Karnataka Times
Trending Stories, Viral News, Gossips & Everything in Kannada

Nissan Magnite: ಸ್ವಿಫ್ಟ್ ಕಥೆ ಮುಗಿತು, 5 ಸ್ಟಾರ್ ಸೇಫ್ಟಿ ಇರುವ ಹೊಸ ನಿಸ್ಸಾನ್ ಕಾರು ಮಾರುಕಟ್ಟೆಗೆ ಎಂಟ್ರಿ, 20Km ಮೈಲೇಜ್!

advertisement

ಭಾರತೀಯ ಮಾರುಕಟ್ಟೆಯಲ್ಲಿ ವಾಹನ ತಯಾರಿಕಾ ಆಟೋ ಮೊಬೈಲ್ ಕ್ಷೇತ್ರಗಳು ಬಹಳ ಜನಪ್ರಿಯ ವಾಗುತ್ತಲಿವೆ‌. ವಾಹನ ಬೇಡಿಕೆ ಸಂಖ್ಯೆ ಹೆಚ್ಚಾದಂತೆ ವಾಹನ ಪೂರೈಕೆ ಮಾಡುವ ಕಂಪೆನಿಗಳು ಹೊಸ ಹೊಸ ಆವೃತ್ತಿಗಳ ಉತ್ಪನ್ನಕ್ಕೆ ಬೆಂಬಲಿಸುತ್ತಿವೆ. ಈ ನಿಟ್ಟಿನಲ್ಲಿ ನಿಸ್ಸಾನ್ (Nissan) ಕಂಪೆನಿಯ ನೂತನ ಆವೃತ್ತಿ SUV ಕಾರು ಬಹು ಜನರ ಆಕರ್ಷಣೆ ಭಾಗವಾಗಿದೆ. ಈ ಒಂದು ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬ್ರೆಝಾ ಹಾಗೂ ಕ್ರೇಟಾ ಮಾದರಿಗಳಿ ಪ್ರಬಲ ಪೈಪೋಟಿ ನೀಡಲಿದೆ.ಹಾಗಾಗರೆ ಇದರ ವೈಶಿಷ್ಟ್ಯ ಏನು ಯಾವ ಮಾಡೆಲ್ ಬೆಲೆ ಎಷ್ಟು? ಎಂಬ ಅನೇಕ ವಿವರವಾದ ಮಾಹಿತಿಯನ್ನು ನಾವಿಂದು ನಿಮಗೆ ನೀಡಲಿದ್ದೇವೆ.

ಯಾವುದು ಈ‌ ಕಾರು?

 

 

ಈ ಒಂದು ಕಾರು ಭಾರತೀಯ ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುತ್ತಿದೆ. ಇದರ ಹೆಸರು ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಎಂದಿದ್ದು ನೋಡಲು ಹೆಚ್ಚು ಸ್ಟೈಲಿಶ್ ಹಾಗೂ ಲಕ್ಶೂರಿ ಲುಕ್ ನೀಡಲಿದೆ. ಇದರಲ್ಲಿ ಅತ್ಯುತ್ತಮ ಇಂಧನ ದಕ್ಷತೆ ಇರಲಿದ್ದು 20kmpl ಮೈಲೇಜ್ ನೀಡಲಿದೆ. ಇದರಲ್ಲಿ ಶಕ್ತಿ ಶಾಲಿ ಇಂಧನ ವ್ಯವಸ್ಥೆ ಇರಲಿದೆ. ಎರಡು ಪ್ರತ್ಯೇಕ ಇಂಧನ ಆಯ್ಕೆ ನಿಮಗೆ ಸಿಗಲಿದೆ.

ಬಲಿಷ್ಠ ದಕ್ಷತೆ:

advertisement

ಇ ಒಂದು ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಕಾರಿನಲ್ಲಿ ಬಲಿಷ್ಠ ಇಂಧನ ದಕ್ಷತೆ ಇದೆ. 1.0 ಲೀಟರ್ ಪೆಟ್ರೋಲ್ ನಲ್ಲಿ 71hp ಪವರ್ ಮತ್ತು 96NM ಟಾರ್ಕ್ ನೀಡಲಿದ್ದು ಇದು ಮೊಸಲ ಇಂಜಿನ್ ಆಯ್ಕೆಯಾಗಿದೆ. ಎರಡನೇಯದ್ದಾಗಿ 1.0ಲೀಟರ್ ಟರ್ಬೋ ಚಾರ್ಜ್ ಪೆಟ್ರೋಲ್ ನಲ್ಲಿ 100HP ಪವರ್ ಹಾಗೂ 160 NM ಟಾರ್ಕ್ ನೀಡಲಿದೆ. ಹಾಗಾಗಿ ಇದೊಂದು ಬಲಿಷ್ಠ , ಶಕ್ತಿಶಾಲಿ ಕಾರ್ಯಕ್ಷಮತೆ ಹೊಂದಿದೆ ಎಂದು ಹೇಳಬಹುದು.

ವೈಶಿಷ್ಟ್ಯ ಹೇಗಿದೆ?

 

 

  • ಎರಡು ಇಂಜಿನ್ ನಲ್ಲಿ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ 5ಸ್ಪೀಡ್ ಗೇರ್ ಬಾಕ್ಸ್ ಇದೆ.
  • ಸುರಕ್ಷತೆ ದೃಷ್ಟಿಯಿಂದ ಎರ್ ಬ್ಯಾಗ್ ಪಾರ್ಕಿಂಗ್ ಸೆನ್ಸರ್ ಇತರ ವ್ಯವಸ್ಥೆ ಇರಲಿದ.
  • ಸ್ಪೀಡ್ ಸೆನ್ಸಿಂಗ್ ಡೋರ್ ಲಾಕ್ , ಸ್ಮಾರ್ಟ್ ಕನೆಕ್ಟಿವಿಟಿ ಇದೆ.
  • ಮಾನಿಟರ್ ಮತ್ತು ಏರ್ ಪ್ಯೂರಿಫೈಯರ್ ವ್ಯವಸ್ಥೆ ಇರಲಿದೆ.
  • ABS, EBD, HBA,HSA ಗಳಂತಹ ಆಧುನಿಕ ಸುರಕ್ಷತಾ ವೈಶಿಷ್ಟ್ಯ ಇದೆ.
  • ವೈರ್ ಲೆಸ್ ಚಾರ್ಜಿಂಗ್ ಬ್ಲೂಟುತ್ ವ್ಯವಸ್ಥೆ ಇದೆ.
  • 7ಇಂಚಿನ TFT ಟಚ್ ಸ್ಕ್ರೀನ್ ಹೊಂದಿದೆ.
  • ನೋಡಲು ಅತ್ಯಾಕರ್ಷಕ ಲುಕ್ ಸಹ ಇದೆ.

ಬೆಲೆ ಎಷ್ಟು?

ಈ ಅತ್ಯಾಧುನಿಕ ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಕಾರು ಮೇಕ್ ಇನ್ ಇಂಡಿಯಾ ಮೇಡ್ ಫಾರ್ ದಿ ವರ್ಲ್ಡ್ ಎಂಬ ಘೋಷ ವಾಕ್ಯ ಇಟ್ಟು ಕೊಂಡಿದ್ದು ಬಹಳ ಟ್ರೆಂಡ್ ಮಾಡುತ್ತಿದೆ. ಈ ಒಂದು SUVಕಾರನ್ನು ಪ್ರಾರಂಭಿಕ ಹಂತದಲ್ಲಿ ವಿದೇಶಕ್ಕೆ ರಫ್ತು ಮಾಡಲಾಗುತ್ತಿದ್ದು 5.97 ಲಕ್ಷ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಬಳಿಕ ಇಲ್ಲಿ ಸಹ ಬರಲಿದೆ. ಜಾಗತಿಕ ಮಟ್ಟದಲ್ಲಿ ಒಂದೊಳ್ಳೆ ಕಾರು ಹುಡುಕುವವರಿವೆ ಈ ಆಧುನಿಕ ಕಾರು ಉತ್ತಮ ಆಯ್ಕೆ ಆಗಲಿದೆ ಎನ್ನಬಹುದು.

advertisement

Leave A Reply

Your email address will not be published.