Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮಿ ಯೋಜನೆಯ 7ನೇ ಕಂತಿನ ಹಣದ ಕುರಿತು ಭರ್ಜರಿ ಅಪ್ಡೇಟ್ ಕೊಟ್ಟ ಲಕ್ಹ್ಮೀ ಹೆಬ್ಬಾಳ್ಕರ್!

advertisement

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ನಿಮ್ಮ ಖಾತೆಗೆ ಇನ್ನೂ ಬಂದಿಲ್ವಾ? ಹಾಗಾದ್ರೆ ಟೆನ್ಶನ್ ಬೇಡ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇನ್ನು ಕೆಲವೇ ದಿನಗಳಲ್ಲಿ ಪೆಂಡಿಂಗ್ ಇರುವ ಹಣವನ್ನು ಕೂಡ ಫಲಾನುಭವಿಗಳ ಖಾತೆಗೆ ಜಮಾ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಮಹಿಳಾ ಸಬಲೀಕರಣಕ್ಕಾಗಿ, ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕಾಗಿ ಪ್ರತಿ ತಿಂಗಳು 2000 ನೀಡುವಂತಹ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ರಾಜ್ಯ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಇತರ ರಾಜ್ಯಗಳು ಕೂಡ ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯಂತೆ ತಮ್ಮ ರಾಜ್ಯಗಳಲ್ಲಿಯೂ ಉಚಿತವಾಗಿ ಮಹಿಳೆಯರಿಗೆ ಹಣ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ. ಅಷ್ಟರಮಟ್ಟಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯಶಸ್ವಿಯಾಗಿದೆ.

ಪೆಂಡಿಂಗ್ ಇರುವ ಹಣ ಜಮಾ:

 

Image Source: defindia

 

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಶೇಕಡ 90% ನಷ್ಟು ಮಹಿಳೆಯರ ಖಾತೆಗೆ ಬಂದಿದೆ. ಆದರೂ ಇನ್ನೂ 10% ಅಷ್ಟು ಮಹಿಳೆಯರಿಗೆ ಹಣ ಸಿಕ್ಕಿಲ್ಲ ಅರ್ಜಿ ಸಲ್ಲಿಸಿ ಇಷ್ಟು ದಿನಗಳೆ ಕಳೆದರೂ ಕೂಡ ಹಣ ಮಾತ್ರ ಖಾತೆಗೆ ಬಂದಿಲ್ಲ. ಅದರಲ್ಲೂ ಮೊದಲ, ಎರಡನೆಯ ಹಾಗೂ ಮೂರು ಕಂತುಗಳ ಹಣ ಬಂದಿರುವ ಮಹಿಳೆಯರು ಮುಂದಿನ ಕಂತಿನ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಇದಕ್ಕೆಲ್ಲ ತಾಂತ್ರಿಕ ದೋಷಗಳು ಕಾರಣ ಎಂದು ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ತಿಳಿಸಿದ್ದಾರೆ.

ಹೌದು, ಮಹಿಳೆಯರ ಖಾತೆಗೆ ಹಣ ಜಮಾ ಆಗದೆ ಇರಲು ಬ್ಯಾಂಕ್ ಖಾತೆಗೆ ಈಕೆ ವೈ ಸಿ ಆಗಬೇಕಾಗಿರುವುದು, ಆಧಾರ್ ಕಾರ್ಡ್ ಅಪ್ಡೇಟ್ ಹಾಗೂ NPCI Mapping ಮೊದಲಾದ ಕೆಲಸಗಳನ್ನು ಮಾಡಿಕೊಳ್ಳಬೇಕು. ಇದರ ಜೊತೆಗೆ ಸರ್ಕಾರದ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿಯೂ ಕೂಡ ಮಹಿಳೆಯರ ಖಾತೆಗೆ ಹಣ ಬಂದಿಲ್ಲ. ಹಾಗಾಗಿ ಇಂತಹ ಮಹಿಳೆಯರನ್ನ ಗುರುತಿಸಿ ಅವರ ಬಗ್ಗೆ ಮಾಹಿತಿ ಕಲೆಹಾಕಿ ಪೆಂಡಿಂಗ್ ಇರುವ ಹಣವನ್ನು ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಮಾಡುವುದಾಗಿ ಸಚಿವೆ ತಿಳಿಸಿದ್ದಾರೆ.

advertisement

ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಿ:

ಇನ್ನು ಸರ್ಕಾರ ಈಗಾಗಲೇ ತಿಳಿಸಿರುವಂತೆ ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಬೇಸರ ಪಟ್ಟುಕೊಳ್ಳುವುದಕ್ಕಿಂತಲೂ ಮೊದಲು ನಿಮ್ಮ ಬಳಿ ಇರುವ ಆಧಾರ್ ಕಾರ್ಡ್ (Aadhaar Card) ಅಪ್ಡೇಟ್ ಮಾಡಿಸಿ. ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಆಗದೆ ಇದ್ದಲ್ಲಿ ಅದು ಸರ್ಕಾರದ ಖಾತೆಯಲ್ಲಿ ರಿಜಿಸ್ಟರ್ಡ್ ಆಗಿರುವುದಿಲ್ಲ. ಹಾಗೂ ನೀವು ಈ ಕೆವೈಸಿ ಮಾಡಿಸಿದ್ದರು ಕೂಡ ನಿಮ್ಮ ಆಧಾರ್ ಕಾರ್ಡ್ Unvalid
ಎಂದು ತೋರಿಸಬಹುದು. ಹಾಗೇನಾದ್ರೂ ಆದ್ರೆ ಆಟೋಮ್ಯಾಟಿಕ್ ಆಗಿ ನಿಮ್ಮ ಖಾತೆಗೆ DBT ಆಗುವ ಹಣ ಖಾತೆಯನ್ನು ಸೇರದೆ ಇರಬಹುದು.

ಏಳನೇ ಕಂತಿನ ಹಣದ ಜೊತೆಗೆ ಪೆಂಡಿಂಗ್ ಹಣ ಬಿಡುಗಡೆ:

 

Image Source: Prokerala

 

ಇದೇ ಬರುವ ಮಾರ್ಚ್ 15, 2024 ಫೆಬ್ರುವರಿ ತಿಂಗಳಿನ ಹಣವನ್ನು ಅಂದರೆ 7ನೇ ಕಂತಿನ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಲಿದೆ. ಇದರ ಜೊತೆಗೆ ತಾಂತ್ರಿಕ ದೋಷಗಳನ್ನು ಪರಿಹರಿಸಿ ಪೆಂಡಿಂಗ್ ಇರುವ ಹಣವನ್ನು ಕೂಡ ಮಹಿಳೆಯರ ಖಾತೆಗೆ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ. ಇದರ ಜೊತೆಗೆ ಈಗಾಗಲೇ ಅರ್ಜಿ ಸಲ್ಲಿಸಿ ಖಾತೆಗೆ ಹಣ ಬಾರದೆ ಇದ್ದರೆ ಅರ್ಜಿಯಲ್ಲಿ ಇರುವ ಸಮಸ್ಯೆಯೂ ಕೂಡ ಕಾರಣ ಆಗಿರಬಹುದು ಹಾಗಾಗಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಹೊಸದಾಗಿ ಅರ್ಜಿ ಸಲ್ಲಿಸಿದ ನಂತರ ಹಣ ಜಮಾ ಆಗಲು ಆರಂಭವಾಗುತ್ತದೆ. ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿರುವವರಿಗೆ ಅದೇ ಮೊದಲ ಕಂತಿನ ಹಣ ಆಗಿರುತ್ತದೆ.

ಒಟ್ಟಿನಲ್ಲಿ ಮಹಿಳೆಯರು ತಮ್ಮ ಖಾತೆಗೆ ಹಣ ಬಂದಿಲ್ಲ ಎಂದು ಟೆನ್ಶನ್ ಮಾಡಿಕೊಳ್ಳುವ ಅಗತ್ಯ ಇಲ್ಲ ಅದರ ಬದಲು ಸಿಡಿಪಿಓ ಅಧಿಕಾರಿಗಳು ಅಥವಾ ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಬಹುದು. ನಿಮ್ಮ ಖಾತೆಯಲ್ಲಿ ಇರುವ ಸಮಸ್ಯೆಯನ್ನು ಪರಿಶೀಲಿಸಿ ಅದಕ್ಕೆ ಸೂಕ್ತ ಪರಿಹಾರವನ್ನ ಈ ಅಧಿಕಾರಿಗಳು ನೀಡಲಿದ್ದಾರೆ.

advertisement

Leave A Reply

Your email address will not be published.