Karnataka Times
Trending Stories, Viral News, Gossips & Everything in Kannada

HSRP ನಂಬರ್ ಪ್ಲೇಟ್ ಹಾಕದಿದ್ದವರಿಗೆ ಕೊನೆಯ ವಾರ್ನಿಂಗ್! ಸರ್ಕಾರದ ಹೊಸ ನಿಲುವು ಪ್ರಕಟ

advertisement

HSRP Number Plate: ಇಂದು ವಾಹನ‌ ಮಾಲೀಕರ‌ ಹಿತ ದೃಷ್ಟಿಯಿಂದ ಸಾರಿಗೆ ಇಲಾಖೆಯು ಕೆಲವೊಂದು ಹೊಸ ನಿಯಮಗಳನ್ನು ಜಾರಿಗೆ ತರ್ತಾ ಇದೆ. ಅದರಲ್ಲಿ ಎಚ್ ಎಸ್ ಅರ್ ಪಿ(HSRP) ಅಳವಡಿಕೆ ಕೂಡ ಒಂದಾಗಿದೆ.ಇಂದು ರಸ್ತೆಯಲ್ಲಿ ಓಡಾಡುವ ವಾಹನ ಗಳ ಸಂಖ್ಯೆ ಬಹಳಷ್ಟು ಹೆಚ್ಚಳ ವಾಗಿದೆ. ಹಾಗಾಗಿ ವಾಹನ ಮಾಲೀಕರ ಸುರಕ್ಷತೆಯು ಮುಖ್ಯ.ಹಾಗಾಗಿ ಸಾರಿಗೆ ಇಲಾಖೆಯ ನಿಯಮಗಳನ್ನು ವಾಹನ ಮಾಲೀಕರು ಪಾಲಿಸೋದು ಕೂಡ ಬಹಳ ಮುಖ್ಯವಾಗುತ್ತದೆ.2019ರ ಏಪ್ರಿಲ್ 1ರ ಮೊದಲು ನೋಂದಣಿಯಾಗಿರುವ ಎಲ್ಲ ವಾಹನಗಳಿಗೆ ಎಚ್‌ಎಸ್‌ಆರ್ ಪಿ ಅಳವಡಿಕೆ ಮಾಡುವುದು ಕಡ್ಡಾಯವಾಗಿದ್ದು ಸಾರಿಗೆ ಇಲಾಖೆ ಈ ಬಗ್ಗೆ ಹಲವು ಭಾರಿ ಸುತ್ತೋಲೆಯನ್ನು ಹೊರಡಿಸಿದೆ.

HSRP
Image Source: IndiaToday

ಕಡ್ಡಾಯ ಅಳವಡಿಕೆ

ವಾಹನಗಳಿಗೆ ಹೈಸೆಕ್ಯುರಿಟಿ ನಂಬ‌ರ್ ಪ್ಲೇಟ್ ಅಳವಡಿಕೆಗೆ ಮಾಡುವುದು ಕಡ್ಡಾಯ ವಾಗಿದೆ ಎಂದು ಸಾರಿಗೆ ಇಲಾಖೆಯು ಈಗಾಗಲೇ ಮಾಹಿತಿ ನೀಡಿದೆ. ಈಗಾಗಲೇ ಎಚ್ ಎಸ್ ಅರ್ ಪಿ ಅಳವಡಿಕೆ ಮಾಡಲು ಮೇ.31ರವರೆಗೆ ಅವಕಾಶ ನೀಡಿದ್ದು ನಂಬರ್ ಪ್ಲೇಟ್ ಅಳವಡಿಕೆ ಮಾಡದೇ ಇದ್ದಲ್ಲಿ ದಂಡ ವಿಧಿಸುವ ಸಾಧ್ಯತೆ ಕೂಡ ಇದೆ.ಈಗಾಗಲೇ ಕೆಲವಷ್ಟು ಮಂದಿ ವಾಹನಗಳಿಗೆ ಹೈ- ಸೆಕ್ಯುರಿಟಿ ರಿಜಿಸ್ಟ್ರೇಶನ್‌ ಪ್ಲೇಟ್ ಅಳವಡಿಕೆ ಮಾಡಿದ್ದಾರೆ.‌ಅಲ್ಲದೆ ಇನ್ನುಳಿದ ವಾಹನ ಮಾಲೀಕರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡ್ತ ಇದೆ

ದಂಡ ವಿಧಿಸಲಿದೆ

advertisement

ರಾಜ್ಯ ಸರ್ಕಾರವು ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ನೊಂದಣಿ ‌ಮಾಡಲು‌ ಮೇ.31ರವರೆಗೆ ಅವಕಾಶ ನೀಡಿದೆ.ಅಳವಡಿಕೆ ಮಾಡದೇ ಇದ್ದಲ್ಲಿ ಜೂ. 1 ರಿಂದ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ‌ಅಳವಡಿಕೆ ಇಲ್ಲದ ವಾಹನಗಳಿಗೆ ದಂಡ ವಿಧಿಸಲು ನಿರ್ಧಾರ ಮಾಡಿದೆ.

HSRP Number Plate
Image Source: Spinny

ವಿಸ್ತರಣೆ ಮಾಡುವ ಸಾಧ್ಯತೆ ಕಡಿಮೆ

ಈಗಾಗಲೇ ಫೆಬ್ರವರಿಯಿಂದ ಸುಮಾರು 18 ಲಕ್ಷ ವಾಹನ ನೋಂದಣಿ ಆಗಿದ್ದು‌ ಹೆಚ್ಚಿನ ವಾಹನಗಳು ಇನ್ನೂ ಕೂಡ‌ ಎಚ್‌ಎಸ್‌ಆರ್ಪಿ ನೊಂದಣಿ ಮಾಡಿಕೊಂಡಿಲ್ಲ. ಈಗಾಗಲೇ ಹಲವು ಭಾರಿ ಅವಕಾಶ ನೀಡಿದ್ದು ಇನ್ಮುಂದೆ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್​ ಪ್ಲೇಟ್ ಅಳವಡಿಸುವ ಅವಧಿಯನ್ನು ಇನ್ನು‌ ವಿಸ್ತರಣೆ ಮಾಡುವ ಸಾಧ್ಯತೆ ಕೂಡ ಕಡಿಮೆ ‌ಇದೆ ಅನ್ನಬಹುದು. ಒಂದು ವೇಳೆ ನಿಗದಿತ ಸಮಯದ ಮೊದಲು ಅಳವಡಿಕೆ ಮಾಡದೇ ಇದ್ದಲ್ಲಿ ವಾಹನ ಮಾಲೀಕತ್ವ ಡಿಎಲ್ ರದ್ದು ಮಾಡಲಿದೆ.

ನೀವು ಇನ್ನೂ ಕೂಡ ರಿಜಿಸ್ಟ್ರೇಶನ್ ಪ್ಲೇಟ್ಸ್ ಅಳವಡಿಸಿಲ್ಲ‌ ಎಂದಾದರೆ ಸಾರಿಗೆ ಇಲಾಖೆಯ ವೆಬ್‌ಸೈಟ್‌  https://transport.karnataka.gov.in ಅಥವಾ www.siam.in ಗೆ ಭೇಟಿ ನೀಡಬೇಕು. ಅಲ್ಲಿ ಹೆಚ್‌ಎಸ್‌ಆರ್‌ಪಿ ಬುಕ್ ಮಾಡಬಹುದು.

advertisement

Leave A Reply

Your email address will not be published.