Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ 9ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಮೊದಲು ಬಿಡುಗಡೆ! ಅಧಿಕೃತ ಘೋಷಣೆ

advertisement

ರಾಜ್ಯಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ವರ್ಗದ ಜನರಿಗೆ ಹೆಚ್ಚು ನೇರವಾಗುತ್ತಿದೆ.‌ ಅದರಲ್ಲಿ ಮುಖ್ಯವಾಗಿ ಮಹಿಳೆಯರನ್ನು ಆರ್ಥಿಕವಾಗಿ ಸಬಲ ಮಾಡುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರ ಖಾತೆಗೆ ತಿಂಗಳಿನಲ್ಲಿ ಎರಡು ಸಾವಿರ ರೂಪಾಯಿ ಜಮೆ ಮಾಡುತ್ತಿದೆ. ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದ ಶೇ 80ರಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಜಮೆಯಾಗಿದೆ.ಇಲ್ಲಿಯವರೆಗೆ ಮಹಿಳೆಯರಿಗೆ ಎಂಟು ಕಂತಿನ ವರೆಗೆ ಹಣ ಜಮೆ ಯಾಗಿದೆ.

ಈ ಜಿಲ್ಲೆಗೆ ಮೊದಲು ಬಿಡುಗಡೆ:

 

Image Source: Deccan Herald

 

ಒಂಭತ್ತನೆಯ ಕಂತಿನ ಹಣ (Gruha Lakshmi Money) ಮಹಿಳೆಯರ ಖಾತೆಗೆ ಮೇ ತಿಂಗಳಿನಲ್ಲಿ ಖಾತೆಗೆ ಜಮೆಯಾಗಲಿದೆ.ಇನ್ನೇನು ಚುನಾವಣೆ ಕೂಡ ಆರಂಭ ವಾಗುವುದರಿಂದ ಸರಕಾರ ಈ ಮೊದಲೇ ಹಣ ಬಿಡುಗಡೆ ಮಾಡಲು ಸಿದ್ದತೆ ಯನ್ನು ನಡೆಸಿದ್ದು ಉಡುಪಿ, ಚಿಕ್ಕಮಗಳೂರು,ಹಾಸನ, ದಕ್ಷಿಣ ಕನ್ನಡ,ಚಿತ್ರದುರ್ಗ, ತುಮಕೂರು, ಮಂಡ್ಯ,ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಇಷ್ಟು ಜಿಲ್ಲೆಗಳಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಒಂಭತ್ತನೆಯ ಕಂತಿನ ಹಣ ಮೊದಲಿಗೆ ಬಿಡುಗಡೆ ಮಾಡುವ ಸಿದ್ದತೆ ನಡೆಸಿದೆ.

ಎರಡನೇ ಹಂತ:

advertisement

ಅದೇ ರೀತಿ ಎರಡನೇ ಹಂತವಾಗಿ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ,ಬಿಜಾಪುರ, ಗುಲ್ಬರ್ಗ, ರಾಯಚೂರು,ಬೀದರ್, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ,ಉತ್ತರ ಕನ್ನಡ,ದಾವಣಗೆರೆ, ಶಿವಮೊಗ್ಗ ಈ ಜಿಲ್ಲೆಗಳಿಗೆ ಹಂತ ಎರಡಲ್ಲಿ ಅಂದರೆ ಮೇ 7ರ ಒಳಗೆ ಗೃಹಲಕ್ಷ್ಮಿ ಹಣ (Gruha Lakshmi Money) ವನ್ನು ಸರಕಾರ ಬಿಡುಗಡೆ ಮಾಡಲಿದೆ.

ಹಣ ವಿಳಂಬ:

 

Image Source: Getty Images

 

ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಗೃಹಲಕ್ಷ್ಮಿ ಹಣ (Gruha Lakshmi Money) ಜಮಾ ಆಗುವುದರಲ್ಲಿ ವಿಳಂಬ ಆಗಬಹುದು. ಹಾಗಾಗಿ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ, ಮಾಹಿತಿಗಳನ್ನು ಸರಿಯಾಗಿ ಆಪ್ಡೆಟ್ ಮಾಡುವ ಮೂಲಕ ಸರಿ ಪಡಿಸಿಕೊಂಡಲ್ಲಿ ಎಲ್ಲ ಕಂತಿನ ಗೃಹಲಕ್ಷ್ಮಿ ಹಣ ಒಟ್ಟಿಗೆ ಜಮೆಯಾಗಲಿದೆ.ಕೆಲವೊಮ್ಮೆ, ಮಹಿಳೆಯರ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಗಳಿಂದಾಗಿ ಹಣ ಜಮೆ ಯಾಗಿಲ್ಲ.ಹೀಗಾಗಿ ಈ ಬಗ್ಗೆ ಗಮನ‌ವಹಿಸಿ.

ದಾಖಲೆ ಸರಿಪಡಿಸಲು ಸೂಕ್ತ ಕ್ರಮ:

ಗೃಹಲಕ್ಷ್ಮಿ ಯೋಜನೆ ಯ ಫಲಾನುಭವಿಗಳು ಮಹಿಳೆಯರ ದಾಖಲೆಗಳು ಸರಿ ಇರಬೇಕು.ಈಗಾಗಲೇ ದಾಖಲೆ ಸಮಸ್ಯೆ ಇದ್ದಲ್ಲಿ ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡುವ ಮೂಲಕ ದಾಖಲೆ ಪರಿಶೀಲನೆ ಮಾಡಲು ಆಯೋಜನೆ ಮಾಡಲಾಗಿದೆ. ಅದೇ ರೀತಿ ಗ್ರಾಮ ಪಂಚಾಯತಿ ಸಿಬ್ಬಂದಿ ಗಳನ್ನು ನೇಮಕ ಮಾಡಲಾಗಿದೆ

advertisement

Leave A Reply

Your email address will not be published.