Karnataka Times
Trending Stories, Viral News, Gossips & Everything in Kannada

Hero Splendor EV: ಓಲಾ, ಅಥರ್ EV ಸ್ಕೂಟರ್ ಗಳು ಇನ್ನು ಸೈಡ್ ಲೈನ್; ಬಂದಿದೆ 180Km ರೇಂಜ್ ಇರುವ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್!

advertisement

ಎಲೆಕ್ಟ್ರಿಕ್ ವೆಹಿಕಲ್ ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಪಡೆದುಕೊಂಡಿದೆ. ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಹೊಸ ಹೊಸ ದ್ವಿಚಕ್ರ ವಾಹನಗಳು ಪ್ರತಿದಿನ ಬಿಡುಗಡೆ ಆಗುತ್ತವೆ. ಬೇರೆ ಬೇರೆ ಕಂಪನಿಗಳು ಉತ್ತಮ ಗುಣಮಟ್ಟದ ಚಕ್ರ ವಾಹನಗಳನ್ನು ಹೊಸ ರೂಪದಲ್ಲಿ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ಇವುಗಳಲ್ಲಿ ಹೀರೊ ಕಂಪನಿ ಕೂಡ ಹಿಂದೆ ಬಿದ್ದಿಲ್ಲ.

ಹೀರೋ ಮೋಟೋ ಕಾರ್ಪ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ:

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ, ಜನರ ವಿಶ್ವಾಸಕ್ಕೆ ಪಾತ್ರವಾಗಿರುವ ಹೀರೋ ಕಂಪನಿ, ಇಲ್ಲಿಯವರೆಗೆ ಸಾಕಷ್ಟು ಉತ್ತಮ ಶ್ರೇಣಿಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಬಿಡುಗಡೆ ಮಾಡಿದೆ. ಇನ್ನು ಹೀರೋ ಗ್ರಾಹಕರ ಆದ್ಯತೆಯ ಮೇರೆಗೆ ಎಲೆಕ್ಟ್ರಿಕ್ ವಾಹನ ನಿರ್ಮಾಣದತ್ತ ಕೂಡ ಗಮನಹರಿಸಿದೆ.

Hero Splendor EV:

 

 

advertisement

ದ್ವಿಚಕ್ರ ಪ್ರಿಯರಿಗೆ ಹೀರೋ ಸ್ಪ್ಲೆಂಡರ್ (Hero Splendor) ಉತ್ತಮ ಬೈಕ್ ಎನಿಸಿದೆ ಯಾಕಂದ್ರೆ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಹಳ್ಳಿಗಳಲ್ಲಿಯೂ ಕೂಡ ಹೀರೋ ಸ್ಪ್ಲೆಂಡರ್ ಹೆಚ್ಚು ಪ್ರಚಲಿತದಲ್ಲಿ ಇದೆ. ಕೆಲವು ದಶಕಗಳಿಂದ ಭಾರತೀಯ ರಸ್ತೆಯಲ್ಲಿ ಪ್ರಧಾನ ಸ್ಥಾನಮಾನ ಗೆಟ್ಟಿಸಿಕೊಂಡಿರುವ ಸ್ಪ್ಲೆಂಡರ್ ಈಗ ಎಲೆಕ್ಟ್ರಿಕ್ ಮಾದರಿಯಲ್ಲಿ ಬರಲು ಸಿದ್ಧವಾಗಿದೆ.

ಇರು ಮೋಟೋ ಕಾರ್ಪ ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಬ್ರಾಂಡ್ ಆಗಿರುವ VIDA ಯನ್ನು ಇತ್ತೀಚಿಗೆ ಅನಾವರಣಗೊಳಿಸಿದೆ. ಸ್ಪ್ಲೆಂಡರ್ ನ ಎಲೆಕ್ಟ್ರಿಕ್ ವರ್ಷನ್ (Hero Splendor EV) ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲದೆ ಇದ್ದರೂ ಜನರಲ್ಲಿ ಕುತೂಹಲವಲ್ಲಂತೂ ಸೃಷ್ಟಿಸಿದೆ. ಈಗ ಸಿಕ್ಕಿರುವ ಮಾಹಿತಿಯ ಪ್ರಕಾರ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ನಲ್ಲಿ 9 kWh ಬ್ಯಾಟರಿ ಪ್ಯಾಕ್ ಹಾಗೂ 2kWh ತುರ್ತು ಬ್ಯಾಕಪ್ಗಳನ್ನು ನೀಡಲಾಗಿದೆ. ಒಂದು ಚಾರ್ಜ್ ನಲ್ಲಿ 120 ರಿಂದ 180 ಕಿಲೋಮೀಟರ್ ವರೆಗೆ ವ್ಯಾಪ್ತಿಯನ್ನು ನೀಡಬಹುದು. ಇದು ಸ್ಪ್ಲೆಂಡರ್ ನ ರೂಪಾಂತರವನ್ನು ಆಧರಿಸಿರುತ್ತದೆ.

Hero Splendor EV ಬೆಲೆ ಎಷ್ಟು:

ಹೀರೋ ಮೋಟೋ ಕಾರ್ಪ್ (Hero Moto Corp) ಕಂಪನಿ ಸ್ಪರ್ಧಾತ್ಮಕ ಬೆಲೆಯಲ್ಲಿಯೇ ಎಲೆಕ್ಟ್ರಿಕ್ ವಾಹನ ನೀಡುತ್ತಿದೆ ಎಂದು ಹೇಳಬಹುದು. ಹಾಗಾಗಿ ಅಂದಾಜು ಒಂದು ಲಕ್ಷ ರೂಪಾಯಿಗಳಿಂದ 1.5 ಲಕ್ಷ ರೂಪಾಯಿಗಳವರೆಗೆ ಈ ಬೈಕ್ ನ ವಿವಿಧ ಶ್ರೇಣಿಯನ್ನು ಖರೀದಿಸಲು ಸಾಧ್ಯವಿದೆ.

ಇನ್ನು ಹೀರೋ ಮೋಟೋ ಕಾರ್ಪ್ ತಮ್ಮ ಎಲೆಕ್ಟ್ರಿಕ್ ಸ್ಪ್ಲೆಂಡರ್ ಬೈಕ್ ಯಾವಾಗ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ ಎನ್ನುವುದಕ್ಕೆ ನಿರ್ದಿಷ್ಟ ದಿನಾಂಕ ಬಹಿರಂಗಗೊಂಡಿಲ್ಲ. ಸದ್ಯಕ್ಕೆ ನೀವು ಈ ಕುತೂಹಲದಲ್ಲಿ ಸಮಯ ಕಳೆಯಬೇಕು ಅಷ್ಟೇ.

advertisement

Leave A Reply

Your email address will not be published.