Karnataka Times
Trending Stories, Viral News, Gossips & Everything in Kannada

Congress Guarantees: ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ನಿಂದ ಹೊಸ ಪಂಚ ಗ್ಯಾರಂಟಿ!

advertisement

ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಸರಕಾರ ಗ್ಯಾರಂಟಿ ಯೋಜನೆಗಳ ಭರವಸೆ ನೀಡುವ ಮೂಲಕ ಯುವಕರನ್ನು, ಮಹೀಳೆಯರನ್ನು, ಬಡ ತನ ವರ್ಗದ ಜನರನ್ನು ವಿವಿಧ ಯೋಜನೆಗಳ ಪ್ರಣಾಳಿಕೆ ನೀಡುವ ಮೂಲಕ ಹೆಚ್ಚಿನ ಮತ ಗಳಿಸಿತ್ತು. ಚುನಾವಣೆಯಲ್ಲಿ ಗೆದ್ದ ನಂತರ ಗ್ಯಾರಂಟಿ ‌ಯೋಜನೆಗಳನ್ನು ರೂಪಿಸುವ ಮೂಲಕ ಮತದಾರರಿಗೆ ಖುಷಿ ನೀಡಿದೆ. ಗ್ಯಾರಂಟಿ ಯೋಜನೆಗಳ (Congress Guarantee Schemes) ಸೌಲಭ್ಯ ವನ್ನು ನೊಂದಣಿ ಮಾಡಿದ ಎಲ್ಲ ಜನತೆ ಕೂಡ ಪಡೆಯುತ್ತಿದೆ.

ಚುನಾವಣ ತಂತ್ರ:

ಲೋಕಸಭಾ ಚುನಾವಣೆ (Lok Sabha Elections) ಗೂ ಮುನ್ನ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಪಕ್ಷಗಳು ನನಾ ರೀತಿಯ ತಂತ್ರಗಳನ್ನು ಹೂಡಿ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿದೆ. ಇದೀಗ ಮತ್ತೆ ಹೊಸ ಗ್ಯಾರಂಟಿ (Congress Guarantees) ಯೋಜನೆಗಳನ್ನು ಜನರಿಗಾಗಿ ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ.

ಈ ಗ್ಯಾರಂಟಿ ಜಾರಿ:

 

 

ಲೋಕ ಸಭೆ ಚುನಾವಣೆ (Lok Sabha Elections) ಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ‌ 30 ಲಕ್ಷ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಡಿಪ್ಲೊಮಾ ಪದವೀಧರರಿಗೆ ಶಿಷ್ಯವೇತನ ಗಿಗ್‌ ಕಾರ್ಮಿಕರ ಭದ್ರತೆಗೆ ಕಾನೂನು ಸೇರಿದಂತೆ ವಿವಿಧ ಗ್ಯಾರಂಟಿಗಳನ್ನು ನೀಡುವುದಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ತಿಳಿಸಿದ್ದಾರೆ

advertisement

ನಿರುದ್ಯೋಗ ನಿವಾರಣೆ:

ಇಂದು ಶಿಕ್ಷಣ ಪಡೆದರೂ ಉದ್ಯೋಗ ಗಿಟ್ಟಿಸಿಕೊಳ್ಳಲು ಬಹಳ ಕಷ್ಟವಾಗಿದ್ದು ನಿರದ್ಯೋಗ ಯುವಕ ಯುವತಿ ಯರು ಹೆಚ್ಚಾಗಿದ್ದಾರೆ. ಹೀಗಾಗಿ ಕಾಂಗ್ರೇಸ್ ಸರಕಾರ 30 ಲಕ್ಷ ಉದ್ಯಾಗಾವಕಾಶಗಳನ್ನು ಒದಗಿಸುವ ಭರವಸೆಯನ್ನು ಕೂಡ ನೀಡಿದೆ. ಖಾಲಿ ಹುದ್ದೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಭರ್ತಿ ಮಾಡಿ ಉದ್ಯೋಗ ನೀಡುವ ಭರವಸೆ ಯನ್ನು ನೀಡುವುದಾಗಿ ರಾಹುಲ್ ಗಾಂಧಿ ತಿಳಿಸಿದ್ರು.

ಪ್ರಶ್ನೆ ಪತ್ರಿಕೆ ಸೋರಿಕೆಗೆ ಕ್ರಮ:

ಇನ್ನೂ ಪ್ರಶ್ನೆಪತ್ರಿಕೆಗಳ ಸೋರಿಕೆ ವಿರುದ್ಧ ಕಠಿಣ ಕ್ರಮವನ್ನು ಜಾರಿಗೆ ತರುವುದಾಗಿ ಕಾಂಗ್ರೆಸ್‌ ಸರಕಾರ ಘೋಷಣೆ ಮಾಡಿದೆ. ಅದೇ ರೀತಿ ಪರೀಕ್ಷಾ ಜವಾಬ್ದಾರಿ ಗಳನ್ನು ಹೊರಗುತ್ತಿಗೆಗೆ ನೀಡದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎನ್ನಲಾಗಿದೆ.ವಿದ್ಯಾರ್ಥಿಗಳು ಸೂಕ್ತ ರೀತಿಯಲ್ಲಿ ಪರೀಕ್ಷೆ ಬರೆಯಲು ಅನುವು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.

ತರಭೇತಿ ನೀಡಲಾಗುವುದು:

ಇನ್ನೂ ಡಿಪ್ಲೊಮಾ ಮತ್ತು ಪದವೀಧರರಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಕಾರಿ ಅಥವಾ ಖಾಸಗಿ ವಲಯಗಳಲ್ಲಿ ಅಪ್ರೆಂಟಿಸ್‌ಷಿಪ್ ತರಭೇತಿ ನೀಡುವ ಮೂಲಕ ಉದ್ಯೋಗ ‌ನೀಡುವ ಭರವಸೆ ನೀಡಿದರು. ಇನ್ನೂ ಗಿಗ್ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಸರಿಯಾದ ಕೆಲಸದ ವಾತಾವರಣ ನಿರ್ಮಿಸುವುದು ಎನ್ನುವ ಭರವಸೆಯನ್ನು ಜನತೆಗೆ ನೀಡಿದರು.

advertisement

Leave A Reply

Your email address will not be published.