Post Office Scheme: ಕೆಲವೇ ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದಕ್ಕೆ ಇಲ್ಲಿದೆ ಬೆಸ್ಟ್ ಆಯ್ಕೆ; ಕೇವಲ 34 ರೂಪಾಯಿ ಹೂಡಿಕೆ ಆರಂಭಿಸಿ 18 ಲಕ್ಷ ಹಣ ಪಡೆಯಿರಿ!
![](https://karnatakatimes.com/wp-content/uploads/2024/01/Get-18-lakh-rupees-by-investing-just-34-rupees-through-this-post-office-scheme.jpg)
advertisement
ಭವಿಷ್ಯದ ಭದ್ರತೆಗಾಗಿ ಪ್ರತಿಯೊಬ್ಬರು ಹೂಡಿಕೆ ಮಾಡಲು ಬಯಸುವುದು ಸಹಜ. ನಾವು ಯಾವಾಗ ದುಡಿಯಲು ಆರಂಭಿಸುತ್ತೇವೆಯೋ, ಅಲ್ಲಿಂದಲೇ ಒಂದಲ್ಲ ಒಂದು ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ, ವೃದ್ಧಾಪ್ಯ ಸಮಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಜೀವನ ನಡೆಸಲು ಸಾಧ್ಯವಾಗುತ್ತದೆ.
ಹೀಗೆ ನೀವು ಉತ್ತಮ ಲಾಭ ಸಿಗುವಂತಹ ಹೂಡಿಕೆ ಮಾಡಲು ಬಯಸಿದರೆ ಅಂಚೆ ಕಚೇರಿಯ ಪಿಪಿಎಫ್ ಯೋಜನೆ (PPF Scheme) ಯನ್ನು ಆಯ್ದುಕೊಳ್ಳುವುದು ಒಳ್ಳೆಯದು. ಕಡಿಮೆ ಹೂಡಿಕೆ ಮಾಡಿ ಉತ್ತಮ ಆದಾಯ ಪಡೆದುಕೊಳ್ಳಲು ಯೋಚಿಸುವವರು PPF Account ಯನ್ನು ಆರಂಭಿಸಿ.
Post Office PPF Account:
ಸುರಕ್ಷಿತ ಆದಾಯವನ್ನು ನೀವು ಬಯಸಿದರೆ ಅಂಚೆ ಕಚೇರಿಯ ಪಿಪಿಎಫ್ ಖಾತೆ (Post Office PPF Account) ಯನ್ನು ಆರಂಭಿಸುವುದು ಸೂಕ್ತ. ಇದು ಮಾರುಕಟ್ಟೆಯ ಅಪಾಯ ಮುಕ್ತವಾಗಿರುವ ಹೂಡಿಕೆ ಆಗಿದ್ದು ಹೆಚ್ಚು ಆದಾಯವನ್ನು ಕಡಿಮೆ ಹೂಡಿಕೆಯ ಮೂಲಕ ಪಡೆದುಕೊಳ್ಳಬಹುದು. ಸ್ಟಾಕ್ ಮಾರುಕಟ್ಟೆಯ ಲಿಂಕ್ ಇಲ್ಲದೆ ಇರುವುದರಿಂದ ಅಂಚೆ ಕಚೇರಿಯ ಯಾವುದೇ ಯೋಜನೆ, ಹೆಚ್ಚು ಸೇಫ್ ಆಗಿರುತ್ತದೆ.
advertisement
PPF ಹೂಡಿಕೆ ಮಾಡುವುದು ಹೇಗೆ?
ಅಂಚೆ ಕಚೇರಿಯ PPF ಅಲ್ಲಿ ಹೂಡಿಕೆ ಮಾಡಲು 18 ವರ್ಷ ವಯಸ್ಸಾಗಿರಬೇಕು. ಪ್ರತಿದಿನ 34 ರೂಪಾಯಿಗಳನ್ನು ಉಳಿತಾಯ ಮಾಡುವುದರಿಂದ 18 ಲಕ್ಷ ರೂಪಾಯಿಗಳನ್ನು ಹಿಂಪಡೆಯಲು ಸಾಧ್ಯವಿದೆ. ಪಿಪಿಎಫ್ ಹೂಡಿಕೆಗೆ 7.1% ನಷ್ಟು ಬಡ್ಡಿ ನಿಗದಿಪಡಿಸಲಾಗಿದೆ.
ಹೂಡಿಕೆಯ ಅವಧಿ:
ಅಂಚೆ ಕಚೇರಿಯ ಪಿಪಿಎಫ್ ಹೂಡಿಕೆಯ ಅವಧಿ 15 ವರ್ಷಗಳು. ಈ ಹೂಡಿಕೆಯ ವೈಶಿಷ್ಟ್ಯತೆ ಅಂದರೆ ನೀವು ಕೇವಲ ಐದು ವರ್ಷಗಳಿಗೆ ನಿಮ್ಮ ಖಾತೆಯನ್ನು ಮುಚ್ಚಲು ಬಯಸಿದರೆ ಅದಕ್ಕೆ ಅವಕಾಶವಿದೆ. ಅದೇ ರೀತಿ 15 ವರ್ಷದ ನಂತರ ಮತ್ತೆ ಐದು ವರ್ಷ ಮುಂದುವರಿಸುವಿದಿದ್ದರೆ ಅದಕ್ಕೂ ಕೂಡ ಅವಕಾಶವಿದೆ. ಕನಿಷ್ಠ ರೂ. 1000ಗಳನ್ನು ಇಟ್ಟು ಖಾತೆ ಆರಂಭಿಸಬೇಕು.
ನೀವು 18 ಲಕ್ಷ ರೂಪಾಯಿಗಳನ್ನು ಪಡೆಯಲು ನಿಮ್ಮ 18ನೇ ವಯಸ್ಸಿನಲ್ಲಿಯೇ ಹೂಡಿಕೆ ಆರಂಭಿಸಬೇಕು. ಈ ರೀತಿ ಮಾಡಿದರೆ ನಿಮ್ಮ 35ನೇ ವರ್ಷಕ್ಕೆ 18 ಲಕ್ಷ ಮೊತ್ತವನ್ನು ಪಡೆಯುತ್ತೀರಿ. ಈ ಹಣವನ್ನು ಮತ್ತೆ ಐದು ವರ್ಷಗಳ ಕಾಲ ಮುಂದುವರಿಸಿ ಇನ್ನೂ ಹೆಚ್ಚಿನ ಲಾಭ ಪಡೆದುಕೊಳ್ಳಲು ಸಾಧ್ಯವಿದೆ.
advertisement