Karnataka Times
Trending Stories, Viral News, Gossips & Everything in Kannada

Driving License: ಕೇವಲ 16ನೇ ವಯಸ್ಸಿಗೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳುವುದು ಹೇಗೆ? ಷರತ್ತುಗಳು ಇಲ್ಲಿವೆ.

advertisement

ನೀವು ಭಾರತೀಯ ಪ್ರಜೆಯಾಗಿದ್ದರೆ, ದೇಶದಲ್ಲಿ ವಾಹನ ಚಲಾಯಿಸುವವರಾಗಿದ್ದರೆ, ಚಾಲನಾ ಪರವಾನಿಗೆ ನಿಯಮದ ಬಗ್ಗೆ ನಿಮಗೆ ಗೊತ್ತೇ ಇರುತ್ತೆ. ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯಬೇಕು ಅಂದ್ರೆ ಅದಕ್ಕೆ ಮುಖ್ಯವಾಗಿ 18 ವರ್ಷ ಆಗಿರಬೇಕು.18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಡ್ರೈವಿಂಗ್ ಲೈಸೆನ್ಸ್ (Driving License) ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಗೊತ್ತಿರುವ ವಿಚಾರ. ಆದರೆ ಇನ್ನೊಂದು ಇಂಟರೆಸ್ಟಿಂಗ್ ವಿಚಾರ ಇದೆ ನೋಡಿ. 16ನೇ ವಯಸ್ಸಿನಲ್ಲಿಯೇ ನೀವು ಚಾಲನಾ ಪರವಾನಿಗೆ ಪಡೆದುಕೊಳ್ಳಲು ಸಾಧ್ಯವಿದೆ ಹೇಗೆ ಎನ್ನುವುದನ್ನು ಇಲ್ಲಿ ನೋಡೋಣ.

ಭಾರತೀಯ ಸಾರಿಗೆ ಇಲಾಖೆ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುವಕರಿಗೆ ಚಾಲನಾ ಪರವಾನಿಗೆಯನ್ನು ನೀಡುತ್ತಿದೆ. ಆದರೆ ಇದಕ್ಕೆ ವಿಶೇಷವಾದ ಶರತ್ತುಗಳು ಕೂಡ ಇವೆ. ಅದೇ ರೀತಿ ಒಂದು ವೇಳೆ ಈ ಶರತ್ತುಗಳನ್ನು ನೀವು ಉಲ್ಲಂಘನೆ ಮಾಡಿದರೆ ಭಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ.

16ನೇ ವಯಸ್ಸಿಗೆ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಲು ಇರುವ ನಿಯಮಗಳು ಯಾವವು?

 

advertisement

 

16ನೇ ವಯಸ್ಸಿಗೆ ಡ್ರೈವಿಂಗ್ ಲೈಸೆನ್ಸ್ (Driving License) ಅಥವಾ ಚಾಲನಾ ಪರವಾನಿಗೆ ಪಡೆದುಕೊಳ್ಳಬಹುದು ಎನ್ನುವ ಪ್ರಶ್ನೆ ಮೂಡಿದರೆ, ಇಲ್ಲಿದೆ ಉತ್ತರ, ಹೌದು, ಗೇರ್ ಇಲ್ಲದ ಬೈಕ್ ಡ್ರೈವ್ ಮಾಡಲು ನೀವು 16 ವರ್ಷ ವಯಸ್ಸಿನಲ್ಲಿ ಇರುವಾಗಲೇ ಡ್ರೈವಿಂಗ್ ಲೈಸೆನ್ಸ್ ಪಡೆದುಕೊಳ್ಳಬಹುದು. ಕೇವಲ 50 ಸಿಸಿ ಸಾಮರ್ಥ್ಯದ ಎಂಜಿನ್ ಇರುವ ಅಥವಾ ಅದಕ್ಕಿಂತ ಕಡಿಮೆ ಸಾಮರ್ಥ್ಯದ ಎಂಜಿನ್ ಹೊಂದಿರುವ ಬೈಕ್ ಗೆ ಮಾತ್ರ ಈ ಪರವಾನಿಗೆ ಸಿಗುತ್ತದೆ. ಇದಕ್ಕಿಂತ ಹೆಚ್ಚಿನ ಇಂಜಿನ್ ಸಾಮರ್ಥ್ಯ ಇರುವ ಬೈಕ್ ಓಡಿಸಿದರೆ ದಂಡ ಪಾವತಿಸಬೇಕು.

ನಿಮಗೆ 18 ವರ್ಷ ಪೂರ್ಣಗೊಂಡ ನಂತರ ಈ ನಿಯಮವನ್ನ ನವೀಕರಿಸಬಹುದು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿ ಶಾಶ್ವತ ಪರವಾನಿಗೆ ಪಡೆಯಬಹುದು. ಈ ಪರವಾನಿಗೆ ಪಡೆದ ನಂತರ ಕಾರು ಮತ್ತು ಬೈಕ್ ಎರಡನ್ನು ಓಡಿಸಬಹುದು.

16 ವರ್ಷ ವಯಸ್ಸಿನವರಾಗಿದ್ದರೆ, ಗೇರ್ ಲೆಸ್ ಸ್ಕೂಟರ್ ಗಾಗಿ RTO Office ನಲ್ಲಿ ಅರ್ಜಿ ಸಲ್ಲಿಸಬೇಕು. ಅಗತ್ಯ ಇರುವ ದಾಖಲೆಗಳನ್ನು ನೀಡಿ ಡ್ರೈವಿಂಗ್ ಪರವಾನಿ (Driving License) ಗೆ ಪಡೆದುಕೊಳ್ಳಬಹುದು. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಬೈಕ್ ಅಥವಾ ಕಾರ್ ಓಡಿಸಿ ಸಿಕ್ಕಿಹಾಕಿಕೊಂಡರೆ ಭಾರಿ ಪ್ರಮಾಣದಲ್ಲಿ ದಂಡ ತೆರಬೇಕಾಗುತ್ತದೆ.

advertisement

Leave A Reply

Your email address will not be published.