Karnataka Times
Trending Stories, Viral News, Gossips & Everything in Kannada

Electric Scooter: ಇದು ಪವರ್ ಫುಲ್ ಎಲೆಕ್ಟ್ರಿಕ್ ಸ್ಕೂಟರ್, 35 ನಿಮಿಷ ಚಾರ್ಜ್ ಹಾಕಿದ್ರೆ 130 km ಮೈಲೇಜ್ ಕೊಡುವುದು ಗ್ಯಾರಂಟಿ! ಬೆಲೆ ಕಡಿಮೆ

advertisement

LAMBRETTA ELECTRA: ಇತ್ತೀಚಿನ ದಿನಮಾನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಡಿಮ್ಯಾಂಡ್( Electric Vehicle Demand) ಗಗನಕ್ಕೇರಿರುವ ಕಾರಣ ಭಾರತದ ಬಹುತೇಕ ವಾಹನ ತಯಾರಿಕಾ ಕಂಪನಿಗಳು ಪ್ರತಿದಿನ ಒಂದಲ್ಲ ಒಂದು ಎಲೆಕ್ಟ್ರಿಕ್ ಬೈಕ್, ಸ್ಕೂಟರ್ ಹಾಗೂ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ. ಹೀಗೆ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ಅದ್ಭುತ ಮೈಲೇಜ್ ನೀಡುವಂತಹ ಗಾಡಿಗಳು ಸದ್ಯ ಎಕ್ಸ್ ಶೋರೂಮ್(Ex showroom) ನಲ್ಲಿ ಲಭ್ಯವಿದ್ದು ಈ ಪಟ್ಟಿಗೆ ಮತ್ತೊಂದು ಈ ಸ್ಕೂಟರ್ ಸೇರ್ಪಡೆಯಾಗಿದೆ.

40-45 ವರ್ಷಗಳ ಹಿಂದೆ ಸ್ಕೂಟರ್ ಪ್ರಿಯರ ಮನಸ್ಸನ್ನು ಗೆದ್ದಿದಂತಹ LAMBRETTA ಮತ್ತೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶ ಮಾಡಿದೆ. ಹೌದು ಸ್ನೇಹಿತರೆ ಹಲವು ವರ್ಷಗಳ ಕಾಲ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ತನ್ನ ಕ್ರೇಜನ್ನು ಉಳಿಸಿಕೊಂಡಿದ್ದ Lambretta ಕಾಲಕ್ರಮೇಣ ಮಾಯವಾಗಿತ್ತು ಆದರೆ ಈಗ ಎಲೆಕ್ಟ್ರಾನಿಕ್ ಅವತಾರದಲ್ಲಿ ಮತ್ತೆ ಲಭ್ಯವಿದೆ.

ಗ್ರಾಹಕರ ಆಕರ್ಷಣೆಗೆ ಗುರಿಯಾದ Lambretta

2023ರ ಡಿಸೆಂಬರ್ ತಿಂಗಳಿನಲ್ಲಿ ನಡೆದ ಎಲೆಕ್ಟ್ರಿಕ್ ಮೊಬಿಲಿಟಿ ಶೋ ದಲ್ಲಿ Lambretta ಕಂಪನಿಯು ತನ್ನ ನೂತನ ಆವಿಷ್ಕಾರದ ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter)ಅನ್ನು ಪರಿಚಯಿಸಿದ್ದು ಇದರ ಕ್ಲಾಸಿಕ್ ಲುಕ್(Classic look) ಹಾಗೂ ವೈಶಿಷ್ಟ್ಯತೆಗಳ ಕುರಿತು ಮಾಹಿತಿ ತಿಳಿದಂತಹ ಗ್ರಾಹಕರು, 45 ವರ್ಷ ಹಳೆಯ ಸಿಗ್ನೇಚರ್ ಡಿಸೈನನ್ನು ಎಲೆಕ್ಟ್ರಿಕ್ ವಿಭಾಗದಲ್ಲಿ ಮತ್ತೊಮ್ಮೆ ಖರೀದಿಸಲು ಕುತೂಹಲರಾಗಿದ್ದರು. ಅದರಂತೆ ಕಂಪನಿ ಮತ್ತಷ್ಟು ಆಧುನಿಕ ತಂತ್ರಜ್ಞಾನವನ್ನು ಬಳಸಿ ಸ್ಕೂಟರನ್ನು ತಯಾರು ಮಾಡಿ ಎಲೆಕ್ಟ್ರ(Electra) ಎಂಬ ಹೆಸರಿನಿಂದ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧಗೊಂಡಿದೆ.

advertisement

Image Source: The Financial Express

5 ನಿಮಿಷದಲ್ಲಿ 30% ಚಾರ್ಜ್ ಹಾಕುವ ಸಾಮರ್ಥ್ಯ

250 ವೋಲ್ಟ್ ಹೋಂ ಚಾರ್ಜರ್ ಬಳಸಿ ಐದು ನಿಮಿಷಗಳ ಕಾಲ lambretta ಸ್ಕೂಟರನ್ನು ಚಾರ್ಜ್ ಹಾಕಿದರೆ ಕೇವಲ 5 ನಿಮಿಷಗಳಲ್ಲಿ 30% ಚಾರ್ಜ್ ಆಗುವಂತಹ ಸಾಮರ್ಥ್ಯವನ್ನು ಹೊಂದಿದೆ. ಅದೇ ರೀತಿ 35 ನಿಮಿಷದಲ್ಲಿ 0 ಯಿಂದ 80% ಚಾರ್ಜ್ ಆಗುವಂತಹ ಫಾಸ್ಟೆಸ್ಟ್ ಚಾರ್ಜಿಂಗ್ ಕ್ಯಾಪಾಸಿಟಿ(Fastest Charging Capacity) ಇದ್ದು, 11 kW ಎಲೆಕ್ಟ್ರಿಕ್ ಮೋಟಾರನ್ನು ಒಳಗೊಂಡಿರುವ ಈ ಸ್ಕೂಟರ್, ಬರೋಬ್ಬರಿ 127 ಕಿಲೋಮೀಟರ್ ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಅದರಂತೆ ಟಾಪ್ ಸ್ಪೀಡ್ ನಲ್ಲಿ ಒಂದು ಗಂಟೆಗೆ 110 ಕಿ.ಮೀ ವ್ಯಾಪ್ತಿಯ ತಲುಪುತ್ತದೆ.

ಗ್ರಾಹಕರ ಕೈಗೆಟುಕುವ ಬೆಲೆಯಲ್ಲಿ Lambretta ಲಭ್ಯ

ಕಂಪನಿಯು ಸ್ಕೂಟರ್ನ ಅಧಿಕೃತ ಬೆಲೆಯ ಕುರಿತು ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ, ಆದರೆ ಸ್ಕೂಟರ್ನಲ್ಲಿ ಅಳವಡಿಸಲಾಗಿರುವ ನೂತನ ವೈಶಿಷ್ಟ್ಯತೆಗಳು ಹಾಗೂ ಅದ್ಭುತ ಬ್ಯಾಟರಿ ಬ್ಯಾಕ್ ಕಪ್ನ(Battery backup) ಆಧಾರದ ಮೇಲೆ ಬೆಲೆಯನ್ನು ಒಂದು ಲಕ್ಷಕ್ಕೆ ನಿಗದಿಪಡಿಸಬಹುದೆಂಬ ಮಾಹಿತಿ ಇದೆ.

advertisement

Leave A Reply

Your email address will not be published.