Karnataka Times
Trending Stories, Viral News, Gossips & Everything in Kannada

Chalo Delhi Protest: ತೆರಿಗೆ ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮಾಡಿದವರು ಯಾರು? ತೆರಿಗೆ ಸಮರದ ಅಸಲಿಯತ್ತೇನು?

advertisement

ಕಳೆದ ಮೂರ್ನಾಲ್ಕು ದಿನಗಳಿಂದ ಮಾಧ್ಯಮಗಳಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಕರ್ನಾಟಕದ ಲೋಕಸಭಾ ಸದಸ್ಯರೊಬ್ಬರು ಕೊಟ್ಟಿರುವ ವಿವಾದಾತ್ಮಕ ಹೇಳಿಕೆ. ನಿಜಕ್ಕೂ ಕರ್ನಾಟಕಕ್ಕೆ ಕೇಂದ್ರದಿಂದ ಅನ್ಯಾಯವಾಗುತ್ತಿದೆಯಾ? ಲೋಕಸಭಾ ಸದಸ್ಯರು ಕೊಟ್ಟ ಹೇಳಿಕೆ ಎಷ್ಟು ಸರಿ ಎಷ್ಟು ತಪ್ಪು? ನಮ್ಮ ಕರ್ನಾಟಕದ ಕೆಲವು ಮಾಧ್ಯಮಗಳಿಗೆ ನಿಜವಾಗಿಯೂ ನಮ್ಮ ನೆಲ ಜಲ ನಾಡು ನುಡಿ ಮತ್ತು ನಮ್ಮ ಹಕ್ಕುಗಳ ಬಗ್ಗೆ ನಿಜಕ್ಕೂ ಬದ್ಧತೆ ಇದೆಯಾ ಅಥವಾ ಕೇವಲ ರಾಜಕೀಯ ಪಕ್ಷಗಳ ಮುಖವಾಣಿಗಳ? ಬನ್ನಿ ನೋಡೋಣ.

ನಿಜಕ್ಕೂ ನಡೆಯುತ್ತಿರುವುದೇನು?

ಸ್ವಾತಂತ್ರ ನಂತರ ನಾವು ಉತ್ತರದವರ ಹಿಡಿತದಲ್ಲಿರುವ ಕೇಂದ್ರ ಸರ್ಕಾರಗಳಿಂದ ಹಲವಾರು ಬಾರಿ ತುಳಿತಕ್ಕೆ ಒಳಗಾಗುತ್ತಲೇ ಬಂದಿದ್ದೇವೆ ಅದರಲ್ಲೂ ನಮ್ಮ ಕರ್ನಾಟಕದ ಬದ್ಧತೆಯಿಲ್ಲದ ಕೇವಲ ಹೈ ಕಮಾಂಡ್ ಹೇಳುವಂತೆ ಕೇಳುವ ರಾಜಕಾರಣಿಗಳಿಂದ ನಾವು ನಮ್ಮ ಹಕ್ಕುಗಳನ್ನು ಪಡೆಯಲು ಸಾಹಸ ಪಡುತ್ತಲೇ ಬಂದಿದ್ದೇವೆ ಇತ್ತೀಚಿನ ದಿನಗಳಲ್ಲಿ ಕೆಲವು ಮಾಧ್ಯಮಗಳು ಕೂಡ ಬದ್ಧತೆಯಿಲ್ಲದೆ ರಾಜಕೀಯ ಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುವವರಾಗಿದ್ದಾರೆ ಎಂಬುದೇ ವಿಪರ್ಯಾಸದ ಸಂಗತಿಯಾಗಿದೆ.

ರಾಜ್ಯಗಳಿಂದ ಕೇಂದ್ರ ಸರ್ಕಾರವು ಸಂಗ್ರಹಿಸುವ ನೇರ ಮತ್ತು ಪರೋಕ್ಷ ತೆರಿಗೆಗಳಲ್ಲಿ ರಾಜ್ಯಗಳ ಪಾಲನ್ನು ಕೇಂದ್ರ ಹಣಕಾಸು ಆಯೋಗ ನಿಗದಿ ಮಾಡುತ್ತದೆ. ಹೀಗೆ 15 ನೇ ಹಣಕಾಸು ಆಯೋಗವು ನಿಗದಿ ಮಾಡಿದ ಪಾಲಿನಲ್ಲಿ ದೇಶದ ಬೇರೆಲ್ಲ ರಾಜ್ಯಗಳಿಗೆ ಹೆಚ್ಚು ಪ್ರಮಾಣದ ಲಾಭವಾಗಿದೆ. ಆದರೆ ನಮ್ಮ ಕರ್ನಾಟಕಕ್ಕೆ ಮಾತ್ರ ಭಾರಿ ಪ್ರಮಾಣದ ಅನ್ಯಾಯವಾಗಿದೆ.

advertisement

ತೆರಿಗೆ ಸಂಗ್ರಹದ ವಿಚಾರದಲ್ಲಿ ದೇಶದಲ್ಲೇ ಎರಡನೇ ಅತಿಹೆಚ್ಚು ತೆರಿಗೆ ಸಂಗ್ರಹ ಮಾಡಿಕೊಡುತ್ತಿರುವ ರಾಜ್ಯ ನಮ್ಮದು ಆದರೂ ನಮ್ಮ ಪಾಲನ್ನು ಅಂಗಲಾಚಿ ಬೇಡಿ ಪಡೆಯುವ ಸ್ಥಿತಿಗೆ ಬಂದಿರುವುದು ವಿಪರ್ಯಾಸವೇ ಸರಿ. ನಾವು ಕರ್ನಾಟಕದವರು ಕೂಡ ಮನೆ ತುಂಬಾ ಮಕ್ಕಳನ್ನು ಮಾಡಿಕೊಂಡು ಕೇವಲ ಜನಸಂಖ್ಯೆ ಅಭಿವೃದ್ಧಿ ಮಾಡಿಕೊಂಡು ಕಾಲಹರಣ ಮಾಡಿರುತ್ತಿದ್ದರೆ ಬಹುಶ ನಮಗೂ ಕೂಡ ಅತಿಹೆಚ್ಚು ಪಾಲು ಬರುತ್ತಿತ್ತೇನೋ? ಎಂದೆನಿಸುತ್ತದೆ.

ಮೋದಿ ತವರು ರಾಜ್ಯಕ್ಕೆ ಶೇಕಡಾ 51 ಏರಿಕೆ:

ಈ ವಿಷಯದಲ್ಲಿ ಗುಜರಾತ್ ರಾಜಕಾರಣಿಗಳನ್ನು ಹೊಗಳಲೇಬೇಕು, ಇದೆ ಅವಧಿಯಲ್ಲಿ ಅತಿಹೆಚ್ಚು ತೆರಿಗೆ ಪಾಲು ಏರಿಕೆಯಾಗಿದ್ದು ಗುಜರಾತಿಗೆ 2018-2019ರಲ್ಲಿ ರೂ 23,489 ಕೋಟಿಯಷ್ಟು ಪಾಲು ಪಡೆದಿದ್ದ ಗುಜರಾತ್ 2022-2024 ರಲ್ಲಿ ರೂ 35,525 ಕೋಟಿ ಪಾಲು ಪಡೆಯಲಿದೆ. ಗುಜರಾತಿನ ತೆರಿಗೆ ಪಾಲು ಸುಮಾರು ರೂ 12,036 ಕೋಟಿಯಷ್ಟು ಅಂದರೆ ಶೇಕಡಾ 51 ರಷ್ಟು ಏರಿಕೆಯಾಗಿದೆ, ದೇಶದ ಬೇರೆ ಯಾವುದೇ ರಾಜ್ಯದ ತೆರಿಗೆ ಪಾಲು ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂಬುದು ಗಮನಿಸಬೇಕಾದ ವಿಷಯವಾಗಿದೆ.

ಇನ್ನು ಮುಂದೆಯಾದರು ಕರ್ನಾಟಕದ ರಾಜಕಾರಣಿಗಳು ರಾಜಕೀಯ ಕಚ್ಚಾಟ ಬಿಟ್ಟು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಮ್ಮ ರಾಜ್ಯಕ್ಕೆ ಬರಬೇಕಾದ ಪಾಲನ್ನು ಘಟ್ಟಿ ಧ್ವನಿಯಿಂದ ಕೇಳಿ ಪಡೆಯಬೇಕು ಇದು ಪ್ರತಿಯೊಬ್ಬ ಕರ್ನಾಟಕದ ನಾಗರೀಕನ ಬಯಕೆಯಾಗಿದೆ. ಇದೆ ರೀತಿ ನಮ್ಮ ಮಾಧ್ಯಮಗಳು ಕೂಡ ನಾಡು ನುಡಿ ಎಂಬ ಬದ್ಧತೆಯೊಂದಿಗೆ ನಮ್ಮ ರಾಜಕಾರಣಿಗಳ ಪರವಾಗಿ ನಿಂತು ಕರ್ನಾಟಕದ ವಿಷಯಕ್ಕೆ ಮಾತ್ರ ನಮ್ಮ ಪಾಲಿಗೆ ಒತ್ತಾಯಿಸಬೇಕು ಮತ್ತು ಜನರಲ್ಲಿ ಜಾಗೃತಿ ಮೂಡಿಸಬೇಕು ಇಲ್ಲದಿದ್ದರೆ ಇನ್ನು ಕೆಲವೇ ವರ್ಷಗಳಲ್ಲಿ ನಾವು ಉತ್ತರ ಭಾರತದ ಕೆಲವು ರಾಜ್ಯಗಳ ರೀತಿ ಹಿಂದುಳಿಯಬೇಕಾಗಬಹುದು.

advertisement

Leave A Reply

Your email address will not be published.