Karnataka Times
Trending Stories, Viral News, Gossips & Everything in Kannada

Airtel: ಒಂದೇ ರಿಚಾರ್ಜ್ ನಲ್ಲಿ ಮೊಬೈಲ್, ಟಿವಿ ಇತರ ಸೇವೆ, ಏರ್ಟೆಲ್ ನ ಈ ಮಹಾ ಆಫರ್ ಕಂಡು ಗ್ರಾಹಕರು ಫುಲ್ ಖುಷ್!

advertisement

ಏರ್ಟೆಲ್ ಕಂಪೆನಿ ಹಲವು ವರ್ಷದಿಂದ ಸಾವಿರಾರು ಗ್ರಾಹಕರ ನೆಚ್ವಿನ ಮೊಬೈಲ್ ನೆಟ್ಚರ್ಕಿಂಗ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಳೆ ಕಾಲದಲ್ಲಿ ಯಾರ ಮೊಬೈಲ್ ಕೇಳಿದರೂ ಸಿಮ್ ಹೆಸರು Airtel ಎಂದೆ ಇರುತ್ತಿತ್ತು‌‌‌. ಭಾರತದಲ್ಲಿ ಜೀಯೋ ಕಂಪೆನಿ ತನ್ನ ಪ್ರಾಬಲ್ಯ ಪಡೆದು ಬಲಿಷ್ಠ ಆಗೊ ವರೆಗೂ ಕೂಡ ಏರ್ಟೆಲ್ ಭದ್ರ ನೆಲೆಯಾಗಿತ್ತು. ಬಳಿಕ ಜಿಯೋ ಪ್ರಬಲ ಸ್ಪರ್ಧೆಗೆ ಸ್ವಲ್ಪ ಮಟ್ಟಿಗೆ ತಲ್ಹಣ ಆದರೂ ಈಗ ಮತ್ತೆ ಸುಧಾರಿತ ಸೇವೆ ನೀಡುವ ನೆಲೆಯಲ್ಲಿ ಮುನ್ನುಗುತ್ತಲೇ ಇದೆ. ಈ ನಿಟ್ಟಿನಲ್ಲಿ ಹೊಸತೊಂದು ಯೋಜನೆ ಜಾರಿಗೆ ತರಲು ಏರ್ಟೆಲ್ ಕಂಪೆನಿ ಮುಂದಾಗಿದ್ದು ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ನೂತನ ಯೋಜನೆ?

 

 

Airtel ಕಂಪೆನಿ ಎನ್ನುವುದು ಈ ಹಿಂದೆ ಕರೆನ್ಸಿ ಕಾರ್ಡ್ ಮೂಲಕ ಚಿರ ಪರಿಚಿತ ವಾಗಿತ್ತು ಆದರೆ ಅದನ್ನು ಸಂಪೂರ್ಣವಾಗಿ ತೆಗೆದು ಹಾಕಿದ್ದ ಬಳಿಕ ತಿಂಗಳ ಯೋಜನೆ ವಾರ್ಷಿಕ ಯೋಜನೆಯ ಮಹಾ ಆಫರ್ ಅನ್ನು ನೀಡಲಾಗಿತ್ತು. Airtel ಸಿಮ್ ನಂತೆಯೆ ಡಿಶ್ ಟಿವಿ ಸಹ ಪರಿಚಯಿಸಲಾಗಿದ್ದು ಅದಕ್ಕೂ ಅನೇಕ ಗ್ರಾಹಕರಿದ್ದಾರೆ. ಈಗ ನೀವು ಏರ್ಟೆಲ್ ಚಂದಾದಾರರಾಗಿದ್ದರೆ ಕಂಪೆನಿಯ ಹೊಸ ಆಫರ್ ನಿಮಗೆ ಸಖತ್ ಉಳಿತಾಯ ಆಗಲಿದೆ.

ಯಾವುದು ಈ ಪ್ಲ್ಯಾನ್?

advertisement

Airtel ಕಂಪೆನಿಯು ಇನ್ನು ಮುಂದೆ ಒಂದು ರಿಚಾರ್ಜ್ ಆಪ್ಶನ್ ನೀಡಲಿದೆ. ಅಂದರೆ ಟಿವಿ ಚಾನೆಲ್ ಬೇರೆ ಮೊಬೈಲ್ ಬೇರೆ ರೀಚಾರ್ಜ್ ಮಾಡಿದ್ದವರಿಗೆ ಇನ್ನು ಮುಂದೆ ಎರಡಕ್ಕೂ ಒಂದೇ ಪ್ಲ್ಯಾನ್ ಅಡಿಯಲ್ಲಿ ರೀಚಾರ್ಜ್ ಮಾಡಬಹುದು. ಗ್ರಾಹಕರಿಗೆ ಒಂದೇ ರೀಚಾರ್ಜ್ ಮೂಲಕ ವಿವಿಧ ಸೇವೆ ಕ್ರೋಢೀಕರಿಸಿ ಸರಳ ಮತ್ತು ಕಡಿಮೆ ಹಣ ಬಳಸಿ ಗ್ರಾಹಕ ಸ್ನೇಹಿಯಾಗಿ ಈ ಯೋಜನೆ ಬಹಳ ಅನುಕೂಲ ನೀಡಲಿದೆ.

ಅನೇಕ ಸೌಲಭ್ಯ:

 

 

ಈ ಒಂದು ಯೋಜನೆಗೆ Airtel Black Plan ಎಂದು ಹೆಸರಿಡಲಾಗಿದ್ದು ಮೊಬೈಲ್ ಬಳಕೆ, ಉಚಿತ ಲ್ಯಾಂಡ್ ಲೈನ್, OTT ಬಳಕೆ, ಹೈ ಸ್ಪೀಡ್ ಬ್ರಾಡ್‌ಬ್ಯಾಂಡ್ ಇಂಟರ್ನೆಟ್ ಇತರ ಸೌಲಭ್ಯ ನಿಮಗೆ ದೊರೆಯಲಿದೆ. ಎಲ್ಲವೂ ಒಂದೇ ಸೇವೆ ಅಡಿಯಲ್ಲಿ ಬರುವ ಕಾರಣ ನೀವು ಪ್ರತ್ಯೇಕವಾಗಿ ಪಾವತಿ ಮಾಡುವ ಅಗತ್ಯ ಇರಲಾರದು. ಈಗಂತೂ ಮನೆಯಲ್ಲಿಯೇ ಆನ್ಲೈನ್ ಕ್ಲಾಸ್, ಡೆಸರ್ ಟೇಶನ್ ಹೀಗೆ ಅನೇಕ ಕಾರಣಕ್ಕೆ ಇಂಟರ್ ನೆಟ್ ಅಗತ್ಯ ಅದೇ ರೀತಿ ಮನೆ ಜನತೆಗೆ ಟಿವಿ ಮನೋರಂಜನೆಯೂ ಬೇಕು ಈ ನೆಲೆಯಲ್ಲಿ ಏರ್ಟೆಲ್ ಸೇವೆ ಗ್ರಾಹಕರಿಗೆ ಸಂತೃಪ್ತ ಅನುಭವ ನೀಡಲಿದೆ.

ದರ ಎಷ್ಟು?

Airtel Black Plan ನಲ್ಲಿ 699 ರೂಪಾಯಿ ರಿಚಾರ್ಜ್ ಮೇಲೆ ಇಂಟರ್ ನೆಟ್ ಯತೇಚ್ಛವಾಗಿ ಸಿಗಲಿದೆ‌. ಹಾಗಾಗಿ ಮನೆಯಲ್ಲಿ ವರ್ಕ್ ಫ್ರಂ ಹೋಂ ಮಾಡೋರಿಗೆಈ ಪ್ಲ್ಯಾನ್ ತುಂಬಾ ಖುಷಿ ನೀಡಲಿದೆ. 40mbps ಇಂಟರ್ನೆಟ್ ವೇಗ ಹಾಗೂ ಅನಿಯಮಿತ ಡೇಟಾ ಬ್ರಾಡ್ ಬ್ಯಾಂಡ್ ಅನ್ನು ಹೊಂದಿದೆ. ಅನಿಯಮಿತ ಕರೆ ಹಾಗೂ ಲ್ಯಾಂಡ್ ಲೈನ್ ಫೋನಿಂಗ್ ಸಹಕಾರಿ ಆಗಲಿದೆ. 260 ರೂಪಾಯಿಗಳ ಟಿವಿ ಚಾನೆಲ್ ಗಳ ಹೆಚ್ಚುವರಿ ಪ್ರಯೋಜನವನ್ನು ಇದೇ ಡೇಟಾ ಪ್ಯಾಕ್ ಮೇಲೆ ಪಡೆಯಬಹುದು. 3,300 ರೂಪಾಯಿ ಪಾವತಿ ಮಾಡಿದರೆ ಏರ್ಟೆಲ್ ಉಚಿತ ಇನ್ ಸ್ಟಲೇಶನ್ ನಿಮಗೆ ಸಿಗಲಿದೆ. ಈ ಮೂಲಕ ಏರ್ಟೇಲ್ ಕಂಪೆನಿ ಇತರ ನೆಟ್ ವರ್ಕ್ ಕಂಪೆನಿಗೆ ಪ್ರಬಲ ಪೈಪೋಟಿ ನೀಡುತ್ತಲಿದೆ ಎನ್ನಬಹುದು.

advertisement

Leave A Reply

Your email address will not be published.