Karnataka Times
Trending Stories, Viral News, Gossips & Everything in Kannada

Gruhalakshmi Scheme: ಸರ್ಕಾರದ ಹೊಸ ಪಟ್ಟಿ ಬಿಡುಗಡೆ! ಇಂತಹವರಿಗಿಲ್ಲ ಗೃಹಲಕ್ಷ್ಮಿ ಯೋಜನೆಯ 2000 ಹಣ

advertisement

Latest News: ಕಳೆದ ಕೆಲವು ದಿನಗಳ ಹಿಂದೆ ಆಹಾರ ಸರಬರಾಜು ಇಲಾಖೆ(Food Office) ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಪ್ರತಿ ತಿಂಗಳು ಪಡಿತರವನ್ನು ಪಡೆಯಲು ಅನರ್ಹವಾದ ಹಾಗೂ ಪಡಿತರ ಚೀಟಿಯನ್ನು(Ration Card) ಹೊಂದಲು ಅರ್ಹವಲ್ಲದ ಜನರ ರೇಷನ್ ಕಾರ್ಡನ್ನು ಪರಿಶೀಲಿಸಿ ಏಪ್ರಿಲ್ 2024 ರಂದು ರದ್ದು ಗೊಳಿಸಿ ಅವರ ಹೆಸರನ್ನು ರೇಷನ್ ಕಾರ್ಡ್ ಗ್ರಾಹಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಪಟ್ಟಿಯಲ್ಲೇನಾದರೂ ನಿಮ್ಮ ಹೆಸರಿದ್ದರೆ ಗೃಹಲಕ್ಷ್ಮಿ ಯೋಜನೆ(Gruhalakshmi Scheme) ಹಾಗೂ ಅನ್ನಭಾಗ್ಯ ಯೋಜನೆಯಿಂದ ಬರುತ್ತಿರುವ ಆರ್ಥಿಕ ನೆರವು ಸಂಪೂರ್ಣ ಸ್ಥಗಿತಗೊಳ್ಳಲಿದೆ.

Image Source: Hindustan Times

ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಎಂಬುದನ್ನು ಮೊದಲು ತಿಳಿಯಿರಿ:

1. ಆಹಾರ ಸರಬರಾಜು ಇಲಾಖೆ ಮತ್ತು ಗ್ರಾಹಕರ ವ್ಯವಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಆದ ahar.kar.nic.in ಗೆ ಭೇಟಿ ನೀಡಿ.

advertisement

2. ಇ- ರೇಷನ್ ಕಾರ್ಡ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದರೆ ಪುಟ ಒಂದು ತೆರೆಯುತ್ತದೆ. ಅಲ್ಲಿ Show Cancelled / Suspended ರೇಷನ್ ಕಾರ್ಡ್ (ration card) ಎಂಬ ಆಯ್ಕೆಯನ್ನು ಒತ್ತಬೇಕು.

3. ಆನಂತರ ನಿಮ್ಮ ಜಿಲ್ಲೆ, ತಾಲೂಕು, ತಿಂಗಳು ಹಾಗೂ ವರ್ಷವನ್ನು ಸರಿಯಾಗಿ ನಮೂದಿಸಿದ ಬಳಿಕ, GO ಎಂಬ ಆಪ್ಷನ್ ಅನ್ನು ಕ್ಲಿಕ್ ಮಾಡಿ.

4. ರದ್ದಾಗಿರುವ ಅಥವಾ ಸ್ಥಗಿತಗೊಂಡಿರುವ ರೇಷನ್ ಕಾರ್ಡ್ದಾರರ ಹೆಸರು(Ration Card Holder Name) ಮತ್ತು ನಂಬರ್ ಎರಡು ಗ್ರಾಹಕರ ಪಟ್ಟಿಯಲ್ಲಿ ಲಭ್ಯವಾಗುತ್ತದೆ. ಆ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಆಹಾರ ಇಲಾಖೆಯು ನಿಮ್ಮ ಕಾರ್ಡನ್ನು ರದ್ದುಗೊಳಿಸಿದ್ದಾರೆ ಎಂದರ್ಥ.

ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ಕೂಡಲೇ ಈ ಕೆಲಸ ಮಾಡಿ!

ನೀವು ಪ್ರತಿ ತಿಂಗಳು ಪಡಿತರ ಪಡೆಯಲು ಅರ್ಹರಿದ್ದರೂ ನಿಮ್ಮ ಕಾರ್ಡ್ ಅನ್ನು ರದ್ದು ಮಾಡಿದ್ದರೆ ಕೂಡಲೇ ನಿಮ್ಮ ಆಧಾರ್ ಕಾರ್ಡ್ ಪ್ರತಿ(Aadhar card Xerox) ಮತ್ತು ಲಿಖಿತ ಅರ್ಜಿ(Written Application Letter) ಒಂದನ್ನು ಬರೆದುಕೊಂಡು ಆಹಾರ ಇಲಾಖೆಗೆ ಭೇಟಿ ನೀಡಿ, ಅಲ್ಲಿರುವಂತಹ ಅಧಿಕಾರಿಗಳ ಕುರಿತು ನಿಮ್ಮ ಅರ್ಹತೆಯ ಮಾಹಿತಿಯನ್ನು ತಿಳಿಸಿ ರದ್ದು ಮಾಡಲಾಗಿರುವ ರೇಷನ್ ಕಾರ್ಡನ್ನು ಸರಿಪಡಿಸುವಂತೆ ಮನವಿ ಮಾಡಿಕೊಳ್ಳಿ. ಅರ್ಜಿಯನ್ನು ಅಧಿಕಾರಿಗಳು ಮರು ಪರಿಶೀಲಿಸಿ ನೀವು ರೇಷನ್ ಪಡೆಯಲು ಅರ್ಹರಾಗಿದ್ದರೆ ಅದನ್ನು ಸರಿಪಡಿಸುವರು. ಇದಾದ ನಂತರ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆಯ(Gruha Lakshmi & Anna Bhagya Scheme) ಉಪಯೋಗವನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.