NPS Account: ನಿಷ್ಕ್ರೀಯವಾದ NPS ಖಾತೆಯನ್ನು ಮರಳಿ ಸಕ್ರಿಯಗೊಳಿಸುವುದು ಹೇಗೆ ? ಸುಲಭವಾಗಿ ಈಗಲೇ ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಿ!
ವೃದ್ಧಾಪ್ಯದಲ್ಲಿ ಹಣದ ಸಮಸ್ಯೆ ಬರಬಾರದು ಎಂಬ ಕಾರಣಕ್ಕಾಗಿ ಸರ್ಕಾರಗಳು ಹಲವಾರು ಬಗೆಯ ಯೋಜನೆಗಳನ್ನು ಜನರಿಗೆ ನೀಡುತ್ತಿರುತ್ತವೆ. ಇದರಲ್ಲಿ ಭಾರತದ ಪ್ರಖ್ಯಾತವಾದ ಹಾಗೂ ಹೆಚ್ಚಿನ ಜನರು ಆಯ್ಕೆ ಮಾಡುವ ಯೋಜನೆ ಪಿಂಚಣಿ (Pension) ವ್ಯವಸ್ಥೆ ಅಥವಾ ಎನ್ ಪಿ ಎಸ್ (NPS) ಆಗಿದೆ ಇದರಲ್ಲಿ ನಮ್ಮ ವೃದ್ಧಾಪ್ಯದಲ್ಲಿ ಹಣಕಾಸಿನ ಅಗತ್ಯಗಳು ಪೂರೈಕೆ ಆಗುವಂತೆ ನಮ್ಮ ಅಕೌಂಟ್ ಗೆ ಹಣ ಬರುತ್ತಿರುತ್ತದೆ.
ಎನ್ ಪಿ ಎಸ್ ಖಾತೆದಾರರು ಮಾರುಕಟ್ಟೆ ಆಧಾರಿತ ಆದಾಯವನ್ನು ಪಡೆಯುತ್ತಾರೆ. NPS ನಲ್ಲಿ ಎರಡು ರೀತಿಯ ಹೂಡಿಕೆಗಳನ್ನು ಮಾಡಲಾಗುತ್ತದೆ. ಅದರಲ್ಲಿ ಮೊದಲ ಶ್ರೇಣಿ ನಿವೃತ್ತಿ ಖಾತೆ ಮತ್ತು ಎರಡನೇ ಶ್ರೇಣಿ ಸ್ವಯಂಪ್ರೇರಿತ ಖಾತೆಯಾಗಿದೆ 60 ವರ್ಷಗಳು ತುಂಬಿದ ಬಳಿಕ ನೀವು ಎನ್ ಪಿ ಎಸ್ ನಲ್ಲಿ ಮಾಡಿದ ಹೂಡಿಕೆಯ ಒಟ್ಟು ಮೊತ್ತದ 60 ಶೇಕಡವನ್ನು ಒಂದೇ ಬಾರಿ ಹಾಗೂ ಉಳಿದ 40 ಶೇಕಡವನ್ನು ಪ್ರತಿವರ್ಷ ಸ್ವಲ್ಪ ಪ್ರಮಾಣದಲ್ಲಿ ತೆಗೆದುಕೊಳ್ಳಬಹುದು.
Why NPS Account Becomes Inactive:
ಆದರೆ ಹೀಗೆ ಇರುವ ಈ NPS ಸ್ಕೀಮ್ ನ ಅಕೌಂಟನ್ನು ನೀವು ನಿಗದಿತ ಸಂದರ್ಭದಲ್ಲಿ KYC ಅಪ್ಡೇಟ್ ಮಾಡದೇ ಇದ್ದಾಗ ಅಥವಾ ವಾರ್ಷಿಕ ಹೂಡಿಕೆ ಮಾಡದೇ ಇದ್ದಾಗ ಪ್ರೀಜ್ ಅಥವಾ ನಿಷ್ಕ್ರಿಯ ಮಾಡುವ ಸಾಧ್ಯತೆ ಇದೆ. ಹಾಗಾದರೆ ನಿಷ್ಕ್ರಿಯ ಆಗಿರುವ ನಿಮ್ಮ NPS Account ಯನ್ನು ಮರಳಿ ಸಕ್ರಿಯಗೊಳಿಸುವಂತೆ ಮಾಡುವುದು ಹೇಗೆ ಎಂಬುದನ್ನು ಈಗ ತಿಳಿದುಕೊಳ್ಳೋಣ.
ನೀವು ಎನ್ ಪಿ ಎಸ್ ನಲ್ಲಿ ಅಕೌಂಟ್ (NPS Account) ಓಪನ್ ಮಾಡಬೇಕಾದರೆ ಮೊದಲಿಗೆ ಶ್ರೇಣಿ ಒಂದರ ಖಾತೆಯನ್ನು ತೆರೆಯಬೇಕಾಗುತ್ತದೆ ಹಾಗೂ ಇದಾದ ನಂತರ ನಮಗೆ ಇಷ್ಟ ಇದ್ದಲ್ಲಿ ಶ್ರೇಣಿ ಎರಡರ ಖಾತೆಯನ್ನು ಸಹ ತೆರೆಯಬಹುದು. ಖಾತೆಯನ್ನು ತೆರೆಯಬೇಕಾದರೆ ಟೈರ್ 1 ನಲ್ಲಿ ರೂಪಾಯಿ 500 ಮತ್ತು ಟೈರ್ 2 ನಲ್ಲಿ ರೂಪಾಯಿ ಒಂದು ಸಾವಿರ ರೂಪಾಯಿಗಳ ವಾರ್ಷಿಕ ಹೂಡಿಕೆ ಮಾಡಬೇಕಾಗುತ್ತದೆ. ಇದಾದ ನಂತರ ಪ್ರತಿ ವರ್ಷ ಶ್ರೇಣಿ ಒಂದರಲ್ಲಿ ಕನಿಷ್ಠ 500 ರೂಪಾಯಿಗಳು ಹಾಗೂ ಶ್ರೇಣಿ ಎರಡರಲ್ಲಿ ವಾರ್ಷಿಕವಾಗಿ 250 ಗಳ ಕೊಡುಗೆ ನೀಡಬೇಕಾಗುತ್ತದೆ. ಇದರಲ್ಲಿ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ. ಇದನ್ನು ಸಮಯಕ್ಕೆ ಸರಿಯಾಗಿ ಡೆಪಾಸಿಟ್ ಮಾಡದೇ ಇದ್ದಾಗ ಖಾತೆ ನಿಷ್ಕ್ರಿಯ ಆಗುವ ಸಾಧ್ಯತೆ ಇದೆ.
ಖಾತೆಯನ್ನು ಮರಳಿ ಸಕ್ರಿಯಗೊಳಿಸುವುದು ಹೇಗೆ ?
ಖಾತೆಯನ್ನು ಮರಳಿಸಕ್ರಿಯಗೊಳಿಸಲು ನೀವು UOS-S10-A ಎ ಫಾರ್ಮನ್ನು ಭರ್ತಿ ಮಾಡಬೇಕು ಈ ಫಾರ್ಮನ್ನು ನೀವು ಅಂಚೆ ಕಛೇರಿಯಿಂದ ಪಡೆಯಬಹುದು ಅಥವಾ ಆನ್ಲೈನ್ ಮೂಲಕವೂ ಕೂಡ ಈ ಫಾರ್ಮನ್ನು ನೀವು ಡೌನ್ಲೋಡ್ ಮಾಡಬಹುದು. ಈ ಫಾರ್ಮ್ ನೊಂದಿಗೆ ಬಳಕೆದಾರರ ಪಾನ್ ಕಾರ್ಡ್ (PAN Card) ನಕಲು ಹಾಗೂ ವಾರ್ಷಿಕ ಕೊಡುಗೆಯ ಬಾಕಿ ಮೊತ್ತ ಮತ್ತು ನೂರು ರೂಪಾಯಿಗಳ ದಂಡವನ್ನು ಸೇರಿಸಿ ಒಂದೇ ಬಾರಿ ಕಟ್ಟಬೇಕಾಗುತ್ತದೆ. ಈ ನಿಮ್ಮ ಅರ್ಜಿಯನ್ನು ಕಚೇರಿ ಅಧಿಕಾರಿಗಳು ಪರಿಶೀಲಿಸಿ ನಿಮ್ಮ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸಿ ನಿಮ್ಮ ಖಾತೆ ಅನ್ನು ಸಕ್ರಿಯಗೊಳಿಸಲಾಗುತ್ತದೆ.