Karnataka Times
Trending Stories, Viral News, Gossips & Everything in Kannada

Driving License: ಡ್ರೈವಿಂಗ್ ಲೈಸೆನ್ಸ್ ಟೆಸ್ಟ್ ಇನ್ನಷ್ಟು ಬಿಗಿ, ಸಾರಿಗೆ ಇಲಾಖೆಯಿಂದ ಇನ್ಮುಂದೆ ಈ ನಿಯಮ ಅನ್ವಯ!

advertisement

ಇಂದು ರಸ್ತೆಯಲ್ಲಿ ಓಡಾಡುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದೆ.‌ ಅದೇ ರೀತಿ ವಾಹನಗಳನ್ನು ಖರೀದಿ ಮಾಡುವ ಸಂಖ್ಯೆಯು ಗಣನೀಯವಾಗಿ ಏರಿಕೆ ಕಂಡಿದೆ.ಕೆಲವರು ಈ ಹಿಂದೆ ಡ್ರೈವಿಂಗ್ ಲೈಸೆನ್ಸ್ ಅನ್ನು ತುಂಬ ಸರಳವಾಗಿ ಮಾಡಿಕೊಂಡಿದ್ದಾರೆ. ಆದರೆ ಈ ಹಿಂದೆ ಲೈಸೆನ್ಸ್ ನಿಯಮಗಳು ಸರಳವಾಗಿತ್ತು. ಸುಲಭವಾಗಿ ಡ್ರೈವಿಂಗ್ ಲೈಸೆನ್ಸ್ (Driving License)ಪಡೆಯಲು ಸಾಧ್ಯವಾಗುವಂತೆ ನಿಯಮಗಳನ್ನು ಮಾಡಲಾಗಿತ್ತು.

ಕೇರಳದಲ್ಲಿ ಈ ನಿಯಮ ಅನ್ವಯ

ಸಾರಿಗೆ ಇಲಾಖೆಯು ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಲೆ ಇರುತ್ತದೆ. ಅದೇ ರೀತಿ ಇದೀಗ ಕೇರಳದಲ್ಲಿ ವಾಹನ ಚಾಲನೆ ಪರವಾನಿಗೆ ವಿಧಾನಗಳನ್ನು ಸೂಕ್ತವಾಗಿ ಪರಿಗಣಿಸಿ ಮತ್ತಷ್ಟು ಕಠಿಣ ಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಹೌದು ಡ್ರೈವಿಂಗ್ ಲೈಸೆನ್ಸ್ (Driving License) ಪಡೆಯಲು ಇನ್ಮುಂದೆ ಪರೀಕ್ಷಾ ಪ್ರಶ್ನಾಪತ್ರಿಕೆಯಲ್ಲಿ ಇರುವ ೨೦ ಪ್ರಶ್ನೆಗಳನ್ನು ೩೦ಕ್ಕೆ ಏರಿಕೆ ಮಾಡಿದೆ. ಇದರಲ್ಲಿ ೧೨ ಉತ್ತರ ಸರಿಯಾಗಿ ನೀಡಿದ್ದರೆ ಮಾತ್ರ ಪರವಾನಿಗೆ ಪಡೆಯಲು ಅರ್ಹರು ಎಂಬ ಪ್ರಮಾಣ ಪತ್ರ ಸಿಗಲಿದೆ. ಪ್ರಾಯೋಗಿಕ ಪರೀಕ್ಷೆಯಲ್ಲಿ ಯಾವುದೇ ಸಡಿಲಿಕೆ ಇಲ್ಲ ಎಂದು ಮಾಹಿತಿ ನೀಡಿದ್ದಾರೆ.

ಅನ್ ಲೈನ್ ಮೂಲಕ ಅರ್ಜಿ ಗೆ ಅವಕಾಶ

ಅದೇ ರೀತಿ ಇಂದು ಆನ್‌ಲೈನ್ ಮೂಲಕವೇ ಚಾಲನಾ ಪರವಾನಿಗೆ ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಅವಕಾಶ ಇದ್ದು ಮತ್ತಷ್ಟು ಸರಳವಾಗಿದೆ. ಮನೆಯಿಂದಲೇ ಡಿಎಲ್ ಅನ್ನು ಈಗ ಸುಲಭವಾಗಿ ಪಡೆಯಬಹುದಾಗಿದೆ.

advertisement

ಈ ದಾಖಲೆ ಬೇಕು

ನೀವು ಹೊಸ ಪರವಾನಗಿ ಮಾಡುದಾದರೆ ಅರ್ಜಿಯೊಂದಿಗೆ ಕೆಲವು ದಾಖಲೆ ಗಳನ್ನು ಸಲ್ಲಿಸುವುದು ಸಹ ಮುಖ್ಯವಾಗುತ್ತದೆ. ಅದರಲ್ಲಿ ಮುಖ್ಯ ವಾಗಿ ವಯಸ್ಸಿನ ಪುರಾವೆ , ಶೈಕ್ಷಣಿಕ ಪ್ರಮಾಣಪತ್ರ, ಜನ್ಮ ಪ್ರಮಾಣಪತ್ರ, ಪ್ಯಾನ್ ಕಾರ್ಡ್ ಅಥವಾ ಉದ್ಯೋಗದಾತರ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ.

ಮೋಟಾರು ವಾಹನ ಕಛೇರಿಗೂ ನಿರ್ಬಂಧ

ಇನ್ನು ವಾಹನ ಪರವಾನಗಿ ಯನ್ನು ನೀಡಲು ಮೋಟಾರು ವಾಹನ ಕಚೇರಿಗೂ ಕೆಲವು ನಿರ್ಬಂಧಗಳಿದ್ದು ಒಂದು ಕಚೇರಿಯಿಂದ ದಿನಕ್ಕೆ ನೀಡಲಾಗುವ ಪರವಾನಗಿಗಳ ಸಂಖ್ಯೆಯನ್ನು ಸಹ ನಿಗದಿ ಪಡಿಸಲಾಗಿದೆ. ಈ ಸಂಖ್ಯೆಯನ್ನು ಇನ್ನು ೨೦ಕ್ಕೆ ನಿಗದಿಪಡಿಸಲಾಗುತ್ತದೆ. ಈ ಬಗ್ಗೆ ಶೀಘ್ರದಲ್ಲೇ ಆದೇಶ ಹೊರಡಿಸಲಾಗುತ್ತದೆ ಎನ್ನಲಾಗಿದೆ.

advertisement

Leave A Reply

Your email address will not be published.