಯನ್ನು ಹೆಚ್ಚಿಸಲು, ಚಾರ್ಜಿಂಗ್ ಸ್ಟೇಷನ್‌ (Charging Station) ಗಳ ಗರಿಷ್ಠ ಉಪಸ್ಥಿತಿಯನ್ನು ಹೊಂದಿರುವುದು ಅತ್ಯಂತ ಮುಖ್ಯವಾಗಿದೆ. ದೇಶದ ಪ್ರಮುಖ ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಈಗಾಗಲೇ ಚಾರ್ಜಿಂಗ್ ಸ್ಟೇಷನ್‌ ಪ್ರಾರಂಭಿಸುವ ಕೆಲಸ ಮಾಡುತ್ತಿದ್ದಾರೆ.

 

Image Source: CarWale

 

advertisement

ಇತ್ತೀಚೆಗೆ ಗೌತಮ್ ಅದಾನಿ ಕೂಡ ದೇಶಾದ್ಯಂತ ಚಾರ್ಜಿಂಗ್ ಸ್ಟೇಷನ್‌ (Charging Station) ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಇದೀಗ ಇದರ ಬೆನ್ನಲ್ಲೇ ದೇಶದ ಅತ್ಯಂತ ಹಳೆಯ ಉದ್ಯಮ ಸಂಸ್ಥೆ ಟಾಟಾ ಕೂಡ ಇದಕ್ಕೆ ಧುಮುಕಿದೆ. ಟಾಟಾ ಗ್ರೂಪ್ ಕಂಪನಿ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ ಈ ವರ್ಷದ ಅಂತ್ಯದ ವೇಳೆಗೆ ದೇಶಾದ್ಯಂತ 5,000 ಸಾರ್ವಜನಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಇದಕ್ಕಾಗಿ ಸರ್ಕಾರಿ ತೈಲ ಕಂಪನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಜೊತೆ ಟಾಟಾ ಕೈಜೋಡಿಸಿದೆ.

ಈ ಸ್ಥಳಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಾಗುವುದು:

ಟಾಟಾ ಮೋಟಾರ್ಸ್ (Tata Motors) ಘಟಕವಾದ ಟಾಟಾ ಪ್ಯಾಸೆಂಜರ್ ಎಲೆಕ್ಟ್ರಿಕ್ ಮೊಬಿಲಿಟಿ (TPEM) ಬುಧವಾರ ಈ ಪಾಲುದಾರಿಕೆಯ ಅಡಿಯಲ್ಲಿ, HPCL ಪೆಟ್ರೋಲ್ ಪಂಪ್‌ಗಳಲ್ಲಿ ಚಾರ್ಜಿಂಗ್ ಸ್ಟೇಷನ್‌ಗಳನ್ನು (Charging Station) ಸ್ಥಾಪಿಸಲಾಗುವುದು ಎಂದು ತಿಳಿಸಿದೆ. 1.2 ಲಕ್ಷಕ್ಕೂ ಹೆಚ್ಚು ಟಾಟಾ ಎಲೆಕ್ಟ್ರಿಕ್ ವಾಹನಗಳ ಮಾಲೀಕರು ಭೇಟಿ ನೀಡುವ ಸ್ಥಳಗಳಲ್ಲಿ ಈ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಎರಡೂ ಘಟಕಗಳು ಈ ನಿಟ್ಟಿನಲ್ಲಿ MOUಗೆ ಸಹಿ ಹಾಕಿವೆ.ಕಂಪನಿಗಳು ಸಹ-ಬ್ರಾಂಡೆಡ್ RFID ಕಾರ್ಡ್‌ಗಳ ಮೂಲಕ ಅನುಕೂಲಕರ ಪಾವತಿ ವ್ಯವಸ್ಥೆಯನ್ನು ಪರಿಚಯಿಸುವ ಸಾಧ್ಯತೆಯನ್ನು ಅನ್ವೇಷಿಸುತ್ತಿವೆ.

21,500 ಪೆಟ್ರೋಲ್ ಪಂಪ್‌ಗಳ ತಾಣದಲ್ಲಿ ಚಾರ್ಜಿಂಗ್ ಸ್ಟೇಶನ್:

HPCL 21,500 ಕ್ಕೂ ಹೆಚ್ಚು ಪೆಟ್ರೋಲ್ ಪಂಪ್‌ಗಳ ಜಾಲವನ್ನು ಹೊಂದಿದೆ. ಕಂಪನಿಯು ಡಿಸೆಂಬರ್ 2024 ರ ವೇಳೆಗೆ 5,000 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. TPEM ನ ಮುಖ್ಯ ಕಾರ್ಯತಂತ್ರ ಅಧಿಕಾರಿ ಬಾಲಾಜಿ ರಾಜನ್ ಅವರ ಪ್ರಕಾರ, HPCL ನೊಂದಿಗಿನ ಈ ಕಾರ್ಯತಂತ್ರದ ಪಾಲುದಾರಿಕೆಯು ಭಾರತದ EV ಪರಿಸರ ವ್ಯವಸ್ಥೆಯನ್ನು ಮುನ್ನಡೆಸುವ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದರಲ್ಲಿ ಮೂಲಭೂತ ಸೌಕರ್ಯಗಳಾಗಿ ಚಾರ್ಜ್ ಮಾಡುವುದು ಮುಖ್ಯವಾಗಿದೆ. ಎಲೆಕ್ಟ್ರಿಕ್ ವಾಹನಗಳತ್ತ ಗ್ರಾಹಕರು ಮುಖಮಾಡಲು ಮೂಲಸೌಕರ್ಯಗಳ ಅಭಿವೃದ್ಧಿ ಹೊಂದಬೇಕಿದೆ. ಆ ನಿಟ್ಟಿನಲ್ಲಿ ಚಾರ್ಜಿಂಗ್ ಸ್ಟೇಶನ್ ಅಗತ್ಯವಿರುತ್ತದೆ.

advertisement

Leave A Reply

Your email address will not be published.