Karnataka Times
Trending Stories, Viral News, Gossips & Everything in Kannada

Tukali Santhosh: ಉಲ್ಟಾ ಹೊಡೆದ ತುಕಾಲಿ ಸಂತೋಷ್! ಹೊಸ ಹೇಳಿಕೆ

advertisement

ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತೋಷ್ (Tukali Santhosh) ಅವರು ಸದಾ ಕಾಮಿಡಿ ಮಾಡಿಕೊಂಡೆ ಅಪಾರ ಮಟ್ಟದ ಅಭಿಮಾನಿ ಬಳಗವನ್ನು ಪಡೆದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕಾಮಿಡಿ ಹಾಗೂ ಕಾಂಟ್ರವರ್ಸಿ ಮಾಡಿಕೊಂಡು ಕೂಡ ಪ್ರಖ್ಯಾತಿ ಪಡೆದಿದ್ದರು. ಇದೀಗ ಬಿಗ್ ಬಾಸ್ (Bigg Boss) ಬಳಿಕ ಕೂಡ ಅನೇಕ ವಿಚಾರದಿಂದ ತುಕಾಲಿ ಸಂತೋಷ್ (Tukali Santhosh) ಅವರು ಸುದ್ದಿಯಲ್ಲಿ ಇರುತ್ತಿದ್ದಾರೆ. ಅಲ್ಲಲ್ಲಿ ಕಾರ್ಯಕ್ರಮಕ್ಕೆ ಪಾಲ್ಗೊಂಡ ಅವರು ಬಳಿಕ ಕಾರ್ ಒಂದನ್ನು ಖರೀದಿ ಮಾಡಿ ಕೂಡ ಇದೀಗ ಪುನಃ ಕಾಂನ್ಟ್ರವರ್ಸಿ ಮಾಡಿಕೊಂಡಿದ್ದಾರೆ.

ಗಿಚ್ಚಿಗಿಲಿಗಿಲಿಯಲ್ಲಿ ಮಿಂಚಿಂಗ್:

ತುಕಾಲಿ ಸಂತೋಷ್ (Tukali Santhosh) ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಅವರೊಬ್ಬರು ಸಾಧಾರಣ ವ್ಯಕ್ತಿ, ತೀರ ಬಡತನದ ಕುಟುಂಬದಿಂದ ಬಂದವರು , ರೈತರ ಕುಟುಂಬದವರು ಎಂದು ನಂಬಲಾಗಿತ್ತು. ಹಾಗಾಗಿಯೇ ಕೆಲವೊಂದು ಸಿಂಪತಿ ಓಟು ಕೂಡ ಅವರಿಗೆ ಸಿಕ್ಕಿದೆ. ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಅವರ ವರ್ಚಸ್ಸು ಚೇಂಜ್ ಆಗಿದ್ದು ಮಾತ್ರವಲ್ಲದೇ ಪತ್ನಿ ಮಾನಸಾ (Manasa) ಜೊತೆ ಸೇರಿ ಗಿಚ್ಚಿ ಗಿಲಿ ಗಿಲಿ ಶೋ ನಲ್ಲಿಯೂ ಫೇಮಸ್ ಆಗುತ್ತಿದ್ದಾರೆ. ಈ ನಡುವೆ ಹೊಸ ಕಾರು ಖರೀದಿ ಮಾಡಿದ್ದು ದೊಡ್ಡ ಮಟ್ಟದ ಟ್ರೋಲ್ ಗೆ ಸಿಲುಕುವಂತಾಗಿದೆ.

ಯಾವುದು ಆ ಟ್ರೋಲ್:

advertisement

ತುಕಾಲಿ ಅವರು ಬಿಗ್ ಬಾಸ್ ಶೋ (Bigg Boss Show) ನಲ್ಲಿ ತನ್ನ ಬಳಿ ಚಪ್ಪಲಿ ಕೊಂಡು ಕೊಳ್ಳಲು ಆಗಲಿಲ್ಲ. ಮನೆಯಲ್ಲಿ ಕೃಷಿ ಅಷ್ಟೇ ಇತ್ತು ಎಂದು ಹೇಳಿ ಕೊಂಡಿದ್ದರೂ ಕಾರು ಖರೀದಿ ಮಾಡಲು ಹಣ ಎಲ್ಲಿಂದ ಬಂತು ಎಂಬ ಪ್ರಶ್ನೆ ಜನರಿಗೆ ಎದುರಾಗಿದೆ. ಅದಕ್ಕೆ ತುಕಾಲಿ ಸಂತೋಷ್ (Tukali Santhosh) ಕೂಡ ಉತ್ತರಿಸಿ ಮಾತನಾಡಿದ್ದಾರೆ. ತುಂಬಾ ದಿನದಿಂದ ಕಾರು ಖರೀದಿ ಮಾಡಬೇಕು ಅಂದುಕೊಂಡಿದ್ದೆ ಆದರೆ ಹಣ ಸಮಸ್ಯೆ ಆಗಿತ್ತು. ಹಾಗಾಗಿ ಬಿಗ್ ಬಾಸ್ ಮನೆಯಿಂದ ಬಂದ ಹಣದಲ್ಲಿ ಕಾರಿನ ಡೌನ್ ಪೇಮೆಂಟ್ ಮಾಡಿದ್ದೇನೆ ಉಳಿದಂತೆ ಎಲ್ಲವನ್ನು EMI ಕಟ್ಟುತ್ತೇನೆ. ನಮ್ಮ ಊರಿನ ಕಡೆ ಹೋಗಲು ದೊಡ್ಡ ಕಾರು ಅಗತ್ಯವಾಗಿದ್ದು ಖರೀದಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

ಸುಳ್ಳು ಹೇಳಿದ್ರಾ?

ತುಕಾಲಿ ಸಂತೋಷ್ ಅವರು ಇತ್ತೀಚಿಗೆ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಕಾರು ಖರೀದಿ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ವಿಚಾರ ಪ್ರಸ್ತಾವನೆ ಆಗುತ್ತಿದ್ದು ನೀವು ಬಡವರು ಅಂತ ಸುಳ್ಳು ಹೇಳಿದ್ದು ಅಂತಾರೆ ಈ ಬಗ್ಗೆ ಏನು ಹೇಳ್ತೀರಿ ಎಂದು ಕೇಳಿದ್ದಕ್ಕೆ ಉತ್ತರಿಸಿದ್ದ ತುಕಾಲಿ ಸಂತೋಷ್ ಅವರು ಪ್ರತಿ ಸಲ XUV ಕಾರು ನೋಡಿದಾಗ ಅದೊಂದು ಖರೀದಿ ಮಾಡಬೇಕು ಅಂದುಕೊಳ್ಳುತ್ತಿದ್ದೆ. ಒಂದು ಸಣ್ಣ ಕಾರು ಖರೀದಿ ಮಾಡುವ ಶಕ್ತಿ ಆದ್ರೂ ಕೊಡಪ್ಪ ಎಂದು ದೇವರಲ್ಲಿ ಕೇಳುತ್ತಿದ್ದೆ ಆದರೆ ದೇವರು ದೊಡ್ಡ ಕಾರನ್ನೇ ಖರೀದಿ ಮಾಡುವ ಧೈರ್ಯ ನೀಡಿದ್ದಾರೆ. ಕಾರಿಗೆ EMI ಪಾವತಿ ಮಾಡ್ತೆನೆ‌ ಎಂದರು.

 

 

ಬಳಿಕ ಮಾತನಾಡಿ ನಾವು ಮಾಡುವ ಕೆಲಸದಿಂದ ನಾವೇನು ಎಂದು ತಿಳಿಯಬೇಕು ನೆಗೆಟಿವ್ ಕಮೆಂಟ್ (Negative Comment) ಮಾಡೋರಿಗೆ ನಾನೆಂದು ಉತ್ತರಿಸುವ ಅಗತ್ಯ ಇಲ್ಲ. ಬಡವ, ಚಪ್ಪಲಿ ಕೊಳ್ಳೋಕು ಹಣ ಇಲ್ಲ ಎಂದು ಹೇಳಿ ಕಾರನ್ನೇ ಖರೀದಿ ಮಾಡಿದ್ದಾನೆ ಎಂದು ನೆಗೆಟಿವ್ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಒಂದು ವಿಚಾರ ನೆನಪಿಡಿ ನಾನೆಂದು ಬಡವ ಎಂದು ಹೇಳಿಲ್ಲ. ಶ್ರಮ ಜೀವಿ ಬದುಕುಸಾಗಿಸುವುದು ಸರಿಯಾಗಿ ಅರಿತವನು ನಾನು ಎಂದು ಟ್ರೋಲರ್ಸ್ ಗೆ ಸರಿಯಾಗಿ ಚಾರ್ಜ್‌ ತೆಗೆದುಕೊಂಡಿದ್ದಾರೆ.

advertisement

Leave A Reply

Your email address will not be published.