Karnataka Times
Trending Stories, Viral News, Gossips & Everything in Kannada

Darshan-Vijayalakshmi: ಪತ್ನಿ ವಿಜಯಲಕ್ಷ್ಮಿ ಜೊತೆ ದರ್ಶನ್ ಸಖತ್ ಡ್ಯಾನ್ಸ್, ಫ್ಯಾನ್ಸ್ ಗಳ ವಿವಿಧ ಬಗೆಯ ಕಾಮೆಂಟ್!

advertisement

ನಟ  ದರ್ಶನ್  ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ, ಡಿ ಬಾಸ್ ಎಂದೇ ಅಭಿಮಾನಿಗಳ ಪಾಲಿಗೆ ಪ್ರಾಖ್ಯಾತ ರಾಗಿದ್ದಾರೆ. ಬಾಕ್ಸ್‌ಆಫೀಸ್ ಸುಲ್ತಾನ, ದಾಸ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಿಸಿಕೊಳ್ಳುವ ದಚ್ಚು ಮೆಜೆಸ್ಟಿಕ್ ಚಿತ್ರದ ಮೂಲಕ  ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶ ಮಾಡಿದ್ರು‌. ಮೊನ್ನೆಯಷ್ಟೆ ಇವರ ಕಾಟೇರ ಸಿನಿಮಾ ರಿಲೀಸ್ ಆಗಿ ಸಕ್ಸಸ್ ಕೂಡ ಪಡೆದಿದೆ. ಆದರೆ ಇತ್ತೀಚಿನ ದಿನದಲ್ಲಿ ಡಿ ಬಾಸ್ ವೈಯಕ್ತಿಕ ವಿಚಾರದಲ್ಲಿ ಬಹಳಷ್ಟು  ಸುದ್ದಿ ಹರಿದಾಡಿತ್ತು.

ಪತ್ನಿ ಜೊತೆ ಡ್ಯಾನ್ಸ್

ದರ್ಶನ್  ಬರ್ತ್‌ ಡೇ ಪಾರ್ಟಿಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಮೊನ್ನೆಯಷ್ಡೆ ದರ್ಶನ್ ಅವರ ಬರ್ತೆಡೆ ನೇರವೆರಿದ್ದು , ಇದೀಗ  ಒಂದು ಪಾರ್ಟಿಯಲ್ಲಿ ಅಂತೂ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿಸಖತ್ ಡ್ಯಾನ್ಸ್ ಮಾಡಿದ್ದಾರೆ.  ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ. ದರ್ಶನ್ ಅವರು  ತಮ್ಮ ಬರ್ತ್ಡೆ ಗೆ  ಪತ್ನಿ ವಿಜಯಲಕ್ಷ್ಮಿ ಮತ್ತು ವಿಜಯಲಕ್ಷ್ಮಿ ಅವರ ಸ್ನೇಹಿತರು ಆಗಮಿಸಿದ್ದರು. ಈ ಕಾರ್ಯಕ್ರಮದಲ್ಲಿ  ಪತ್ನಿ ವಿಜಯಲಕ್ಷ್ಮಿ ಜೊತೆಗೆ ಕನ್ನಡದ ಪಡ್ಡೆ ಹುಲಿ ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಇನ್ನು ವಿಜಯಲಕ್ಷ್ಮಿ ಕೂಡ ರೋಮ್ಯಾಂಟಿಕ್ ಆಗಿಯೇ ಪತಿ ದರ್ಶನ್ ಜೊತೆಗೆ  ಸ್ಟೆಪ್ ಹಾಕಿದ್ದಾರೆ.

 

advertisement

ವೈಯಕ್ತಿಕ ವಿಚಾರದಲ್ಲಿ ಗಾಸಿಪ್

ಇತ್ತೀಚೆಗೆ ನಟಿ ಪವಿತ್ರಾ ಗೌಡ ಮತ್ತು ದರ್ಶನ್ ಪ್ರೆಂಡ್ ಶೀಪ್ ಬಗ್ಗೆ ಬಹಳಷ್ಟು ಗಾಸಿಪ್  ಹರಿದಾಡಿತ್ತು. ಪವಿತ್ರ ಗೌಡ ಅವರು  ನಾನು ದರ್ಶನ್ ಜೊತೆಗೆ 10 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದೀನಿ ಎಂದು ಹೇಳಿದ್ದು ಈ ಬಗ್ಗೆ ವಿಜಯಲಕ್ಷ್ಮಿ ಕೂಡ ಕಾನೂನು ಕ್ರಮ ಕೈಗೊಳ್ಳುತ್ತೇನೆ  ಎಂದಿದ್ದರು.ಆದರೆ ದರ್ಶನ್ ಇದಕ್ಕೆ ಯಾವುದೇ ಉತ್ತರ ನೀಡಿರಲಿಲ್ಲ. ಈಗಾಗಲೇ ದರ್ಶನ್ ನಿರ್ಮಾಪಕ ಉಮಾಪತಿಗೆ ತಡಗು‌ ಎಂದು ಕರೆದಿದ್ದು ‌ ಆಕ್ರೋಶಕ್ಕೆ ಕೂಡ  ಕಾರಣವಾಗಿತ್ತು.   ಉಮಾಪತಿ ಕೂಡ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೊಟ್ಟ ಹೇಳಿಕೆಗಳಿಗೆ ತಿರುಗೇಟು  ನೀಡಿದ್ದರು. ದರ್ಶನ್​ ವಿರುದ್ಧ ಮಹಿಳಾಪರ ಸಂಘಟನೆ ಹಾಗೂ ಇತರೆ ಕೆಲವು ಸಂಘಟನೆಗಳು ದೂರುಗಳನ್ನು  ಕೂಡ ದಾಖಲು ಮಾಡಿದೆ.

ಅಭಿಮಾನಿಗಳ ಕಾಮೆಂಟ್

ದರ್ಶನ್  ಅವರು ಪತ್ನಿ ವಿಜಯಲಕ್ಷ್ಮಿ (Darshan-Vijayalakshmi) ಜೊತೆ ಡ್ಯಾನ್ಸ್ ಮಾಡಿದ್ದನ್ನು ಕಂಡು ಅಭಿಮಾನಿಗಳು ಬಾಸ್ ಬಗ್ಗೆ ಪಾಸಿಟಿವ್ ಕಾಮೆಂಟ್ ಹಾಕಿದ್ದಾರೆ. ಬಾಸ್ ಮತ್ತು ಅತ್ತಿಗೆ ಡ್ಯಾನ್ಸ್ ಸೂಪರ್, ಬಾಸ್ ಏನೆ ಆದ್ರೂ ತಲೆ ಕೆಡಿಸಿಕೊಳ್ಳಲ್ಲ  ಎಂದು ಅಭಿಮಾನಿಗಳು  ಈ ಡ್ಯಾನ್ಸ್ ಗೆ ಕಮೆಂಟ್ ಹಾಕಿದ್ದಾರೆ.ಒಟ್ಟಿನಲ್ಲಿ ಸೋಷಿಯಲ್  ಮೀಡಿಯಾದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಪೋಟೋ ಭಾರೀ ವೈರಲ್ ಆಗುತ್ತಿದೆ.

advertisement

Leave A Reply

Your email address will not be published.