Karnataka Times
Trending Stories, Viral News, Gossips & Everything in Kannada

Aadhaar Card: NPS ಖಾತೆಯಲ್ಲಿ ಆಧಾರ್ ಪರಿಶೀಲನೆ ಕಡ್ಡಾಯ, ಏಪ್ರಿಲ್ 1 ರಿಂದ ಈ ನಿಯಮ ಜಾರಿ!

advertisement

ಇಂದು ಆಧಾರ್ ಕಾರ್ಡ್‌ (Aadhaar Card) ಅನ್ನೋದು ಪ್ರತಿಯೊಂದು ದಾಖಲೆಗೂ ಬಹಳ ಮುಖ್ಯ, ಯಾವುದೇ ಸೌಲಭ್ಯ ಪಡೆಯುದಾದ್ರೂ ಕೂಡ ಆಧಾರ್ ಕಾರ್ಡ್ ಮುಖ್ಯವಾಗಿ ಬೇಕಾಗುತ್ತದೆ.12 ಅಂಕಿಯ ಈ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಬೇರೆ ಬೇರೆ ರೀತಿಯ ಪ್ರಕ್ರಿಯೆಗೆ, ಸೌಲಭ್ಯ ಪಡೆಯಲು ಬಳಕೆ ಮಾಡಲಾಗುತ್ತದೆ.ಆಧಾರ್‌ ಕಾರ್ಡ್‌ ಒಂದಿದ್ದರೆ ಸಾಕು, ಫ್ರೂಫ್‌ ಆಗಿ ಎಲ್ಲಾ ಕಡೆ ಇದನ್ನು ಸಲ್ಲಿಸ ಬಹುದು. ಇದರಲ್ಲಿ ನಮ್ಮ ಹೆಸರು, ಮಾಹಿತಿ ವಿಳಾಸಗಳು ಅಡಕ ವಾಗಿರುವುದರಿಂದ ಇದರ ನಂ ಗೊತ್ತಿದ್ದರೆ ಸಾಕು ಎಲ್ಲ ಮಾಹಿತಿಗಳು ತಿಳಿಯುತ್ತದೆ.

ಲಿಂಕ್ ಕಡ್ಡಾಯ:

ಇದೀಗ Ration Card, PAN Card, Bank Account, Mobile Number, ಸಾಮಾಜಿಕ ಭದ್ರತಾ ಯೋಜನೆಗಳಾದ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ವೇತನ, ವಿಧವಾ ವೇತನ, ಕಿಸಾನ್ ಯೋಜನೆ ಎಲ್ಲ ಸೌಲಭ್ಯ ಗಳಿಗೆ ಆಧಾರ್ ಲಿಂಕ್ ಕಡ್ಡಾಯ ಮಾಡಿದ್ದು ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಗೂ ಕಡ್ಡಾಯ ಮಾಡಿದೆ.

National Pension Scheme:

 

 

advertisement

ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ಎಂದರೆ NPS Scheme, ಜನರು ತಮ್ಮ ನಿವೃತ್ತಿಯ ನಂತರದಲ್ಲಿ ಪಡೆಯುವಂತಹ ಮೊತ್ತವಾಗಿದೆ. ವೃದ್ದಾಪ್ಯದಲ್ಲಿ ಹಣದ ತೊಂದರೆ ಯಾಗದಂತೆ ತಮ್ಮ ಜೀವನವನ್ನು ನಡೆಸಲು ಆರ್ಥಿಕ ಸ್ಥಿರತೆ, ಸುರಕ್ಷತೆಯನ್ನು ಈ ಯೋಜನೆ ನೀಡಲಿದೆ.

ಎಪ್ರಿಲ್ 1 ರಿಂದ ಜಾರಿ:

ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಗಾಗಿ ಆಧಾರ್ (Aadhaar Card) ಆಧಾರಿತ ಪರಿಶೀಲನೆಯನ್ನು ಕಡ್ಡಾಯ ಮಾಡಿದ್ದು ಈಗ ಎರಡು ಬಾರಿ ಸರಿಯಾದ ಪರಿಶೀಲನೆಯ ನಂತರವೇ ಖಾತೆಯಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಏಪ್ರಿಲ್ 1 ರಿಂದ ಈ ನಿ‌ಯಮ ಜಾರಿಗೆ ಬರಲಿದೆ. NPS ಸದಸ್ಯರಿಗೆ ಖಾತೆಗೆ ಲಾಗಿನ್ ಮಾಡಲು ಬಳಕೆದಾರರ ID ಮತ್ತು ಪಾಸ್‌ವರ್ಡ್ ಗಳು ಬಹಳಷ್ಟು ಅಗತ್ಯವಾಗಿ ಬೇಕಾಗುತ್ತದೆ. ಇದನ್ನು ಹೆಚ್ಚು ಸುರಕ್ಷಿತಗೊಳಿಸಲು ಆಧಾರ್ ಆಧಾರಿತ ಪರಿಶೀಲನೆಗೆ ಲಿಂಕ್ ಮಾಡಲಾಗುತ್ತದೆ.ಹಾಗಾಗಿ ಈ ನಿಯಮವನ್ನು ಪಿಂಚಣಿ ದಾರರು ಪಾಲಿಸಬೇಕಿದೆ.

ಪಾಸ್ ವರ್ಡ್ ನೊಂದಿಗೆ ಪೂರ್ಣಗೊಳಿಸಿ:

ಇದೀಗ ಕೇಂದ್ರ ಸರ್ಕಾರದ ಸೆಂಟ್ರಲ್ ರೆಕಾರ್ಡ್ ಕೀಪಿಂಗ್ ಏಜೆನ್ಸಿಯು ಈ ನಿಯಮವನ್ನು ಅಕ್ಸೆಸ್‌ ಮಾಡಲು ಕಡ್ಡಾಯವಾಗಿ ಆಧಾರ್ ಅಥೆಂಟಿಕೇಷನ್‌ ಪೂರ್ಣಗೊಳಿಸಬೇಕಿದ್ದು ಹೇಳಿದೆ.ಅದೇ ರೀತಿ ಇನ್ಮುಂದೆ ಆಧಾರ್ ದೃಢೀಕರಣವನ್ನು ಪಾಸ್‌ವರ್ಡ್‌ನೊಂದಿಗೆ  ಪೂರ್ಣಗೊಳಿಸಬೇಕು. ಆಗ ಮಾತ್ರ ಲಾಗಿನ್ ಯಶಸ್ವಿಯಾಗಲಿದೆ.

advertisement

Leave A Reply

Your email address will not be published.