Karnataka Times
Trending Stories, Viral News, Gossips & Everything in Kannada

7 Seater Car: ಕೈಗೆಟುಕುವ ಬೆಲೆಯಲ್ಲಿ 7 ಸೀಟರ್ ಕಾರ್ ಅನ್ನು ಲಾಂಚ್ ಮಾಡಿದ ಮಹಿಂದ್ರ!

advertisement

ಮಹಿಂದ್ರ ಸಂಸ್ಥೆ ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ತನ್ನದೇ ಆದಂತಹ ದೊಡ್ಡ ಮಟ್ಟದ ಮಾರುಕಟ್ಟೆಯನ್ನು ಹೊಂದಿದೆ. ಈಗ ತನ್ನ ಪೋರ್ಟ್ಫೋಲಿಯೋ ವನ್ನು ಇನ್ನಷ್ಟು ಅಪ್ಡೇಟ್ ಮಾಡಿಕೊಳ್ಳುವ ನಿಟ್ಟಿನಲ್ಲಿ ಮಹಿಂದ್ರ ಸಂಸ್ಥೆ ಈಗ ಹೊಸ ಕಾರುಗಳನ್ನು ಕೂಡ ಲಾಂಚ್ ಮಾಡಿದೆ. Mahindra XUV700 ಸೀರೀಸ್ ನಲ್ಲಿ ಹಾಗೂ XUV 3XO ಅನ್ನು ಕೂಡ ಲಾಂಚ್ ಮಾಡಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳೋಣ.

Mahindra XUV700 Variants and Price:

 

Image Source: CarDekho

 

  • XUV700 ಕಾರಿನಲ್ಲಿ ಹೊಸ ವೇರಿಯಂಟ್ಗಳನ್ನು ಈಗಾಗಲೇ ಲಾಂಚ್ ಮಾಡಿದ್ದು ಅವುಗಳು MX, AX3, AX5, AX7 ಹಾಗೂ AX7 L ಆಗಿವೆ.
  • ಬೆಲೆ ವಿಚಾರದ ಬಗ್ಗೆ ಮಾತನಾಡುವುದಾದರೆ ಬೇಸ್ ಪ್ರೈಸ್ 14 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ ಟಾಪ್ ವೇರಿಯಂಟ್ 27 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಕೂಡ ಕಂಡುಬರುತ್ತದೆ. ಇದು MX ವೇರಿಯಂಟ್ ಕಾರಿನ ಬೆಲೆಯಾಗಿದೆ.
  • MX ನ ಡೀಸೆಲ್ ವೇರಿಯಂಟ್ 14.60 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಿಂದ ಪ್ರಾರಂಭವಾಗುತ್ತದೆ. ಇದರ ಏಳು ಸೀಟ್ ಕಾರು 15 ಲಕ್ಷ ರುಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ದೊರೆಯುತ್ತದೆ.

Engine and Performance:

 

advertisement

Image Source: Cartoq

 

MX 7 Seater Car ನಲ್ಲಿ ನೀವು 2.2 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಇಂಜಿನ್ ಅನ್ನು ಕಾಣಬಹುದಾಗಿದೆ. 153bhp ಪವರ್ ಹಾಗೂ 360nm ಟಾರ್ಕ್ ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಹೊಂದಿದೆ. ಆರು ಸ್ಪೀಡ್ ಮಾನ್ಯುವಲ್ ಟ್ರಾನ್ಸ್ಮಿಷನನ್ನು ಇದು ಹೊಂದಿದೆ.

ಇನ್ನು ಎರಡು ಲೀಟರ್ನ ಪೆಟ್ರೋಲ್ ವೇರಿಯಂಟ್ ಇಂಜಿನ್ ಅನ್ನು ಲಾಂಚ್ ಮಾಡುವಂತಹ ತಯಾರಿ ಕೂಡ ನಡೆಯುತ್ತಿದೆ.

Design and Features:

  • 5 ಬಣ್ಣಗಳ ಆಪ್ಷನ್ ನಿಮಗೆ ಸಿಗುತ್ತದೆ. ಎಂಟು ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಅಡ್ಜಸ್ಟ್ ಮಾಡಬಲ್ಲಂತಹ ಸ್ಟೇರಿಂಗ್, ಯುಎಸ್ಬಿ ಚಾರ್ಜಿಂಗ್ ಕೋರ್ಟ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ನೀವು ಇದರಲ್ಲಿ ಕಾಣಬಹುದಾಗಿದೆ.
  • ಕಾರಿನ ಒಳ ವಿನ್ಯಾಸವನ್ನು ಸೊಗಸಾಗಿ ಡಿಸೈನ್ ಮಾಡಲಾಗಿದ್ದು ನಾಲ್ಕು ಸ್ಪೀಕರ್ ಅನ್ನು ಹೊಂದಿರುವ ಸೌಂಡ್ ಸಿಸ್ಟಮ್ ಅನ್ನುಕೂಡ ನೀವು ಕಾಣಬಹುದಾಗಿದೆ.

ಮಾರುಕಟ್ಟೆಯಲ್ಲಿ ಇರುವಂತಹ ಬೇರೆ ಏಳು ಸೀಟರ್ ಕಾರು (7 Seater Car) ಗಳಿಗೆ ಹೋಲಿಸಿದರೆ ಬೆಲೆ ಹಾಗೂ ಕಂಫರ್ಟ್ ವಿಚಾರದಲ್ಲಿ ಖಂಡಿತವಾಗಿ ಇದು ಸಾಕಷ್ಟು ಮುಂದಿರುತ್ತದೆ. ಇದರ ಜೊತೆಗೆ ಮಹಿಂದ್ರ ಸಂಸ್ಥೆ ಇನ್ನೂ ಸಾಕಷ್ಟು ಕಾರುಗಳನ್ನು ಮುಂದಿನ ದಿನಗಳಲ್ಲಿ ಲಾಂಚ್ ಮಾಡುವಂತಹ ಗುರಿಯನ್ನು ಹೊಂದಿದೆ.

advertisement

Leave A Reply

Your email address will not be published.