Gold: ಸಾಕಷ್ಟು ಚಿನ್ನ ಮಾಡಿಟ್ಟವರಿಗೆ ಭರ್ಜರಿ ಸಿಹಿಸುದ್ದಿ
ಚಿನ್ನ ನಮ್ಮ ಆಪತ್ಕಾಲದ ಸ್ವತ್ತು ಎಂದು ಹೇಳಲಾಗುತ್ತಿದೆ. ಕಷ್ಟ ಕಾಲಕ್ಕೆ ಈ ಸಂಪತ್ತು ಎಂದು ಬಂದರೆ ಚಿನ್ನ ಬಹಳ ಉಪಯುಕ್ತವಾಗಲಿದೆ. ಧರಿಸುವವರಿಗೆ ಧರಿಸಿದ್ದೆ ಖುಷಿ ನೀಡುವ ಜೊತೆಗೆ ನೋಡಲು ಕೂಡ ಬಹಳ ಶೋಭೆ ನೀಡಲಿದೆ. ಮಹಿಳೆಯ ಬಳಿ ಇರುವ ಒಡವೆಗೆ ಕಷ್ಟ ಕಾಲಕ್ಕೆ ಬಹಳ ಉಪಯೋಗಕಾರಿ ಆಗುವ ಜೊತೆ ಚಿನ್ನವನ್ನು ಸಂಭ್ರಮ ಸಮಾರಂಭದ ಹೊರತಾಗಿ ಮನೆಯಲ್ಲಿ ಅಥವಾ ಬ್ಯಾಂಕ್ ಲಾಕರ ನಲ್ಲಿ ಇಡುತ್ತಾರೆ ಆದರೆ ಮನೆಯಲ್ಲಿ ಅಥವಾ ಬ್ಯಾಂಕ್ ನಲ್ಲಿ ಲಾಕರ ನಲ್ಲಿ ಚಿನ್ನ (Gold) ಇಡುವ ಬದಲು ನಾವು ಹೇಳಿದ್ದ ಈ ಒಂದು ಕ್ರಮ ಅನುಸರಿಸಿದರೆ ನಿಮಗೆ ಅನೇಕ ರೀತಿಯ ಲಾಭ ಸಿಗಲಿದೆ.
ಭಾರತ ಸರಕಾರದ ಯೋಜನೆ?
ಮನೆ ಅಥವಾ ಬ್ಯಾಂಕಿನಲ್ಲಿ ಚಿನ್ನವನ್ನು ಭದ್ರವಾಗಿ ಇಡುವ ಬದಲು ಚಿನ್ನವನ್ನು ಬ್ಯಾಂಕ್ ನಲ್ಲಿ ಇಟ್ಟು ಅದರ ಮೌಲ್ಯಕ್ಕೆ ತಕ್ಕಂತೆ ಬಡ್ಡಿದರ ಪಡೆಯಬಹುದು, 2015ರಲ್ಲಿ ಚಿನ್ನ (Gold) ನಗದೀಕರಣ ಯೋಜನೆಯನ್ನು ಪರಿಚಯಿಸಲಾಗಿದ್ದು ಇದರ ಮೂಲಕ ನಿಷ್ಕ್ರಿಯ ವಾಗಿದ್ದ ಚಿನ್ನವನ್ನು ಒಟ್ಟುಗೂಡಿಸಿ ಉತ್ಪಾದಕ ಚಟುವಟಿಕೆಗೆ ಬಳಸುವುದು ಇದರ ಒಂದು ಮುಖ್ಯ ಉದ್ದೇಶವಾಗಿದೆ.
ಸ್ವರೂಪ ಹೇಗಿದೆ?
ಚಿನ್ನವನ್ನು ಯಾವುದೇ ರೀತಿಯಲ್ಲಿ ಗಟ್ಟಿ, ನಾಣ್ಯ ಹಾಗೂ ಇತರ ಆಭರಣ ಮಾಡಿದ್ದರೆ ಅದನ್ನು ನೀವು ಸುಮ್ಮನೆ ಮನೆಯಲ್ಲಿ ಇಡುವ ಬದಲು ಬ್ಯಾಂಕ್ ನಲ್ಲಿ GMS Account ಯಲ್ಲಿ ಇಟ್ಟು ನೀವು ಅದರ ಮೌಲ್ಯಕ್ಕೆ ಬಡ್ಡಿದರ ಪಡೆಯಬಹುದು. ಈ ಆವರಣಕ್ಕೆ ಹರಳು ಇದ್ದರೆ ಅದರ ತೂಕ ಪರಿಗಣಿಸಲಾಗುವುದಿಲ್ಲ ಎಂದು ಹೇಳಬಹುದು.
TAX ಇದೆಯಾ?
ಚಿನ್ನ (Gold) ಇಟ್ಟು ಹಣ ಪಡೆಯುವ GMS Account ಗೆ ನಿಮಗೆ ಯಾವುದೇ ವಿಧವಾಗಿ ಟ್ಯಾಕ್ಸ್ (Tax) ಇಲ್ಲ ಎಂದು ಹೇಳಬಹುದು. ಅಂದರೆ ನಿಮಗೆ ಆದಾಯ ತೆರಿಗೆ ವಿನಾಯಿತಿ ಇರಲಿದೆ. ನಿಮಗೆ ಲಾಕರ್ ನ ಸುರಕ್ಷತೆ ಸಿಗುವ ಜೊತೆಗೆ ಚಿನ್ನದ ಮೇಲೆ ಬಡ್ಡಿದರವು ನಿಮಗೆ ಅತೀ ಲಾಭ ನೀಡಲಿದೆ. ಲಾಕರ್ ಶುಲ್ಕವನ್ನು ಕೂಡ ಉಳಿಸುತ್ತದೆ. ಈ ಯೋಜನೆಯಲ್ಲಿ ಠೇವಣಿ ಇಡಲು ಯಾವುದೇ ಗರಿಷ್ಠ ಮಿತಿ ಕೂಡ ಇಲ್ಲ.
ಅವಧಿ ಎಷ್ಟು?
- ಚಿನ್ನ ನಗರೀಕರಣ ಯೋಜನೆ ಅಡಿಯಲ್ಲಿ ನೀವು ಮೂರು ಅವಧಿಯ ಆಧಾರದ ಮೇಲೆ ಠೇವಣಿ ಮಾಡಬಹುದಾಗಿದೆ.
- ಕಿರು ಅವಧಿ ಠೇವಣಿ – (1-3ವರ್ಷದ) ಅವಧಿಗೆ ನಿಮಗೆ ಬ್ಯಾಂಕ್ ಬಡ್ಡಿದರ ಎಷ್ಟು ಎಂದು ನಿರ್ಧಾರ ಮಾಡಲಿದೆ.
- ಮಧ್ಯಮ ಅವಧಿ ಸರಕಾರಿ ಠೇವಣಿ -(5-7ವರ್ಷ) ಅವಧಿಗೆ 2.25% ಬಡ್ಡಿದರ ನೀಡಲಾಗುತ್ತದೆ.
- ದೀರ್ಘಾವಧಿಯ ಠೇವಣಿಗೆ (2.50%) ಬಡ್ಡಿದರ ಸಿಗಲಿದೆ.
- ಈ ಎಲ್ಲ ಅಂಶದ ಜೊತೆಗೆ Collateral ಪ್ರಮಾಣ ಪತ್ರವನ್ನು ಬ್ಯಾಂಕಿನಿಂದ ಪಡೆದು ಅದರ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ.