Karnataka Times
Trending Stories, Viral News, Gossips & Everything in Kannada

Post Office: ಪೋಸ್ಟ್ ಆಫೀಸಿನಲ್ಲಿ ಹಣ ಇಟ್ಟವರಿಗೆ ಸಿಹಿಸುದ್ದಿ! ಈ ಎಲ್ಲಾ ಯೋಜನೆಗಳ ಬಡ್ಡಿದರ ಬದಲು, ಕೂಡಲೇ ನೋಡಿಕೊಳ್ಳಿ

advertisement

ಸ್ನೇಹಿತರೆ, ಹೊಸ ಹಣಕಾಸು ವರ್ಷವು ಪ್ರಾರಂಭವಾಗಿದ್ದು, ಬ್ಯಾಂಕ್ ಹಾಗೂ ಪೋಸ್ಟ್ ಆಫೀಸ್ನಲ್ಲಿ ಸಾಕಷ್ಟು ಹೊಸ ಹೊಸ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಮುಂದಿನ ಭವಿಷ್ಯಕ್ಕಾಗಿ ಹಣವನ್ನು ಉಳಿತಾಯ ಮಾಡುವವರಿಗೆ ಬಂಪರ್ ಕೊಡುಗೆಗಳನ್ನು ನೀಡುತ್ತಿದ್ದಾರೆ. ನಾವು ಹೂಡಿಕೆ ಮಾಡುವ ಹಣಕ್ಕೆ ಸಂಪೂರ್ಣ ಸುರಕ್ಷತೆ(Complete Security)ಯನ್ನು ಒದಗಿಸುವುದರ ಜೊತೆಗೆ ಅತಿ ಹೆಚ್ಚಿನ ಬಡ್ಡಿ ಹಣವನ್ನು ನೀಡುತ್ತಾರೆ ಅಲ್ಲದೇ ನಮ್ಮ ಹಣಕ್ಕೆ ಹೆಚ್ಚಿನ ತೆರಿಗೆಯನ್ನು ಹಾಕುವುದಿಲ್ಲ.

ಹೇಗೆ ನೀವೇನಾದರೂ ನಿಮ್ಮ ಹಣವನ್ನು ಅಲ್ಪಾವಧಿಯ ಕಾಲ ಹೂಡಿಕೆ ಮಾಡಿ ಅತಿ ಹೆಚ್ಚಿನ ಬಡ್ಡಿ ಹಣವನ್ನು ಎದುರು ನೋಡುತ್ತಿದ್ದಾರೆ, ಪೋಸ್ಟ್ ಆಫೀಸ್(Post Office) ನಿಂದ ಗ್ರಾಹಕರಿಗೆ ನೀಡಲಾಗುತ್ತಿರುವಂತಹ ಪಿಪಿಎಫ್, ಹಿರಿಯ ನಾಗರಿಕರ ಉಳಿತಾಯ ಯೋಜನೆ(Senior Citizens Saving Scheme) ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಅತ್ಯುತ್ತಮ ಆಯ್ಕೆಯಾಗಿರಲಿದೆ. ಏಕೆಂದರೆ ಹೊಸ ಹಣಕಾಸು ವರ್ಷ(New Financial Year) ಪ್ರಾರಂಭವಾದರೂ ಕೇಂದ್ರ ಸರ್ಕಾರವು ಈ ಯೋಜನೆಗಳ ಮೇಲಿನ ತೆರಿಗೆಯನ್ನು ಹೆಚ್ಚುವರಿ ಗೊಳಿಸಿಲ್ಲ ಹಾಗೂ ನಿಮ್ಮ ಹಣಕ್ಕೆ ಅದ್ಭುತ ಬಡ್ಡಿ ದರವನ್ನು ನಿಗದಿಪಡಿಸುತ್ತಾರೆ.

advertisement

Image Source: informalnewz

ಏಪ್ರಿಲ್ – ಜೂನ್ 2024ರ ಸಣ್ಣ ಉಳಿತಾಯ ಯೋಜನೆಯ ಬಡ್ಡಿ ದರ ಎಷ್ಟಿದೆ ಎಂಬುದನ್ನು ತಿಳಿಯಿರಿ:

  • ಪೋಸ್ಟ್ ಆಫೀಸ್ ಸೇವಿಂಗ್ಸ್ ಅಕೌಂಟ್ನಲ್ಲಿ ನಲ್ಲಿ ಹೂಡಿಕೆ ಮಾಡಿದರೆ ವಾರ್ಷಿಕವಾಗಿ 4.0% ಬಡ್ಡಿಯನ್ನು ಪಡೆಯಬಹುದು.
  • ಒಂದು ವರ್ಷದ ಟೈಮ್ ಡಿಪೋಸಿಟ್ ನಲ್ಲಿ 6.9% ಬಡ್ಡಿ, ಅಂದರೆ ₹10,000 ಹೂಡಿಕೆ ಮಾಡಿದರೆ ₹708 ಲಾಭ ಪಡೆಯಬಹುದು.
  • ಎರಡು ವರ್ಷ ಟೈಮ್ ಡೆಪಾಸಿಟ್ ಮಾಡಿದರೆ 7.0% ವಾರ್ಷಿಕ ಬಡ್ಡಿ ಅಂದರೆ ₹10,000ಗಳಿಗೆ ₹719 ಲಾಭ ನಿಮ್ಮದಾಗಲಿದೆ.
  • ಮೂರು ವರ್ಷ ಟೈಮ್ ಡೆಪೋಸಿಟ್ ಮಾಡಿದರೆ 7.1% ವಾರ್ಷಿಕ ಬಡ್ಡಿಗೆ ಆಧಾರದ ಮೇಲೆ ನಿಮ್ಮ 10,000 ಹೂಡಿಕೆಯ ಹಣಕ್ಕೆ ₹719 ಲಭ ಸಿಗಲಿದೆ.
  • ಐದು ವರ್ಷದ ಟೈಮ್ ಡೆಪಾಸಿಟ್ ಮಾಡಿದರೆ 7.5% ಬಡ್ಡಿ ದರದ ಮೇಲೆ ನಿಮ್ಮ 10,000 ಹೂಡಿಕೆಗೆ 771 ರೂಪಾಯಿ ಬಡ್ಡಿ ಹಣ ದೊರಕುತ್ತದೆ.
  • ಐದು ವರ್ಷ ರೆಕರಿಂಗ್ ಡೆಪಾಸಿಟ್ ಯೋಜನೆ- ಈ ಯೋಜನೆಯ ಅಡಿ ಕನಿಷ್ಠ 10 ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದಲ್ಲಿ ನಿಮ್ಮ ಹಣಕ್ಕೆ 6.7% ಬಡ್ಡಿಯನ್ನು ನೀಡಲಾಗುತ್ತದೆ.
  • ಹಿರಿಯ ನಾಗರಿಕರ ಉಳಿತಾಯ ಯೋಜನೆ- ಹಿರಿಯ ನಾಗರಿಕರಿಗೆ ಪೋಸ್ಟ್ ಆಫೀಸ್ ನಲ್ಲಿ ವಿಶೇಷ ಕೊಡುಗೆಗಳಿದ್ದು, 10,000 ಹಣವನ್ನು ಈ ಯೋಜನೆಯ ಅಡಿ ಹೂಡಿಕೆ ಮಾಡಿದರೆ ತ್ರೈಮಾಸಿಕವಾಗಿ ನಿಮ್ಮ ಹೂಡಿಕೆಗೆ ಬರೋಬ್ಬರಿ 2೦5 ರೂಪಾಯಿ ಬಡ್ಡಿ ಹಣವನ್ನು 8.2% ಇಂಟರೆಸ್ಟ್ ದರದ ಮೇಲೆ ನೀಡುತ್ತಾರೆ.
  • ಮಾಸಿಕ ಆದಾಯ ಖಾತೆ- ಇಲ್ಲಿ ನಿಮ್ಮ ಹಣಕ್ಕೆ 7.4% ಬಡ್ಡಿ ನಿಗದಿಪಡಿಸುತ್ತಾರೆ ಅದರಂತೆ ನೀವೇನಾದರೂ 10,000 ಹಣವನ್ನು ಈ ಯೋಜನೆಯ ಅಡಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 62 ರೂಪಾಯಿ ಹಣವನ್ನು ಪಡೆಯಬಹುದು.
  • ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ- ಈ ಯೋಜನೆಯ ಅಡಿ ನಿಮ್ಮ ಹೂಡಿಕೆಗೆ 7.7% ಬಡ್ಡಿ ದರವನ್ನು ನಿಗದಿಪಡಿಸಲಾಗುವುದು ಅದರಂತೆ ಮೆಚುರಿಟಿ ಪಿರಿಯಡ್ ನಲ್ಲಿ ನಿಮ್ಮ 10,000 ಹೂಡಿಕೆಗೆ ಬರೋಬ್ಬರಿ 14,490 ಆದಾಯವನ್ನು ನೀಡುತ್ತಾರೆ.
  • ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ- ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡಿದರೆ ಅದಕ್ಕೆ 7.1% ಬಡ್ಡಿ ಹಣವನ್ನು ನೀಡಲಾಗುತ್ತದೆ.
  • ಕಿಸಾನ್ ವಿಕಾಸ್ ಪತ್ರ- ರೈತರು ಈ ಯೋಜನೆಯಲ್ಲಿ ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡಬಹುದು ಹಾಗೂ ಮೆಚುರಿಟಿ ಪಿರಿಯಡ್ ನಲ್ಲಿ ಅಂದರೆ 115 ದಿನಗಳಿಗೆ ನಿಮ್ಮ ಹೂಡಿಕೆಯ ಮೇಲೆ 7.5% ಬಡ್ಡಿಯನ್ನು ನೀಡುತ್ತಾರೆ.
  • ಮಹಿಳಾ ಸಮ್ಮನ್ ಸೇವಿಂಗ್ ಸರ್ಟಿಫಿಕೇಟ್- ಈ ಯೋಜನೆಯಡಿ ಮಹಿಳೆಯರು ಕೇವಲ ಹತ್ತು ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡಿದರೆ ಸಾಕು ಅದರ ಮೆಚುರಿಟಿ ಪಿರಿಯಡ್ ನಲ್ಲಿ 7.5% ಬಡ್ಡಿ ಆಧಾರದ ಮೇಲೆ 1162 ರೂಪಾಯಿ ಬಡ್ಡಿ ಹಣವನ್ನು ಲಾಭವನ್ನಾಗಿ ಪಡೆಯಬಹುದು.
  • ಸುಕನ್ಯಾ ಸಮೃದ್ಧಿ ಯೋಜನೆ- ಪೋಸ್ಟ್ ಆಫೀಸ್ನ ಈ ವಿಶೇಷ ಯೋಜನೆಯಲ್ಲಿ ಸಣ್ಣ ಮೊತ್ತದ ಹಣವನ್ನು ಹೂಡಿಕೆ ಮಾಡಿದರೆ ಅದರ ಮೆಚುರಿಟಿ ಪಿರಿಯಡ್ನಲ್ಲಿ ಬರೋಬ್ಬರಿ 8.2% ಬಡ್ಡಿ ದರದ ಮೇಲೆ ಲಾಭವನ್ನು ಗಳಿಸಬಹುದು.

advertisement

Leave A Reply

Your email address will not be published.