Karnataka Times
Trending Stories, Viral News, Gossips & Everything in Kannada

Traffic Rules: ವಾಹನ ಅಡ್ಡಹಾಕುವ ಟ್ರಾಫಿಕ್ ಕಾನ್ಸ್ಟೇಬಲ್ ಗೆ ಹೊಸ ನಿಯಮ! ದ್ವಿಚಕ್ರ ವಾಹನರಿಗೆ ಬಂಪರ್ ಸಿಹಿಸುದ್ದಿ

advertisement

ನೀವು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್ ನಿಯಮಗಳನ್ನು (Traffic Rules) ಪಾಲನೆ ಮಾಡಲೇಬೇಕು. ಒಂದು ವೇಳೆ ಈ ನಿಯಮಗಳು ಉಲ್ಲಂಘನೆ ಆದಲ್ಲಿ ನಿಮ್ಮ ವಾಹನ ಸೀಜ್ ಆಗಬಹುದು ಅಥವಾ ನಿಮಗೆ ಭಾರಿ ಪ್ರಮಾಣದ ದಂಡ ಬೀಳಬಹುದು. ಆದರೆ ರಸ್ತೆಯಲ್ಲಿ ಗಾಡಿ ಓಡಿಸುವವರೆಗೂ ಕೆಲವು ಹಕ್ಕುಗಳು ಇರುತ್ತವೆ. ಆ ಹಕ್ಕುಗಳನ್ನು ಟ್ರಾಫಿಕ್ ಕಾನ್ಸ್ಟೇಬಲ್ (Traffic Constable) ಗಳು ಕಸಿದುಕೊಳ್ಳುವಂತೆ ಇಲ್ಲ. ಈ ಕೆಲವು ನಿಯಮಗಳ ಬಗ್ಗೆ ನೀವು ತಿಳಿದುಕೊಂಡರೆ ಇನ್ನು ಮುಂದೆ ನೀವು ಅನಗತ್ಯವಾಗಿ ಟ್ರಾಫಿಕ್ ಕಾನ್ಸ್ಟೇಬಲ್ ಗಳಿಗೆ ಹೆದರಬೇಕಾಗಿಲ್ಲ.

ಚಾಲಕರಿಗೆ Traffic Rules ನಲ್ಲಿರುವ ಹಕ್ಕುಗಳು:

ವಾಹನ ಚಲಾಯಿಸುವಾಗ ಹೆಡ್ ಲೈಟ್ (Head Light) ಆನ್ ಆಗದೇ ಇರುವುದು, ಕಾರಿನಲ್ಲಿ ಡ್ರೈವಿಂಗ್ ಸೀಟ್ ಬೆಲ್ಟ್ (Seat Belt) ಹಾಗೂ ಬೈಕ್ ನಲ್ಲಿ ಹೆಲ್ಮೆಟ್ ಧರಿಸುವುದು ಇವೆಲ್ಲವೂ ಟ್ರಾಫಿಕ್ ನಿಯಮಗಳಲ್ಲಿಯೇ (Traffic Rules) ಸೇರ್ಪಡೆಗೊಳ್ಳುತ್ತವೆ. ಆದರೆ ಒಂದು ವೇಳೆ ನೀವು ಇವುಗಳನ್ನ ಮಾಡದೇ ಇದ್ದಲ್ಲಿ ಟ್ರಾಫಿಕ್ ಕಾನ್ಸ್ಟೇಬಲ್ (Traffic Constable) ಗಳು ನಿಮ್ಮನ್ನು ನಿಲ್ಲಿಸಿ ಪ್ರಶ್ನೆ ಮಾಡಬಹುದು. ಆದರೆ ನಿಮ್ಮ ವಾಹನದ ಕೀ ಕಸಿದು ಕೊಳ್ಳುವುದು, ನಿಮ್ಮನ್ನ ಸ್ಟೇಷನ್ ಗೆ ಕರೆದುಕೊಂಡು ಹೋಗುವುದು ಇಂತಹ ಕೆಲಸವನ್ನು ಮಾಡುವಂತಿಲ್ಲ.

ಟ್ರಾಫಿಕ್ ಕಾನ್ಸ್ಟೇಬಲ್ ಕೀ ಕಸಿದುಕೊಳ್ಳುವಂತಿಲ್ಲ:

 

Image Source: informalnewz

 

ಭಾರತೀಯ ಮೋಟಾರು ವಾಹನ ಕಾಯ್ದೆ 1932ರ ಅಡಿಯಲ್ಲಿ ASI ಹಂತದ ಅಧಿಕಾರಿಗಳು ಮಾತ್ರ ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಚಲನ್ ನೀಡಬಹುದು. ASI, SI ಇನ್ಸ್ಪೆಕ್ಟರ್ ಗಳು ಸ್ಥಳದಲ್ಲಿಯೇ ದಂಡವನ್ನು ನಿಯಮ ಉಲ್ಲಂಘಿಸಿದವರಿಗೆ ವಿಧಿಸಬಹುದು. ಆದರೆ ಇದ್ಯಾವ ಹಕ್ಕು ಟ್ರಾಫಿಕ್ ಕಾನ್ಸ್ಟೇಬಲ್ ಗಳಿಗೆ ಇರುವುದಿಲ್ಲ, ಅವರು ಇನ್ಸ್ಪೆಕ್ಟರ್ ಗಳಿಗೆ ಸಹಾಯ ಮಾಡಲು ಇರುವಂತವರು. ಹಾಗಾಗಿ ಟ್ರಾಫಿಕ್ ಕಾನ್ಸ್ಟೇಬಲ್ (Traffic Constable) ಗಳು ನಿಮ್ಮ ಕಾರಿನ ಕೀ ತೆಗೆದುಕೊಳ್ಳುವುದು, ಕಾರಿನ ಚಕ್ರದ ಗಾಳಿ ತೆಗೆಯುವುದು ಅಥವಾ ನಿಮ್ಮೊಂದಿಗೆ ಅನುಚಿತವಾಗಿ ವರ್ತಿಸುವುದನ್ನು ಮಾಡುವಂತಿಲ್ಲ. ಒಂದು ವೇಳೆ ಟ್ರಾಫಿಕ್ ಕಾನ್ಸ್ಟೇಬಲ್ ಗಳು ವಿನಾಕಾರಣ ತೊಂದರೆ ಕೊಡುತ್ತಿದ್ದರೆ ಅವರ ವಿರುದ್ಧ ದೂರು ಸಲ್ಲಿಸುವ ಹಕ್ಕು ವಾಹನ ಚಾಲಕರಿಗೆ ಇದೆ.

advertisement

Traffic Rules ನಿಮಗೆ ತಿಳಿದಿರಲಿ:

 

Image Source: The News Minute

 

ಟ್ರಾಫಿಕ ಪೊಲೀಸ್ (Traffic Police) ನಿಮಗೆ ಚಲನ್ ನೀಡುವುದಾದರೆ ಅವರ ಬಳಿ ಈ ಚಲನ್ ಮಶಿನ್ ಇರಬೇಕು. ಅಥವಾ ಚಲನ ಪುಸ್ತಕ ಇರಬೇಕು. ಈ ಎರಡರಲ್ಲಿ ಯಾವುದು ಇಲ್ಲದೆ ಬರಿ ಬಾಯಿ ಮಾತಿನಲ್ಲಿ ದಂಡ ಕೇಳಿದರೆ ನೀವು ಪಾವತಿಸುವ ಅಗತ್ಯವಿಲ್ಲ.

ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ ಗಳು ನಿಮಗೆ 100 ರೂಪಾಯಿಗಳವರೆಗಿನ ದಂಡವನ್ನು ಮಾತ್ರ ವಿಧಿಸಬಹುದು. ಇದಕ್ಕಿಂತ ಹೆಚ್ಚಿನ ದಂಡಕ್ಕೆ ಚಲನ್ ನೀಡುವ ಅಧಿಕಾರ ASI, SI ಅಧಿಕಾರಿಗಳಿಗೆ ಮಾತ್ರ ಇರುತ್ತದೆ.

ಟ್ರಾಫಿಕ್ ಕಾನ್ಸ್ಟೇಬಲ್ ಕೀ ಕಸಿದುಕೊಂಡರೆ ಏನು ಮಾಡಬೇಕು?

ನೀವು ಅಂತಹ ಸಂದರ್ಭವನ್ನು ವಿಡಿಯೋ ಮಾಡಿ ಅದನ್ನು ಆ ಪ್ರದೇಶದ ಪೊಲೀಸ್ ಠಾಣೆಗೆ ಹೋಗಿ ತೋರಿಸಿ ದೂರನ್ನು ಸಲ್ಲಿಸಬಹುದು. ಇನ್ನು ನಿಮ್ಮ ಬಳಿ ಸ್ಥಳದಲ್ಲಿ ದಂಡ ಪಾವತಿ ಮಾಡಲು ಹಣ ಇಲ್ಲದಿದ್ದರೆ ನ್ಯಾಯಾಲಯ ನಿಮಗೆ ಚಲನ ಕಳುಹಿಸುತ್ತದೆ. ನೀವು ನ್ಯಾಯಾಲಯಕ್ಕೆ ಹೋಗಿ ಅದನ್ನು ಪಾವತಿಸಬೇಕು. ಇಂತಹ ಸಂದರ್ಭದಲ್ಲಿ ಟ್ರಾಫಿಕ್ ಅಧಿಕಾರಿಗಳು ನಿಮ್ಮ ಡ್ರೈವಿಂಗ್ ಲೈಸೆನ್ಸ್ (Driving License) ಅನ್ನು ಇಟ್ಟುಕೊಳ್ಳಲು ಹಕ್ಕಿದೆ.

ಮೋಟಾರ್ ವಾಹನ ಕಾಯ್ದೆ 1988 ಸೆಕ್ಷನ್ 3,4 ರ ಅಡಿಯಲ್ಲಿ ವಾಹನ ಚಲಾಯಿಸುವ ಪ್ರತಿಯೊಬ್ಬರು ವಾಹನ ಚಲಾವಣೆ ಪರವಾನಿಗೆ ಪತ್ರ ಅಂದ್ರೆ ಡ್ರೈವಿಂಗ್ ಲೈಸೆನ್ಸ್ (Driving License) ಹೊಂದಿರಬೇಕು. ವಾಹನ ಚಲಾಯಿಸುವಾಗ ಡ್ರೈವಿಂಗ್ ಲೈಸೆನ್ಸ್, ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ, ವಾಹನ ನೊಂದಣಿ ಪ್ರಮಾಣ ಪತ್ರ ಮೊದಲಾದ ದಾಖಲೆಗಳನ್ನು ಹೊಂದಿರುವುದು ಕಡ್ಡಾಯ. ಒಟ್ಟಿನಲ್ಲಿ ರಸ್ತೆಯ ನಿಯಮಗಳನ್ನು ಪಾಲಿಸಿ, ವಾಹನ ಚಲಾಯಿಸಿ ಜೊತೆಗೆ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.

advertisement

Leave A Reply

Your email address will not be published.